newsfirstkannada.com

VIDEO: ವೇದಿಕೆ​ ಮೇಲೆ ಸಿಎಂ ಸಿದ್ದರಾಮಯ್ಯಗೆ ಕೌಂಟರ್ ಕೊಟ್ಟ ಮೋದಿ; ಏನಂದ್ರು..?

Share :

Published January 19, 2024 at 4:58pm

  ಸಿಲಿಕಾನ್​ ಸಿಟಿ ಬೆಂಗಳೂರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

  ಮುಖ್ಯಮಂತ್ರಿ ಜಿ ಐಸಾ ಹೋತಾ ರೆಹ್ತಾ ಹೈ ಎಂದ ಪ್ರಧಾನಿ ಮೋದಿ

  ವೇದಿಕೆ ಮೇಳೆ ಪ್ರಧಾನಿ ಮೋದಿ ಸಿಎಂಗೆ ಹೀಗೆ ಹೇಳಿದ್ದೇಕೆ ಗೊತ್ತಾ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ. ಕಲಬುರಗಿಯಿಂದ ನೇರವಾಗಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಸ್ವಾಗತ ಮಾಡಿದ್ದಾರೆ. ಆ ವೇಳೆ ಸಿಎಂ ಸಿದ್ದರಾಮಯ್ಯನವರು ನಗು ನಗುತ್ತಾ ಪ್ರಧಾನಿ ಮೋದಿ ಅವರ ಜೊತೆ ಮಾತಾಡಿದ್ದಾರೆ.

ಇದನ್ನು ಓದಿ: ’ಬಡ ಹೆಣ್ಣು ಮಕ್ಕಳನ್ನು ಪೈಲಟ್ ಮಾಡೋಣ’- ಬೆಂಗಳೂರಲ್ಲಿ ಬೋಯಿಂಗ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಫೋಟೋಗಳನ್ನು ಸಿಎಂ ಸಿದ್ದರಾಮಯ್ಯನವರು ಟ್ವಿಟರ್​ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಲ್ಲಿ ಭಾರೀ ವೈರಲ್​ ಆಗುತ್ತಿವೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್‌ ಅನ್ನ ಉದ್ಘಾಟಿಸಿದ್ದಾರೆ.

ಜೊತೆಗೆ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್‍ನ್ನ ಉದ್ಘಾಟನೆ ಮಾಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ​ ಸಿಎಂ ಸಿದ್ದರಾಮಯ್ಯಗೆ ಕೌಂಟರ್ ಕೊಟ್ಟಿದ್ದಾರೆ. ಹೌದು ಪ್ರಧಾನಿ ಮೋದಿ ಅವರು ಭಾಷಣ ಮಾಡುತ್ತಿದ್ದ ವೇಳೆ ನೆರದಿದ್ದ ಜನರು ಮೋದಿ ಮೋದಿ ಎಂದು ಕೂಗುತ್ತಿದ್ದರು. ಇದೇ ವೇಳೆ ಪ್ರಧಾನಿ ಮೋದಿ ‘‘ಮುಖ್ಯಮಂತ್ರಿ ಜಿ ಐಸಾ ಹೋತಾ ರೆಹತಾ ಹೈ’’ (ಮುಖ್ಯಮಂತ್ರಿಗಳೇ ಈ ರೀತಿ ಆಗ್ತಾ ಇರುತ್ತೆ) ಎಂದು ಹೇಳಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯನವರು ಏನ್​ ಮಾತಾಡಬೇಕು ಅಂತ ಗೊತ್ತಾಗದೆ ನಗುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವೇದಿಕೆ​ ಮೇಲೆ ಸಿಎಂ ಸಿದ್ದರಾಮಯ್ಯಗೆ ಕೌಂಟರ್ ಕೊಟ್ಟ ಮೋದಿ; ಏನಂದ್ರು..?

https://newsfirstlive.com/wp-content/uploads/2024/01/SIDDU-AND-PM.jpg

Load More