newsfirstkannada.com

Modi 3.0 Cabinet: 81 ಮಂದಿಗೆ ಸಿಗುತ್ತಾ ಕೇಂದ್ರ ಸಚಿವ ಸ್ಥಾನ; ಕರ್ನಾಟಕಕ್ಕೆ ಎಷ್ಟು? ಏನಿದರ ಲೆಕ್ಕಾಚಾರ?

Share :

Published June 6, 2024 at 5:52pm

Update June 6, 2024 at 5:53pm

  ಕ್ಯಾಬಿನೆಟ್, ಸ್ವತಂತ್ರ ಖಾತೆ, ರಾಜ್ಯ ಖಾತೆ ಸೇರಿದಂತೆ 81 ಮಂದಿಗೆ ಅವಕಾಶ

  ಈ ವರ್ಷ ಅಂತ್ಯಕ್ಕೆ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ

  ಟಿಡಿಪಿ, ಜೆಡಿಯು, ಶಿಂಧೆ ಶಿವಸೇನಾ, ಎಲ್‌ಜೆಪಿ ಪಕ್ಷಗಳಿಗೆ ಹೆಚ್ಚು ಸಚಿವ ಸ್ಥಾನ

ನವದೆಹಲಿ: ಸತತ 3ನೇ ಬಾರಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಲು ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ. ಇದೇ ಭಾನುವಾರ ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಮೋದಿ ಪದಗ್ರಹಣದ ಜೊತೆಗೆ ಎಷ್ಟು ಮಂದಿಗೆ ಕೇಂದ್ರ ಸಚಿವರಾಗೋ ಅವಕಾಶ ಸಿಗುತ್ತೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಸರ್ಕಾರ ರಚನೆಗೂ ಮುನ್ನ ಮೋದಿಗೆ ಟೆನ್ಷನ್‌; ದೊಡ್ಡ ಖಾತೆಗಳಿಗೆ ಮಿತ್ರರ ಡಿಮ್ಯಾಂಡ್‌; ಯಾರಿಗೆ ಯಾವ ಖಾತೆ? 

ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಒಟ್ಟು 81 ಮಂದಿ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ. ಕಳೆದ ಬಾರಿ ನರೇಂದ್ರ ಮೋದಿ ಸರ್ಕಾರದಲ್ಲಿ 29 ಕ್ಯಾಬಿನೆಟ್ ಮಂತ್ರಿಗಳು, 3 ಸ್ವತಂತ್ರ ಖಾತೆ ಸಚಿವರು, 47 ಮಂದಿ ರಾಜ್ಯ ಖಾತೆ ಸಚಿವರು ಸೇರಿ ಒಟ್ಟು 79 ಮಂದಿ ಇದ್ದರು. ಕ್ಯಾಬಿನೆಟ್, ಸ್ವತಂತ್ರ ಖಾತೆ, ರಾಜ್ಯ ಖಾತೆ ಸೇರಿದಂತೆ 81 ಮಂದಿ ಸಂಸದರಿಗೆ ಈಗ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನದ ಅವಕಾಶ ಸಿಗಲಿದೆ.

ಉತ್ತರ ಪ್ರದೇಶಕ್ಕೆ ಸಿಂಹಪಾಲು!
81 ಸಚಿವ ಸ್ಥಾನದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ನೀಡಬೇಕು ಅನ್ನೋದು ಪ್ರಧಾನಿ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳಿರುವ ರಾಜ್ಯಕ್ಕೆ ಹೆಚ್ಚಿನ ಕೇಂದ್ರ ಸಚಿವ ಸ್ಥಾನ ನೀಡಲಾಗುತ್ತೆ. 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಿಂದ ಬಿಜೆಪಿಯ 33 ಮಂದಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ಉತ್ತರ ಪ್ರದೇಶಕ್ಕೆ ಆರೇಳು ಸಚಿವ ಸ್ಥಾನ ಸಿಗಬಹುದು.

ಉತ್ತರಪ್ರದೇಶ ಹೊರೆತುಪಡಿಸಿದರೆ ಮುಂದಿನ ದಿನಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಹೆಚ್ಚಿನ ಸಚಿವ ಸ್ಥಾನ ನೀಡಲಾಗುತ್ತೆ. ಈ ವರ್ಷ ಅಂತ್ಯಕ್ಕೆ ಮಹಾರಾಷ್ಟ್ರದಲ್ಲಿ ಅಸೆಂಬ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಾನ ನೀಡುವ ಮನಸು ಮಾಡಬಹುದು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಎನ್‌ಡಿಎ ಗೆದ್ದಿರೋದೇ ಕೇವಲ 17 ಕ್ಷೇತ್ರಗಳು ಮಾತ್ರ. ಹೀಗಾಗಿ ಮಹಾರಾಷ್ಟ್ರಕ್ಕೂ 5-6 ಸಚಿವ ಸ್ಥಾನ ಮೈತ್ರಿಯ ಕಾರಣದಿಂದ ಸಿಗಬಹುದು. ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ರಾಜ್ಯಸಭಾ ಸದಸ್ಯರಿಗೆ ಸಚಿವ ಸ್ಥಾನ ನೀಡಬಹುದು.

ಬಿಜೆಪಿ ಮಿತ್ರಪಕ್ಷ ಟಿಡಿಪಿ, ಜೆಡಿಯು, ಶಿಂಧೆ ಶಿವಸೇನಾ, ಎಲ್‌ಜೆಪಿ ಪಕ್ಷಗಳ ಬೇಡಿಕೆ ಈಡೇರಿಸುವುದು ಎನ್‌ಡಿಎಗೆ ಅನಿವಾರ್ಯವಾಗಿದೆ. ಕರ್ನಾಟಕದಿಂದ 19 ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಜಾತಿ, ಪ್ರದೇಶವಾರು ಲೆಕ್ಕಾಚಾರ ಹಾಕಿ ಮೂರರಿಂದ ನಾಲ್ಕು ಸಚಿವ ಸ್ಥಾನ ಕರ್ನಾಟಕಕ್ಕೂ ಸಿಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Modi 3.0 Cabinet: 81 ಮಂದಿಗೆ ಸಿಗುತ್ತಾ ಕೇಂದ್ರ ಸಚಿವ ಸ್ಥಾನ; ಕರ್ನಾಟಕಕ್ಕೆ ಎಷ್ಟು? ಏನಿದರ ಲೆಕ್ಕಾಚಾರ?

https://newsfirstlive.com/wp-content/uploads/2024/06/Modi-NDA-Cabinet.jpg

Load More