/newsfirstlive-kannada/media/post_attachments/wp-content/uploads/2024/05/SHAMI-ON-KL-RAHUL.jpg)
ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ತಂಡದ ನಾಯಕ ಕೆ.ಎಲ್.ರಾಹುಲ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿರೋದನ್ನು ಟೀಂ ಇಂಡಿಯಾದ ವೇಗಿ ಮೊಹ್ಮದ್ ಶಮಿ ಖಂಡಿಸಿದ್ದಾರೆ.
ಇದು ನಾಚಿಕೆಗೇಡಿನ ಸಂಗತಿ ಎಂದು ಕರೆದಿರುವ ಶಮಿ, ಆ ರೀತಿಯ ವರ್ತನೆಗಳು ಕ್ರೀಡೆಯಲ್ಲಿ ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದಿದ್ದಾರೆ. ಕೋಟಿ ಜನ ನಿಮ್ಮನ್ನು ನೋಡುತ್ತಿದ್ದಾರೆ, ನಿಮ್ಮಿಂದ ಕಲಿಯುತ್ತಿದ್ದಾರೆ. ಕ್ಯಾಮೆರಾಗಳ ಮುಂದೆ ಇಂತಹ ಘಟನೆಗಳು ನಡೆದರೆ, ಟಿವಿ ಪರದೆಯ ಮೇಲೆ ನಡೆದರೆ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮಳೆ ಬೀಳುವ ಎಚ್ಚರಿಕೆ.. ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನಗಳ ಕಾಲ ಭರ್ಜರಿ ಮಳೆ..!
/newsfirstlive-kannada/media/post_attachments/wp-content/uploads/2024/05/LSG-KL-RAHUL.jpg)
ಮುಂದುವರಿದು ಮಾತನಾಡಿರುವ ಶಮಿ.. ನಿಮಗೆ ಒಂದಷ್ಟು ಲಿಮಿಟ್ಸ್ ಇರಬೇಕು. ತಪ್ಪು ಮಾಡಿದಾಗ ಮಾತನಾಡಲು ಒಂದು ಮಾರ್ಗ ಇದೆ. ಇದು ತುಂಬಾ ತಪ್ಪು ಸಂದೇಶವನ್ನು ಕಳುಹಿಸುತ್ತದೆ. ಆಟಗಾರರಿಗೆ ಗೌರವ ಇದೆ. ಮಾಲೀಕರಾಗಿ ನೀವು ಗೌರವಾನ್ವಿತ ವ್ಯಕ್ತಿಯಾಗಿದ್ದೀರಿ ಅನ್ನೋದು ಗಮನದಲ್ಲಿಟ್ಟುಕೊಳ್ಳಬೇಕು. ಏಕಾಏಕಿ ಮಾತನಾಡುತ್ತಿರೋದು ಸರಿ ಅಲ್ಲ. ನೀವು ಅದನ್ನು ಮಾಡಬೇಕಾದರೆ, ಹಲವು ಮಾರ್ಗಗಳಿವೆ. ಡ್ರೆಸ್ಸಿಂಗ್ ರೂಮ್ ಅಥವಾ ಹೋಟೆಲ್‌ನಲ್ಲಿ ನೀವು ಅದೇ ಕೆಲಸ ಮಾಡಬಹುದಿತ್ತು. ಮೈದಾನದಲ್ಲಿ ಅದನ್ನು ಮಾಡುವ ಅಗತ್ಯವಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುವಾಗ ದುರಂತ.. ವಿದ್ಯುತ್ ಸ್ಪರ್ಷಿಸಿ ಯವಕ ಸಾವು
ಅವರೊಬ್ಬ ನಾಯಕ, ಸಾಮಾನ್ಯ ಆಟಗಾರನಲ್ಲ. ಇದು ತಂಡದ ಆಟ; ಪ್ಲಾನ್ ಯಶಸ್ವಿ ಆಗದಿದ್ದರೆ ಅದು ದೊಡ್ಡ ವಿಷಯವಲ್ಲ. ಆಟದಲ್ಲಿ ಏನು ಬೇಕಾದರೂ ಸಾಧ್ಯ. ಒಳ್ಳೆಯ ಅಥವಾ ಕೆಟ್ಟ ದಿನಗಳು ಇರಬಹುದು ಎಂದು ಅರ್ಥಮಾಡಿಕೊಂಡಿದ್ದೇನೆ. ಪ್ರತಿಯೊಬ್ಬ ಆಟಗಾರನಿಗೆ ಗೌರವವಿದೆ ಮತ್ತು ಮಾತನಾಡಲು ಒಂದು ಮಾರ್ಗವಿದೆ. ಕೋಪ ಭುಗಿಲೆದ್ದಾಗ ಪರಸ್ಪರ ಜಗಳವಾಡುವಾಗ ಕ್ಷಣಗಳು ಬಹಳಷ್ಟಿವೆ. ಇದು ಯಾವುದೇ ಕ್ರೀಡೆಯಲ್ಲಿ ನಡೆಯಬಾರದು ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us