2 ವರ್ಷದ ಬಳಿಕ ನಿವೃತ್ತಿ ವಾಪಸ್ ಪಡೆದು ಟೆಸ್ಟ್ ಕ್ರಿಕೆಟ್ಗೆ ಮರಳಿದ ಮೊಯೀನ್
ಟೆಸ್ಟ್ ಕ್ರಿಕೆಟ್ಗೆ ಮರಳಿದ ಮೊಯೀನ್ ಅಲಿಗೆ ಐಸಿಸಿಯಿಂದ ಬಿತ್ತು ಭಾರೀ ದಂಡ
ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿಗೆ ಐಸಿಸಿ ದಂಡ ಹಾಕಲು ಕಾರಣವೇನು..?
ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ವಾಪಸ್ ಪಡೆದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ ಈಗ ಆಶಸ್ ಸರಣಿಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಆಡಿದ್ದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ ಬ್ಯಾಟಿಂಗ್ನಲ್ಲಿ ವಿಫಲರಾದ್ರೂ ಬೌಲಿಂಗ್ನಲ್ಲಿ ಮಿಂಚಿದ್ದರು. ಆದರೀಗ, ಮೊಯೀನ್ ಅಲಿಗೆ ಐಸಿಸಿ ಭಾರೀ ದಂಡ ವಿಧಿಸಿದೆ.
ಕಳೆದ 2 ವರ್ಷಗಳ ಬಳಿಕ ನಿವೃತ್ತಿ ವಾಪಸ್ ಪಡೆದು ಇಂಗ್ಲೆಂಡ್ ತಂಡಕ್ಕೆ ಮರಳಿದ ಮೊಯೀನ್ ಅಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ರು. ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿದ್ದ ಮೊಯೀನ್ ಅಲಿಗೆ ದಂಡ ಬಿದ್ದಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಾಗ ಮೊಯಿನ್ ತನ್ನ ಬೌಲಿಂಗ್ ಕೈಗೆ ಡ್ರೈಯಿಂಗ್ ಏಜೆಂಟ್ ಬಳಸಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಮೊದಲನೇ ಹಂತದ ಉಲ್ಲಂಘನೆ ಆಗಿದೆ. ಹೀಗಾಗಿ ಮೊಯೀನ್ ಅಲಿಗೆ ತನ್ನ ಒಂದು ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ಹಾಕಿದ್ದೇವೆ ಎಂದು ಐಸಿಸಿ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ