ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ಶಮಿ ವಿಶೇಷ ಸಾಧನೆ
ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ ಪಂದ್ಯ
ಕುಂಬ್ಳೆ ದಾಖಲೆ ಬ್ರೇಕ್ ಮಾಡುವ ಸನಿಹದಲ್ಲಿ ಜಸ್ಪ್ರೀತ್ ಬುಮ್ರಾ!
2023ರ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್- ಭಾರತದ ಕ್ರಿಕೆಟ್ ತಂಡಗಳು ಗೆಲ್ಲಲು ಪೈಪೋಟಿ ನಡೆಸಿವೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ವಿಶೇಷವಾದ ಸಾಧನೆ ಮಾಡಿದ್ದಾರೆ. ವರ್ಲ್ಡ್ಕಪ್ ಟೂರ್ನಿಯ ಭಾರತದ 4 ಪಂದ್ಯಗಳ ಬಳಿಕ ಕಣಕ್ಕೆ ಇಳಿದಿರುವ ಶಮಿ ಅವರು ಅನಿಲ್ ಕುಂಬ್ಳೆಯವರ ದಾಖಲೆಯಲ್ಲಿ ಸರಿಗಟ್ಟಿದ್ದಾರೆ.
ವಿಶ್ವಕಪ್ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ಗಳನ್ನು ಪಡೆದ ಭಾರತದ 3ನೇ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾದರು. ಪಂದ್ಯದ ವೇಳೆ ತಮ್ಮ 2ನೇ ಓವರ್ ಮಾಡಲು ಆಗಮಿಸಿದ ಶಮಿ ಮೊದಲ ಎಸೆತದಲ್ಲೇ ನ್ಯೂಜಿಲೆಂಡ್ ಓಪನರ್ ವಿಲ್ ಯಂಗ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ವಿಶ್ವಕಪ್ನಲ್ಲಿ 18 ಇನ್ನಿಂಗ್ಸ್ ಅನ್ನು ಆಡಿರುವ ಕನ್ನಡಿಗ ಅನಿಲ್ ಕುಂಬ್ಳೆ 31 ವಿಕೆಟ್ ಪಡೆದು ಈ ವರೆಗೆ 3ನೇ ಸ್ಥಾನದಲ್ಲಿದ್ದರು. ಆದ್ರೆ 12 ಇನ್ನಿಂಗ್ಸ್ನಲ್ಲಿ 32 ವಿಕೆಟ್ ಪಡೆಯುವ ಮೂಲಕ ಶಮಿ 3ನೇ ಸ್ಥಾನಕ್ಕೆ ಏರಿ ಕುಂಬ್ಳೆಯವರನ್ನು 4ನೇ ಸ್ಥಾನಕ್ಕೆ ತಳ್ಳಿದ್ದಾರೆ.
Mohammed Shami – an underrated player for India in the ICC events. pic.twitter.com/QNbqK6RX5U
— Mufaddal Vohra (@mufaddal_vohra) October 22, 2023
ಇನ್ನು ಜಸ್ಪ್ರೀತ್ ಬುಮ್ರಾ ಅವರು 14 ಇನ್ನಿಂಗ್ಸ್ನಲ್ಲಿ 28 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ. ಇವರು ಇನ್ನು 4 ವಿಕೆಟ್ ಪಡೆದರೆ ಕುಂಬ್ಳೆಯವರನ್ನು ಹಿಂದಿಕ್ಕಲಿದ್ದಾರೆ. ಈ ವಿಶ್ವಕಪ್ ಟೂರ್ನಿ ಮುಗಿಯುವಷ್ಟರಲ್ಲಿ ಬುಮ್ರಾ, ಕುಂಬ್ಳೆಯವರಿಗಿಂತ ಮುಂದೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಮುಂದಿನ ಪಂದ್ಯಗಳಲ್ಲಿ ತಿಳಿದು ಬರಲಿದೆ.
ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಗಳು
ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್ಗಳು
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ