Advertisment

ಮುಂಗಾರು ಮಳೆ ಬಿರುಸು.. ಇವತ್ತು ಈ ರಾಜ್ಯಗಳಲ್ಲಿ ಮೊದಲ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..!

author-image
Ganesh
Updated On
ರಾಜ್ಯದಲ್ಲಿ ಇಂದಿನಿಂದ 1 ವಾರ ಭರ್ಜರಿ ಮಳೆ.. ಎಲ್ಲೆಲ್ಲಿ? ನೀವು ಓದಲೇಬೇಕಾದ ಸ್ಟೋರಿ ಇದು!
Advertisment
  • ಜೋರಾಗ್ತಿದೆ ಮಳೆಗಾಲ.. ಇಂದು ಎಲ್ಲೆಲ್ಲಿ ಮಳೆ ಆಗಲಿದೆ ಗೊತ್ತಾ?
  • ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ರಾಜ್ಯಗಳು ಯಾವುದು?
  • ದೇಶಕ್ಕೆ ಮುಂಗಾರು ಮಳೆ ಎಂಟ್ರಿಯಾದರೂ ಈ ರಾಜ್ಯಗಳಿಗೆ ಸಿಕ್ಕಿಲ್ಲ ಮುಕ್ತಿ

ಮಳೆಯ ಎಚ್ಚರಿಕೆ..! ದೆಹಲಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಲಘು ಮಳೆ ಮತ್ತು ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ನಾಳೆಯಿಂದ ವಾಯುವ್ಯ ಭಾರತದ ಕೆಲವು ಸ್ಥಳಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

Advertisment

ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಮಹಾರಾಷ್ಟ್ರ, ದಕ್ಷಿಣ ಛತ್ತೀಸ್‌ಗಢ ಮತ್ತು ದಕ್ಷಿಣ ಒಡಿಶಾವನ್ನು ತಲುಪಬಹುದು ಎಂದು IMD ಹೇಳಿದೆ. ಮುಂಬೈನ ಹಲವು ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಮೊದಲ ಮುಂಗಾರು ಪೂರ್ವ ಮಳೆ ಸುರಿದಿದೆ. ನೈಋತ್ಯ ಮುಂಗಾರು ಜೂನ್ 15ರ ವೇಳೆಗೆ ಮಧ್ಯಪ್ರದೇಶವನ್ನು ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಇದನ್ನೂ ಓದಿ:ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?

ಉತ್ತರ ಪ್ರದೇಶದ (ಯುಪಿ) ಕೆಲವು ಭಾಗಗಳಲ್ಲಿ ಬಿಸಿಗಾಳಿಯಿಂದ ತೀವ್ರತೆ ಹಾಗೆಯೇ ಮುಂದುವರಿಯಲಿದೆ. ಜೂನ್ 08 ರಿಂದ 09 ರವರೆಗೆ ಮಧ್ಯಪ್ರದೇಶ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್‌ನ ವಿವಿಧ ಸ್ಥಳಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಭಾರತ, ಉತ್ತರ ಪ್ರದೇಶ ಮತ್ತು ಉತ್ತರ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಬಿಸಿಗಾಳಿ ಸ್ಥಿತಿ ಮುಂದುವರಿಯಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

Advertisment

ಇದನ್ನೂ ಓದಿ:ಮತ್ತೆ ಬಾರದ ಮಳೆರಾಯ.. KRS ಡ್ಯಾಮ್​​ನಲ್ಲಿ ನೀರಿನ ಹರಿವಿನಲ್ಲಿ ಏರಿಳಿತ..! ಇಂದು ಎಷ್ಟಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment