newsfirstkannada.com

ಅವಧಿಗೂ ಮೊದಲೇ ಭಾರತಕ್ಕೆ ಮುಂಗಾರು ಬಂದಾಯ್ತು.. ಈ ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ..!

Share :

Published May 30, 2024 at 1:50pm

    ಮೇ 31ರ ವೇಳೆಗೆ ಮುಂಗಾರು ಎಂಟ್ರಿ ನಿರೀಕ್ಷೆ ಮಾಡಲಾಗಿತ್ತು

    ಕೇರಳದಲ್ಲಿ ಮುಂಗಾರು ಮಳೆ ಬಿದ್ದಾಯ್ತು, ಅಲ್ಲಲ್ಲಿ ಆಪತ್ತು ತಂದಿದೆ

    ಈಶಾನ್ಯ ರಾಜ್ಯಗಳತ್ತ ಮುಂಗಾರು ಪ್ರವೇಶ, ಎಲ್ಲೆಲ್ಲಿ ಮಳೆ ಆಗ್ತಿದೆ?

ನೈಋತ್ಯ ಮಾನ್ಸೂನ್ ಅವಧಿಗೂ ಮೊದಲೇ ಕೇರಳಕ್ಕೆ ಆಗಮಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಪರಿಣಾಮ ಕೇರಳದಲ್ಲಿ ಜೋರಾದ ಗಾಳಿ ಮತ್ತು ಭಾರೀ ಮಳೆ ಬೀಳುತ್ತಿದೆ. ಇದರಿಂದ ಹಲವೆಡೆ ಮರಗಳು ಧರೆಗುರುಳಿವೆ.

ಇದಕ್ಕೂ ಮೊದಲು ಮೇ 31ಕ್ಕೆ ಮಾನ್ಸೂನ್ ಆಗಮನದ ನಿರೀಕ್ಷೆ ಮಾಡಿತ್ತು. ಮಂಗಳವಾರದಿಂದಲೇ (ಮೇ 28) ಕೇರಳದ ಹಲವು ಭಾಗಗಳಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿದೆ. ಮರಗಳು ಧರೆಗುರುಳಿವೆ.

ಇದನ್ನೂ ಓದಿ:IPL ಫೈನಲ್​​ನಲ್ಲಿ ಶಾರುಖ್ ಖಾನ್ ಕಟ್ಟಿದ್ದ ವಾಚ್​​ಗೆ ಕೋಟಿ, ಕೋಟಿ ರೂಪಾಯಿ..!

ಮುಂಗಾರು ಎಲ್ಲೆಲ್ಲಿ ಬೀಳುತ್ತಿದೆ..?
ಮಾನ್ಸೂನ್ ಚಂಡಮಾರುತವು ಈಗ ಈಶಾನ್ಯ ಭಾರತದತ್ತ ಚಲಿಸುತ್ತಿದೆ ಎಂದು IMD ಹೇಳಿದೆ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಮುಂಗಾರು ಆಗಮನವಾಗಿದೆ. ಆದಾಗ್ಯೂ, ರೆಮಲ್ ಚಂಡಮಾರುತದಿಂದ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ ಮತ್ತು ಹಲವೆಡೆ ಭೂಕುಸಿತವೂ ಸಂಭವಿಸಿದೆ. ಇದರಿಂದ ಸಾಕಷ್ಟು ನಷ್ಟ ಆಗಿದೆ.

ಇದನ್ನೂ ಓದಿ:Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವಧಿಗೂ ಮೊದಲೇ ಭಾರತಕ್ಕೆ ಮುಂಗಾರು ಬಂದಾಯ್ತು.. ಈ ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ..!

https://newsfirstlive.com/wp-content/uploads/2024/05/SHARUK-KHAN-1.jpg

Load More