newsfirstkannada.com

ಸಿರಾಜ್​​ಗೆ ಕಾಡಿತ್ತು ಅನಾರೋಗ್ಯ.. ಗುಜರಾತ್​ ವಿರುದ್ಧ ಕಂಬ್ಯಾಕ್ ಹಿಂದಿನ ರೋಚಕ ಸ್ಟೋರಿ..!

Share :

Published May 6, 2024 at 12:17pm

  ಮೊಹ್ಮದ್ ಸಿರಾಜ್​​ ಕಮಿಟ್​ಮೆಂಟ್​​​​​​​​​​​​​ಗೊಂದು ಸಲಾಂ

  ಸಿರಾಜ್​ ಆಡುವುದು ಅನುಮಾನವಾಗಿತ್ತು, ಕಠಿಣ ನಿರ್ಧಾರ

  ನಿಶಕ್ತ ಸಿರಾಜ್ ಕಣಕ್ಕಿಳಿದಿದ್ದು ಕೊನೆ ಕ್ಷಣದಲ್ಲಿ.. ನಿಮಗೆ ಗೊತ್ತಾ?

ಮೊನ್ನೆ ತನಕ ಮೊಹಮ್ಮದ್​​ ಸಿರಾಜ್​​​​​​​, ಆರ್​ಸಿಬಿ ಪಾಲಿನ ವಿಲನ್ ಆಗಿದ್ರು. ಆದ್ರೆ ಒಂದೇ ಒಂದು ಮ್ಯಾಚ್ ವಿನ್ನಿಂಗ್​​​​​​​​​​​​​​​ ಪರ್ಫಾಮೆನ್ಸ್​ನಿಂದ ಗೇಮ್​ ಚೇಂಜರ್​​ ಆಗಿದ್ದಾರೆ. ಮೊಹಮ್ಮದ್​ ಸಿರಾಜ್ ಕಮಿಟ್ಮೆಂಟ್​​ಗೆ ಫ್ಯಾನ್ಸ್​ ಸಲಾಂ ಅಂತಿದ್ದಾರೆ.

ಒಂದೇ ಒಂದು ಮ್ಯಾಚ್.. ಆಟಗಾರನ ಹೀರೋ ಆಗಿ ಮಾಡುತ್ತೆ. ವಿಲನ್ ಆಗಿಯೂ ಮಾಡುತ್ತೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಆರ್​ಸಿಬಿಯ ವೇಗಿ ಮೊಹಮ್ಮದ್ ಸಿರಾಜ್​. ಈ ಸೀಸನ್​ನಲ್ಲಿ ವಿಕೆಟ್ ಬೇಟೆಯಾಡಲು ಪರದಾಡಿದ್ದ ಸಿರಾಜ್, ಪವರ್ ಪ್ಲೇನಲ್ಲೂ ಪವರ್ ಲೆಸ್ ಆಗಿದ್ರು. ಮಿಯಾನ್ ದಯನೀಯ ವೈಫಲ್ಯಕ್ಕೆ ಸಾಲು ಸಾಲು ಟೀಕೆಗಳು ಕೇಳಿ ಬಂದಿದ್ವು. ಟಿ20 ವಿಶ್ವಕಪ್ ಆಯ್ಕೆ ಬಗ್ಗೆಯೇ ಅಪಸ್ವರವೂ ಕೇಳಿ ಬಂದಿತ್ತು. ಆದ್ರೀಗ ಇದಕ್ಕೆಲ್ಲಾ ಉತ್ತರ ನೀಡಿದ್ದಾರೆ. ಅಂದು ಟೀಕಿಸಿದ್ದವರೇ ಇಂದು ಜೈಕಾರ ಹಾಕ್ತಿದ್ದಾರೆ.

ಗುಜರಾತ್ ಎದುರು ಸಿರಾಜ್ ಬೀಸ್ಟ್​ ಮೂಡ್​​​​​..!
ಗುಜರಾತ್ ಎದುರು ಧಮ್ದಾರ್​ ಪರ್ಫಾಮೆನ್ಸ್ ನೀಡಿದ ಸಿರಾಜ್, ಪವರ್ ಫ್ಲೇನಲ್ಲೇ ಗುಜರಾತ್​ಗೆ ಶಾಕ್ ಮೇಲೆ ಶಾಕ್ ನೀಡಿ ಆರ್​ಸಿಬಿ ಹಿಡಿತ ಸಾಧಿಸಲು ನೆರವಾದರು. ಅಷ್ಟೇ ಅಲ್ಲ, ಆರ್​ಸಿಬಿಯ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ರು. ಇದೇ ಸಿರಾಜ್​, ಗುಜರಾತ್ ಎದುರು ಕಣಕ್ಕಿಳಿಯೋದೇ ಅನುಮಾನವಾಗಿತ್ತು.

ಇದನ್ನೂ ಓದಿ:ಸ್ಟೇರಿಂಗ್ ಕಟ್​​.. ​ಹಳ್ಳಕ್ಕೆ ಜಾರಿದ 50 ಪ್ರಯಾಣಿಕರಿದ್ದ KSRTC ಬಸ್

ಪಂದ್ಯಕ್ಕೂ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದ ಸಿರಾಜ್, ಸಂಪೂರ್ಣ ನಿಶಕ್ತರಾಗಿದ್ದರು. ಆದ್ರೆ, ಕೊನೆ ಕ್ಷಣದಲ್ಲಿ ಕಣಕ್ಕಿಳಿಯೋ ನಿರ್ಧಾರ ಮಾಡಿದ್ರು. ಇದಕ್ಕೆ ಕಾರಣ ಟಿ20 ವಿಶ್ವಕಪ್ ಟೂರ್ನಿಯೇ ಆಗಿತ್ತು. ಮುಂದಿನ ಟಿ20 ವಿಶ್ವಕಪ್​ ಪ್ರಿಪರೇಷನ್ ಸಲುವಾಗಿಯೇ ಅಂತಿಮ ಕ್ಷಣದಲ್ಲಿ ಮನಸ್ಸು ಬದಲಿಸುವ ಸಿರಾಜ್, ಅಂಗಳಕ್ಕಿಳಿದರು. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ನಿಂದ ಆರ್​ಸಿಬಿಗೆ ಗೆಲುವಿನ ಉಡುಗೊರೆ ನೀಡಿದರು. ಇದು ನಿಜಕ್ಕೂ ಮೊಹಮ್ಮದ್ ಸಿರಾಜ್​​ರ ಕಮಿಟ್ಮೆಂಟ್​ನ ಎತ್ತಿ ತೋರಿಸುತ್ತಿದೆ. ಇದಕ್ಕೆಲ್ಲಾ ಮಿಗಿಲಾಗಿ ಟಿ20 ವಿಶ್ವಕಪ್​​​ನ ಸಿರಾಜ್ ಎಷ್ಟು ಸಿರೀಯಸ್ ಆಗಿ ತೆಗೆದುಕೊಂಡಿದ್ದಾರೆ ಅನ್ನೋದು ಸಾರಿ ಸಾರಿ ಹೇಳುವಂತಿದೆ.

ಇದನ್ನೂ ಓದಿ:ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!

ಸಿರಾಜ್ ಕಮ್​​ಬ್ಯಾಕ್.. ಟೀಮ್ ಇಂಡಿಯಾಗೆ ಗುಡ್​ನ್ಯೂಸ್​
ಒಂದ್ಕಡೆ ವಿಶ್ವಕಪ್ ದೃಷ್ಟಿಯಿಂದಲೇ ಅಂಗಳಕ್ಕಿಳಿದ ಸಿರಾಜ್, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಸಿರಾಜ್​​ರ ಈ ಕಮ್​​ಬ್ಯಾಕ್​ ಆರ್​ಸಿಬಿಗೆ ಮಾತ್ರವೇ ಅಲ್ಲ. ಟೀಮ್ ಇಂಡಿಯಾಗೂ ಶುಭ ಸೂಚನೆಯೇ ಆಗಿದೆ. ಜೂನ್​ನಲ್ಲಿ ಟಿ20 ವಿಶ್ವಕಪ್​​ ಆರಂಭಗೊಳ್ಳಲಿದ್ದು, ಟೀಮ್ ಇಂಡಿಯಾದ ಪ್ರಮುಖ ಅಸ್ತ್ರ ಸಿರಾಜ್ ಆಗಿದ್ದಾರೆ. ಹೀಗಾಗಿ ಇದೇ ಲಯ ಸಿರಾಜ್, ಮುಂದುವರಿಸಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಿರಾಜ್​​ಗೆ ಕಾಡಿತ್ತು ಅನಾರೋಗ್ಯ.. ಗುಜರಾತ್​ ವಿರುದ್ಧ ಕಂಬ್ಯಾಕ್ ಹಿಂದಿನ ರೋಚಕ ಸ್ಟೋರಿ..!

https://newsfirstlive.com/wp-content/uploads/2024/05/SIRAJ-2.jpg

Load More