Advertisment

ನ್ಯೂಸ್ ಫಸ್ಟ್​ ವಿಶೇಷ ವರದಿ ಮಾಡಿದ್ದ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮಾತು: ಮನ್ ಕಿ ಬಾತ್​ನಲ್ಲಿ ಉಲ್ಲೇಖ

author-image
Gopal Kulkarni
Updated On
ನ್ಯೂಸ್ ಫಸ್ಟ್​ ವಿಶೇಷ ವರದಿ ಮಾಡಿದ್ದ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮಾತು: ಮನ್ ಕಿ ಬಾತ್​ನಲ್ಲಿ ಉಲ್ಲೇಖ
Advertisment
  • ಮನ್ ಕಿ ಬಾತ್ ನಲ್ಲಿ ವಿಜಯಪುರ ಯುವಕ ಸಂತೋಷ್ ಹೆಸರು ಪ್ರಸ್ತಾಪ
  • ವಂಚಕರ ವಾಟ್ಸಾಪ್ ಕರೆಯಲ್ಲಿ ಡಿಜಿಟಲ್ ಅರೆಸ್ಟ್ ಆಗಿದ್ದ ಸಂತೋಷ್​
  • ಈ ಬಗ್ಗೆ ವಿಸ್ತೃತವಾಗಿ ವರದಿ ಬಿತ್ತರಿಸಿದ್ದ ನಿಮ್ಮ ನ್ಯೂಸ್ ಫಸ್ಟ್ ಕನ್ನಡ

ಕಳೆದ ತಿಂಗಳು ನ್ಯೂಸ್​ಫಸ್ಟ್​​ನಲ್ಲಿ ವಿಜಯಪುರದ ಸಂತೋಷ್ ಪಾಟೀಲ್ ಡಿಜಿಟಲ್ ಅರೆಸ್ಟ್ ಆದ ಬಗ್ಗೆ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್​ನಲ್ಲಿ ಈ ವಿಷಯವನ್ನು ಉಲ್ಲೇಖಿಸಿ, ಸಂತೋಷ್ ಪಾಟೀಲ್ ಅವರ ಹೆಸರು ಪ್ರಸ್ತಾಪಿಸಿ ಮಾತನಾಡಿದ್ದಾರೆ.

Advertisment

ಇದನ್ನೂ ಓದಿ:ವಿಮಾನಗಳದ್ದಾಯ್ತು, ಈಗ ಹಾಸ್ಟೇಲ್​ ಹೋಟೆಲ್​ಗಳ ಬೆನ್ನು ಬಿದ್ದು ಹುಸಿ ಬಾಂ*ಬ್ ಬೆದರಿಕೆ ಕರೆಗಳು

ಸಂತೋಷ್​ ಪಾಟೀಲ್​ಗೆ ಟ್ರೈ ಹೆಸರಿನಲ್ಲಿ ವಂಚಕರು ವಂಚಿಸಲು ಮುಂದಾಗಿದ್ದರು. ವಾಟ್ಸಾಪ್ ಕರೆಯ ಮೂಲಕ ಸಂತೋಷ್​ನನ್ನು ಡಿಜಿಟಲ್ ಅರೆಸ್ಟ್​ ಕೂಡ ಮಾಡಿದ್ದರು. ಈ ವೇಳೆ ಎಚ್ಚೆತ್ತುಕೊಂಡ ಸಂತೋಷ್ ಪಾಟೀಲ್ ವಂಚಕರು ಮಾಡಿದ್ದ ವಿಡಿಯೋ ಕರೆಯನ್ನ ವಿಡಿಯೋ ಮಾಡಿಕೊಂಡಿದ್ದ. ಈ ಬಗ್ಗೆ ವಿಸ್ತೃತವಾಗಿ ನ್ಯೂಸ್ ಫಸ್ಟ್ ಕಳೆದ ತಿಂಗಳು 17 ರಂಮದು ವರದಿ ಬಿತ್ತರಿಸಿತ್ತು.

ಇದನ್ನೂ ಓದಿ:10 ರೂಪಾಯಿ ನಾಣ್ಯದ ಬಗ್ಗೆ ದೊಡ್ಡ ಹೇಳಿಕೆ ಬಿಡುಗಡೆ ಮಾಡಿದ ಇಂಡಿಯನ್ ಬ್ಯಾಂಕ್..!

Advertisment

ವಂಚಕರ ವಿಡಿಯೋ ಮಾಡಿಕೊಂಡಿದ್ದು ದೊಡ್ಡದಾಗಿ ವೈರಲ್ ಕೂಡ ಆಗಿತ್ತು. ಈ ವೇಳೆ ಗೃಹ ಮಂತ್ರಾಲಯದಿಂದ ಸಂತೋಷ್ ಪಾಟೀಲ್​ಗೆ ಕರೆ ಕೂಡ ಬಂದಿತ್ತು. ತಮ್ಮ ಮನ್ ಕಿ ಬಾತ್​ ನಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೊಂದು ವಂಚಕರ ಜಾಲ. ಒಂದು ವ್ಯವಸ್ಥಿತ ಕ್ರಿಮಿನಲ್​ಗಳ ಗುಂಪಿನಿಂದ ನಡೆಯುತ್ತಿದೆ ಎಂದು ಹೇಳಿ ತಮ್ಮ ಮಾತಿನಲ್ಲಿ ಸಂತೋಷ್ ಪಾಟೀಲ್​ ಅವರ ಬಗ್ಗೆ ಮಾತನಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment