/newsfirstlive-kannada/media/post_attachments/wp-content/uploads/2024/10/VIRAT-KOHLI.jpg)
ಸೈಬರ್ ಸೆಕ್ಯುರಿಟಿ ಕಂಪನಿ ಕ್ಲೌಡ್‌ಸೆಕ್ (CloudSek) ಆಘಾತಕಾರಿ ವಿಚಾರವೊಂದನ್ನು ವರದಿ ಮಾಡಿದೆ. ಸೈಬರ್ ವಂಚಕರು ಪ್ರತಿ ದಿನ 1,000ಕ್ಕೂ ಹೆಚ್ಚು ನಕಲಿ ಡೊಮೇನ್‌ಗಳನ್ನು (Domain) ಕ್ರಿಯೇಟ್ ಮಾಡಿ ವಂಚಿಸಿ ಕೋಟಿ ಕೋಟಿ ಹಣ ಸಂಪಾದನೆ ಮಾಡ್ತಿದ್ದಾರೆ ಎಂದು ಹೇಳಿದೆ.
ಸಂಶಯಾಸ್ಪದ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ಮುಕೇಶ್ ಅಂಬಾನಿ ಮತ್ತು ವಿರಾಟ್ ಕೊಹ್ಲಿಯಂತಹ ಸೆಲೆಬ್ರಿಟಿಗಳ ಡೀಪ್‌ಫೇಕ್ ವೀಡಿಯೊಗಳನ್ನು ಪ್ರಚಾರದಲ್ಲಿ ಬಳಸುತ್ತಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ಮಾಡಿದ ನಕಲಿ ವೀಡಿಯೊಗಳ ಮೂಲಕ ಮೋಸದ ಬಲೆ ಬೀಸುತ್ತಿದ್ದಾರೆ ಎಂದಿದೆ.
ಏನ್ಮಾಡ್ತಿದ್ದಾರೆ..?
ವಂಚಕರು ಅನುಮಾನಾಸ್ಪದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಜನರಿಗೆ ಆಮೀಷ ಒಡ್ಡುತ್ತಾರೆ. ಇದಕ್ಕಾಗಿ ಅವರು ಡೀಪ್‌ಫೇಕ್ ವೀಡಿಯೊಗಳನ್ನು ಬಳಸುತ್ತಿದ್ದಾರೆ. ಅಲ್ಲದೇ ನಕಲಿ ಪ್ಲೇ ಸ್ಟೋರ್ ಅನ್ನು ಸಹ ರಚಿಸ್ತಿದ್ದಾರೆ. ಜನರನ್ನು ಮೋಸ ಮಾಡಲು ಪ್ರತಿದಿನ 1000ಕ್ಕೂ ಹೆಚ್ಚು ನಕಲಿ ಡೊಮೇನ್‌ಗಳನ್ನು ಕ್ರಿಯೇಟ್ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ, ಸೌದಿ ಅರೇಬಿಯಾ ಮತ್ತು ಇತರ ದೇಶಗಳಲ್ಲಿ ಆಗುತ್ತಿರುವ ಸೈಬರ್ ವಂಚನೆ ಬಗ್ಗೆ CloudSek ಅಧ್ಯಯನ ಮಾಡಿ ಹೇಳಿದೆ.
ಸೆಲೆಬ್ರಿಟಿಗಳು ವಿಡಿಯೋ ಡೀಪ್‌ಫೇಕ್!
ವರದಿಯ ಪ್ರಕಾರ.. ಮುಕೇಶ್ ಅಂಬಾನಿ, ವಿರಾಟ್ ಕೊಹ್ಲಿ, ಅನಂತ್ ಅಂಬಾನಿ, ನೀರಜ್ ಚೋಪ್ರಾ, ಕ್ರಿಸ್ಟಿಯಾನೋ ರೊನಾಲ್ಡೊ ಅವರಂತ ಜನಪ್ರಿಯ ವ್ಯಕ್ತಿಗಳ ನಕಲಿ ವಿಡಿಯೋ ಕ್ರಿಯೇಟ್ ಮಾಡ್ತಿದ್ದಾರೆ. ಈ ಸೆಲೆಬ್ರಿಟಿಗಳ ವೀಡಿಯೊಗಳು ಮೂಲಕ ಹಣದ ದಂಧೆಗೆ ಇಳಿಯುತ್ತಿದ್ದಾರೆ. ನಕಲಿ ವಿಡಿಯೋಗಳ ನಿರೂಪಣೆಯು ತುಂಬಾ ಚತುರತೆಯಿಂದ ಕೂಡಿರುತ್ತದೆ. ಕಡಿಮೆ ಹಣ ಹೂಡಿ ಹೆಚ್ಚು ಹಣ ಗಳಿಸೋದು ಹೇಗೆ ಎಂಬ ಸುಳ್ಳು ಮಾಹಿತಿ ನೀಡಿ ಸಾಮಾನ್ಯ ಜನರನ್ನು ದೋಚುತ್ತಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ:ಸೈಬರ್​ ಅಪರಾಧ ತಡೆಯುವುದು ಹೇಗೆ? BSides ಬೆಂಗಳೂರು 2024ರ ಕಾನ್ಫರೆನ್ಸ್‌ನಲ್ಲಿ ಮಹತ್ವದ ಚರ್ಚೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us