newsfirstkannada.com

‘ಹೊಡಿಬೇಡಿ ಪ್ಲೀಸ್’​ ಎಂದ ಬಾಲಿವುಡ್‌ ನಟಿ.. ರವೀನಾ ಟಂಡನ್​​ ಮೇಲೆ ಹಲ್ಲೆ ನಡೀತಾ? ಅಸಲಿಗೆ ಆಗಿದ್ದೇನು?

Share :

Published June 2, 2024 at 9:17pm

    ಹೋಡಿಬೇಡಿ ಪ್ಲೀಸ್​​ ಎಂದು ನಡುರಸ್ತೆಯಲ್ಲೇ ಅಂಗಲಾಚಿದ ಬಾಲಿವುಡ್‌ ನಟಿ

    ಘಟನೆಯ ಅಸಲಿ ಸಂಪೂರ್ಣ ಸತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ

    ಆಕ್ಸಿಡೆಂಟ್ ನಡೆದಾಗ ರವೀನಾ ಟಂಡನ್ ಮದ್ಯಪಾನ ಮಾಡಿದ್ರಾ?

ಬಾಲಿವುಡ್​ನ ಖ್ಯಾತ ನಟಿ, ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದ ರವೀನಾ ಟಂಡನ್ ಮೇಲೆ ಅಪಘಾತದ ಆರೋಪ ಕೇಳಿ ಬಂದಿದೆ. ರವೀನಾ ಅವರ ಕಾರು ಚಾಲಕ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಅಂತ ನಟಿಯ ಮೇಲೆ ಜನರ ಗುಂಪೊಂದು ಹಲ್ಲೆ ಮಾಡಿದ್ದಾರೆ. ಅಸಲಿಗೆ ನಟಿಯ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಅಂತ ಸಿಸಿಟಿವಿ ದೃಶ್ಯದಿಂದ ಸಾಬೀತಾಗಿದೆ.

ಕನ್ನಡದ ಮಸ್ತು ಮಸ್ತು ಹುಡುಗಿ, ಕೆಜಿಎಫ್​ನ ಸಿನಿಮಾದಿಂದ ರಮೀಕಾ ಸೇನ್​ ಎಂದೇ ಜನಪ್ರಿಯರಾಗಿರುವ ಬಾಲಿವುಡ್​​ನ ಖ್ಯಾತ ನಟಿ ರವೀನಾ ಟಂಡನ್​​​ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ನಟಿಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸುತ್ತಿದೆ. ವೈರಲ್​ ಆಗುತ್ತಿರೋ ವಿಡಿಯೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ರವೀನಾ ಟಂಡನ್ ಕಾರು ಚಾಲಕನನ್ನು ಸುತ್ತುವರೆದು ತಳ್ಳಾಟ 

ಮುಂಬೈನ ಬಾಂದ್ರಾ ನಗರದಲ್ಲಿ ನಟಿ ರವೀನಾ ಟಂಡನ್ ಅವರ ಕಾರು ಚಾಲಕ ಱಷ್​​ ಡ್ರೈವಿಂಗ್​ ಮಾಡಿ ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ಇದರಿಂದ ರೊಚ್ಚಿಗೆದ್ದ ಗುಂಪೊಂದು ನಟಿ ರವೀನಾ ಟಂಡನ್​ ಹಾಗೂ ಕಾರು ಚಾಲಕನನ್ನು ಸುತ್ತುವರೆದು ತಳ್ಳಾಟ ನೂಕಾಟ ನಡೆಸಿರುವ ವಿಡಿಯೋ ಒಂದು ವೈರಲ್​​ ಆಗಿದೆ.. ವಿಡಿಯೋದಲ್ಲಿ ನಟಿ ರವೀನಾ ಟಂಡನ್​​​​​ ಹೋಡಿಬೇಡಿ ಪ್ಲೀಸ್​​ ಎಂದು ನಡುರಸ್ತೆಯಲ್ಲೇ ಅಂಗಲಾಚಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ..

ನಿನ್ನೆ ರಾತ್ರಿ ನಡೆದ ಘಟನೆ ಬಗ್ಗೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾನೆ. ರವೀನಾ ಟಂಡನ್​ ಅವರ ಕಾರು ಚಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ರಸ್ತೆಯಲ್ಲಿ ರಸ್ತೆ ನಡೆದುಕೊಂಡು ಹೋಗುತ್ತಿದ್ದ ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ನಂತರ ನಟಿಯ ಕಾರನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ ಕುಡಿದು ಅಮಲಿನಲ್ಲಿದ್ದ ನಟಿ ಕಾರಿನಿಂದ ಕೆಳಗೆ ಇಳಿದು ಏಕಾಏಕಿ ಬೈಯಲು ಶುರು ಮಾಡಿ ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: T20 World Cup; ಭಾರತ-ಪಾಕ್ ಮ್ಯಾಚ್​ ನೆನಪಿಸಿಕೊಂಡ್ರೆ ನರ್ವಸ್ ಆಗುತ್ತಿದ್ದೇನೆ- ಬಾಬರ್ ಅಜಂ

CCTVಯಲ್ಲಿ ಘಟನೆಯ ಅಸಲಿ ಸತ್ಯ ಬಯಲು

ಇನ್ನ ಘಟನೆಯ ಅಸಲಿ ಸತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರವೀನಾ ಅವರ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಎಂಬುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಾಲಕ ಕಾರನ್ನು ರಿವರ್ಸ್​ ತೆಗೆಯುವ ವೇಳೆ ರಸ್ತೆಯಲ್ಲಿದ್ದ ಮಹಿಳೆಯರು ಏಕಾಏಕಿ ಕೋಪಗೊಂಡು ಎಚ್ಚರಿಕೆಯಿಂದ ಕಾರು ಚಲಾಯಿಸಿ ಎಂದು ಚಾಲಕನಿಗೆ ಹೇಳಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಯ್ತು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಇನ್ನ ಈ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ದೂರು ಪ್ರತಿ ದೂರು ದಾಖಲಾಗಿಲ್ಲ ಅಂತ ಮುಂಬೈನ ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೇ ನಟಿಯೇ ಕುಡಿದು ಗಲಾಟೆ ಮಾಡಿದ್ದಾರೆ ಅಂತ ಸೋಶಿಯಲ್​​ ಮೀಡಿಯಾದಲ್ಲಿ ಟ್ರೋಲ್​​ ಮಾಡಲಾಗುತ್ತಿದ್ದು, ಈ ಬಗ್ಗೆ ರವೀನಾ ಅವರೇ ಮುಂದೆ ಬಂದು ಘಟನೆಯ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹೊಡಿಬೇಡಿ ಪ್ಲೀಸ್’​ ಎಂದ ಬಾಲಿವುಡ್‌ ನಟಿ.. ರವೀನಾ ಟಂಡನ್​​ ಮೇಲೆ ಹಲ್ಲೆ ನಡೀತಾ? ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/KGF_1.jpg

Load More