2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17
ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ಜಿದ್ದಿಗೆ ಬಿದ್ದ ಟೀಮ್ಸ್!
ಗುಜರಾತ್ ಟೈಟಾನ್ಸ್ ತಂಡಕ್ಕೆ ಕೈಕೊಟ್ಟ ಸ್ಟಾರ್ ಆಟಗಾರ
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಇನ್ನೇನು ಶುರುವಾಗಲಿದೆ. ಹೇಗಾದ್ರೂ ಮಾಡಿ ಐಪಿಎಲ್ ಟ್ರೋಫಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಎಲ್ಲಾ ಫ್ರಾಂಚೈಸಿಗಳು ಭಾರೀ ತಯಾರಿ ನಡೆಸಿಕೊಂಡಿವೆ. ಈ ಮಧ್ಯೆ ಗುಜರಾತ್ ಟೈಟಾನ್ಸ್ಗೆ ಬಿಗ್ ಶಾಕ್ ಕಾದಿದೆ.
ಹೌದು, ಭಾರತ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ 2024ರ ಐಪಿಎಲ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಹೀಗಾಗಿ ಶಮಿ ಕೈಕೊಟ್ಟ ಕಾರಣ ಗುಜರಾತ್ ಟೈಟಾನ್ಸ್ಗೆ ಭಾರೀ ಹಿನ್ನಡೆಯಾಗಿದೆ. ಅನುಭವಿ ವೇಗಿ ಶಮಿ ಎಡಗಾಲಿಗೆ ಗಂಭೀರ ಗಾಯಗಳು ಆಗಿದ್ದು, ಇದಕ್ಕಾಗಿ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಆದ್ದರಿಂದ ಮುಂದಿನ ತಿಂಗಳಿನಿಂದ ನಡೆಯೋ ಐಪಿಎಲ್ನಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಬಿಸಿಸಿಐ ಅಧಿಕಾರಿ ಹೇಳಿದ್ದೇನು..?
ಶಮಿ ಎಡ ಪಾದದ ಚಿಕಿತ್ಸೆ ಪಡೆಯಲು ಜನವರಿ ಕೊನೆ ವಾರದಲ್ಲಿ ಲಂಡನ್ಗೆ ತೆರಳಿದ್ದಾರೆ. ಬಳಿಕ ಮೂರು ವಾರಗಳು ರೆಸ್ಟ್ ಪಡೆದು ರನ್ನಿಂಗ್ ಮಾಡಬಹುದು ಎಂದು ತಿಳಿಸಲಾಗಿತ್ತು. ಆದರೆ, ಇಂಜೆಕ್ಷನ್ ಕೆಲಸ ಮಾಡಲಿಲ್ಲ. ಹೀಗಾಗಿ ನಮ್ಮ ಬಳಿ ಉಳಿದಿರೋ ಏಕೈಕ ಆಯ್ಕೆ ಶಸ್ತ್ರಚಿಕಿತ್ಸೆ. ಶಸ್ತ್ರಚಿಕಿತ್ಸೆಗಾಗಿ ಮೊಹಮ್ಮದ್ ಶಮಿ ಶೀಘ್ರದಲ್ಲೇ ಯುಕೆಗೆ ತೆರಳಲಿದ್ದಾರೆ ಎಂದಿದ್ದಾರೆ ಬಿಸಿಸಿಐ ಅಧಿಕಾರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ