/newsfirstlive-kannada/media/post_attachments/wp-content/uploads/2024/09/MODI-USA-3.jpg)
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನಿನ್ನೆ ನ್ಯೂಯಾರ್ಕ್ನ ನಸ್ಸೌ ಕೊಲಿಜಿಯಂ (Nassau Coliseum)ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಟಿ20 ವಿಶ್ವಕಪ್ ಬಗ್ಗೆ ಪ್ರಸ್ತಾಪಿಸಿ, ಅಮೆರಿಕ ಕ್ರಿಕೆಟ್ ತಂಡವನ್ನು ಶ್ಲಾಘಿಸಿದರು.
ಕೆಲ ದಿನಗಳ ಹಿಂದೆ ಇಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ನಡೆಯಿತು. ಅಮೆರಿಕ ತಂಡ ಅದ್ಭುತವಾಗಿ ಆಡಿದ್ದು, ಆ ತಂಡದಲ್ಲಿ ಇಲ್ಲಿ ನೆಲೆಸಿರುವ ಭಾರತೀಯರ ಕೊಡುಗೆಯನ್ನು ಜಗತ್ತು ನೋಡಿದೆ ಎಂದಿದ್ದಾರೆ. ಅಮೆರಿಕ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದ ಹಲವು ಆಟಗಾರರಿದ್ದರು. ಅವರು ಪಂದ್ಯಾವಳಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ನಿತೀಶ್ ಕುಮಾರ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ಹರ್ಮೀತ್ ಸಿಂಗ್, ಕ್ಯಾಪ್ಟನ್ ಮೊನಾಂಕ್ ಪಟೇಲ್, ಜಸ್ದೀಪ್ ಸಿಂಗ್ ಮತ್ತು ಸೌರಭ್ ನೇತ್ರವಾಲ್ಕರ್ ತಂಡದಲ್ಲಿದ್ದರು.
ಇದನ್ನೂ ಓದಿ:ರೋಹಿತ್, ರಾಹುಲ್ರನ್ನೇ ಸೈಡಿಗೆ ನಿಲ್ಲಿಸಿದ ಜೈಸ್ವಾಲ್.. ಈ ಯಂಗ್ಗನ್ನ ಸ್ಪೆಷಲ್ಲೇ ಬೇರೆ..!
ಅಮೆರಿಕದಲ್ಲಿ ಟಿ-20 ವಿಶ್ವಕಪ್
ಈ ವರ್ಷ, ಮೊದಲ ಬಾರಿಗೆ ಅಮೆರಿಕದಲ್ಲಿ ಐಸಿಸಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಮೆರಿಕ, ವಿಶ್ವಕಪ್ನ ಕೆಲವು ಪಂದ್ಯಗಳನ್ನು ಆಯೋಜಿಸಿತ್ತು. ಈ ಅವಧಿಯಲ್ಲಿ ಅವರ ತಂಡ ಅದ್ಭುತ ಪ್ರದರ್ಶನ ನೀಡಿ ಸೂಪರ್-8ಗೆ ತಲುಪಿತು. ಗ್ರೂಪ್ ಹಂತದಲ್ಲಿ ಮಾಜಿ ಚಾಂಪಿಯನ್ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿತು. ಅಮೆರಿಕದ ತಂಡ ಮೊದಲು ಕೆನಡಾ ಮತ್ತು ನಂತರ ಪಾಕಿಸ್ತಾನವನ್ನು ಸೋಲಿಸಿತು. ಅದು ಭಾರತದ ವಿರುದ್ಧ ಸೋತಿತ್ತು ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇನ್ನು ಸೂಪರ್-8ರಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ.
2036ರಲ್ಲಿ ಒಲಿಂಪಿಕ್ಸ್
ಇದೇ ವೇಳೆ 2036ರಲ್ಲಿ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸುವ ಪ್ರಯತ್ನದ ಬಗ್ಗೆ ಮೋದಿ ಪುನರುಚ್ಚರಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಕೆಲವೇ ದಿನಗಳ ಹಿಂದೆ ಕೊನೆಗೊಂಡಿತು. ಶೀಘ್ರದಲ್ಲೇ ನೀವು ಭಾರತದಲ್ಲಿ ಒಲಿಂಪಿಕ್ಸ್ ವೀಕ್ಷಿಸಲು ಸಾಧ್ಯವಾಗುತ್ತದೆ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಐಪಿಎಲ್ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು. ಐಪಿಎಲ್ ವಿಶ್ವದ ಅಗ್ರ ಲೀಗ್‌ಗಳಲ್ಲಿ ಒಂದಾಗಿದೆ ಎಂದರು.
ಇದನ್ನೂ ಓದಿ:ಡೇಂಜರ್ ಝೋನ್ ತಲುಪಿದ KL ರಾಹುಲ್; ಗೇಟ್ ಪಾಸ್ ಕೊಡಲು ನಿರ್ಧರಿಸಿತಾ ಬಿಸಿಸಿಐ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್