newsfirstkannada.com

ಹೆಣ್ಣುಮಕ್ಕಳೇ ಈತನ ಟಾರ್ಗೆಟ್​​.. ಅಬ್ಬಬ್ಬಾ! ಇವನಿಂದ ಮೋಸ ಹೋದವರು ಎಷ್ಟು ಗೊತ್ತಾ?

Share :

Published April 13, 2024 at 9:04pm

Update April 13, 2024 at 9:05pm

    ಅಮಾಯಕ ಯುವತಿಯರಿಂದ ಹಣ ತಗೊಂಡು ಯಾಮಾರಿಸುತ್ತಿದ್ದ ವಂಚಕ

    ಯುವತಿಯರ ಜೊತೆ ಬಹಳ ಆತ್ಮೀಯವಾಗಿ ಮಾತಾಡಿ ನಂಬಿಸುತ್ತಿದ್ದ ದೀಪಕ್

    ನಕಲಿ ಫ್ರೊಫೈಲ್ ಫೋಟೋ ಅಪ್ಲೋಡ್​ ಮಾಡಿ ಯುವತಿಯರ ಜತೆ ಚಾಟಿಂಗ್​

ಬೆಂಗಳೂರು: ಅವನು ಕಿಲಾಡಿಗಳಿಗೆ ಖತರ್ನಾಕ್ ಕಿಲಾಡಿ. ಬಣ್ಣ ಬಣ್ಣದ ಮಾತುಗಳೇ ಈತನ ಬಂಡವಾಳ. ಈತ ಮಾತಾಡೋ ಸ್ಟೈಲ್​ಗೆ ಯುವತಿಯರು ಬಿದ್ದೋಗಿದ್ದಾರಂತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಮೋಸ ಮಾಡಿದ್ದಾನೆ ಅಂತ ಗೊತ್ತಿದ್ದರೂ, ಆ ಯುವತಿಯರು ನಮಗೆ ಇವನೇ ಬೇಕು. ಇವನೇ ಬೇಕು ಅಂತಿದ್ದಾರಂತೆ. ಇವನಿಲ್ಲದೇ ಇರೋಕೆ ಕಷ್ಟ ಅಂತ ಪೊಲೀಸರ ಮುಂದೆ ಹೇಳಿಕೊಳ್ತಿದ್ದಾರಂತೆ.

ಇವ್ನು ಪಕ್ಕಾ ಪ್ಲೇ ಬಾಯ್​. ನೋಡೋಕೆ ಸ್ವಲ್ಪ ಸ್ಮಾರ್ಟ್ ಆಗಿದ್ದೀನಿ ಅನ್ನೋದನ್ನೇ ಅಸ್ತ್ರವಾಗಿಸಿಕೊಂಡಿರುವ ಈತ ಸಿಕ್ಕ ಸಿಕ್ಕ ಯುವತಿಯರಿಗೆ ವಂಚಿಸಿದ್ದಾನೆ. ಲವ್, ಮದುವೆ ಅಂತ ನಂಬಿಸಿ ಮೋಸ ಮಾಡಿದ್ದಾನೆ. ಅಷ್ಟೇ ಅಲ್ಲ ಪ್ರೀತಿ, ಮದುವೆ ಅನ್ನೋ ಹೆಸರಿನಲ್ಲಿ ಅವರಿಂದ ಹಣ ಪಡೆದು ಯಾಮಾರಿಸಿದ್ದಾನೆ. ವಂಚನೆ ಮಾಡಿದ ಆರೋಪಿ ಹೆಸರು ದೀಪಕ್. ತಾನೊಬ್ಬ ಬ್ಯಾಂಕ್ ಮ್ಯಾನೇಜರ್, ಆಫೀಸರ್, ಪ್ರೈವೆಟ್​ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೀನಿ ಅಂತೆಲ್ಲಾ ಬುರಡೆ ಬಿಟ್ಕೊಂಡು ಯುವತಿಯರನ್ನ ಟ್ರ್ಯಾಪ್ ಮಾಡ್ತಿದ್ದ. ಟ್ರ್ಯಾಪ್ ಆದ ಯುವತಿಯರ ಬಳಿ ಕಟ್ಟು ಕಥೆಗಳನ್ನ ಹೇಳಿ ಹಣ ತಗೊಳ್ತಿದ್ದ. ಹಣ ತಗೊಂಡ್ಮೇಲೆ ಫೋನ್ ನಂಬರ್ ಬದಲಿಸಿ ಎಸ್ಕೇಪ್ ಆಗ್ತಿದ್ದ. ಹೀಗೆ ದೀಪಕ್ ಸಾಕಷ್ಟು ಯುವತಿಯರಿಗೆ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಜೆಪಿ ನಗರದಲ್ಲಿ ಈ ಬಗ್ಗೆ ದೂರು ಸಹ ದಾಖಲಿಸಿದ್ದಾರಂತೆ.

ಇದನ್ನೂ ಓದಿ: VIDEO: ಆರ್​​​ಸಿಬಿ ಅಭಿಮಾನಿಗಳ ಕ್ಲಬ್​ ಸೇರಿದ 6 ತಿಂಗಳು ಮಗು; ಏನಿದು ಸ್ಟೋರಿ?

ಮ್ಯಾಟ್ರಿಮೋನಿ ಫ್ಲಾಟ್​ಫಾರಂಗಳ ಮೂಲಕ ಯುವತಿಯರಿಗೆ ಗಾಳ ಹಾಕುವ ದೀಪಕ್, ತಾನು ಬ್ಯಾಂಕ್ ಮ್ಯಾನೇಜರ್, ಚೆನ್ನೈನಲ್ಲಿ ಕೆಲಸ ಮಾಡ್ತೀನಿ, ಒಳ್ಳೆ ಸಂಬಳ ಇದೆ ಅಂತೆಲ್ಲಾ ಹೇಳಿಕೊಳ್ತಾನಂತೆ. ಅಷ್ಟೇ ಅಲ್ಲದೇ ತನ್ನ ಫ್ರೊಫೈಲ್​ನಲ್ಲಿ ತನ್ನ ಫೋಟೋಗಳನ್ನ ಹಾಕದೇ ಹ್ಯಾಂಡ್​ಸಮ್​ ಆಗಿರುವ ಬೇರೆ ಯುವಕರ ಫೋಟೋ ಹಾಕಿ ಅದು ತಾನೇ ಅಂತ ಬಿಂಬಿಸುತ್ತಿದ್ದನಂತೆ. ಫೋನ್ ನಂಬರ್​ ಕೊಟ್ಟು ಕಾಂಟೆಕ್ಟ್​ ಮಾಡುವ ಆರೋಪಿ ಬಳಿಕ ಅವರಿಂದ ಹಂತ ಹಂತವಾಗಿ ಹಣ ವಸೂಲಿ ಮಾಡ್ತಾನಂತೆ. ಆ ಕಡೆ ಯುವತಿಯರು ಸಹ ಇವನ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಕೇಳಿ ಕೇಳಿದಾಗೆಲ್ಲಾ ಹಣ ಕೊಡ್ತಿದ್ದರಂತೆ. ಹಣ ತಗೊಂಡು ಸ್ವಲ್ಪ ದಿನ ಆದ್ಮೇಲೆ ಫೋನ್ ನಂಬರ್ ಚೇಂಜ್ ಮಾಡಿ ಯಾಮಾರಿಸ್ತಿದ್ದನಂತೆ.

ನಕಲಿ ಫ್ರೊಫೈಲ್ ಹಾಕಿ, ನಕಲಿ ಫೋಟೋಗಳನ್ನ ಅಪ್ಲೋಡ್​ ಮಾಡಿ ಯುವತಿಯರ ಜೊತೆ ಸಂಪರ್ಕ ಬೆಳೆಸಿ ಆಮೇಲೆ ಅವರಿಂದ ಹಣ ಪಡೆದು ಕೈ ಕೊಡ್ತಿದ್ದ ದೀಪಕ್ ಮೇಲೆ ಸದ್ಯ ಜೆಪಿ ನಗರದಲ್ಲಿ ಕಂಪ್ಲೆಂಟ್​ ಫೈಲ್ ಆಗಿದೆ. ವಿಚಾರಣೆ ನಡೆಸಿದಾಗ ದೀಪಕ್ ಈ ರೀತಿ ಹಲವು ಯುವತಿಯರಿಗೆ ಮೋಸ ಮಾಡಿರೋದು ಗೊತ್ತಾಗಿದೆ. ತುಂಬಾ ಜನ ಹುಡುಗಿಯರಿಗೆ ಇದೇ ರೀತಿ ಮೋಸ ಮಾಡಿರುವುದು ಪತ್ತೆಯಾಗಿದೆ. ಒಬ್ಬರ ಜೊತೆ ಸಂಪರ್ಕಕ್ಕೆ ಬಂದು ಅವರಿಂದ ದುಡ್ಡು ಪಡೆದ ಕೂಡಲೇ ಆ ಸಿಮ್​ ಬಿಸಾಡಿ ಹೊಸ ಸಿಮ್ ತೆಗೆದುಕೊಳ್ಳುತ್ತಿದ್ದನಂತೆ. ಹೀಗೆ ಒಂದು ಸಮಯದಲ್ಲಿ ಎರಡೇ ದಿನದಲ್ಲಿ ಬರೋಬ್ಬರಿ 7 ಸಿಮ್ ತರಿಸಿಕೊಂಡಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ.

ಯುವತಿಯರ ಜೊತೆ ತುಂಬಾ ಆತ್ಮೀಯವಾಗಿ ಮಾತಾಡಿ ಅವರನ್ನ ನಂಬಿಸುತ್ತಿದ್ದ ದೀಪಕ್, ಇನ್ನೇನೂ ಮದುವೆ ಆಗಿಬಿಟ್ಟ ಅನ್ನೋ ಮಟ್ಟಕ್ಕೆ ಕ್ಲೋಸ್ ಆಗ್ತಿದ್ದನಂತೆ. ಹಾಗಾಗಿ ಆ ಯುವತಿಯರು ಕೂಡ ದೀಪಕ್​ನ ರಂಗಿನಾಟ ಗೊತ್ತಾಗದೇ ಮರುಳಾಗ್ತಿದ್ದರು. ಇನ್ನು ಬೇರೆಯವರ ಫ್ರೊಫೈಲ್ ಹಾಕಿ ಯುವತಿಯರ ಜೊತೆ ಮಾತಾಡ್ತಿದ್ದ ದೀಪಕ್, ದುಡ್ಡು ತಗೊಳ್ಳೋಕೆ ಅಂತ ಬಂದಾಗ ಖುದ್ದು ತಾನೇ ಬರ್ತಿದ್ದನಂತೆ. ನಾನು ಅವರ ಫ್ರೆಂಡ್, ಸಹೋದರ ಅಂತ ಹೇಳ್ಕೊಂಡು ಯಾಮಾರಿಸಿ ಹೋಗ್ತಿದ್ದನಂತೆ. ಹೀಗೆ ಜೆಪಿ ನಗರದ ಯುವತಿಯೊಂದಿಗೆ ತುಂಬಾ ಕ್ಲೋಸ್​ ಆಗಿ ಅಟ್ಯಾಚ್ ಆಗಿದ್ದ ದೀಪಕ್, ಆ ಯುವತಿಯ ಸಿಮ್ ಬಳಸುತ್ತಿದ್ದನಂತೆ. ಈಗ ಅದೇ ಆರೋಪಿಯ ಸುಳಿವು ಕೊಟ್ಟಿದ್ದು, ದೀಪಕ್ ಸಿಕ್ಕಿ ಬಿದ್ದಿದ್ದಾನೆ. ಇತನಿಂದ ಮೋಸಕ್ಕೆ ಬಲಿಯಾದ ಕೆಲವು ಯುವತಿಯರನ್ನ ಪೊಲೀಸರು ಸಂಪರ್ಕಿಸಿದ್ದು, ಮಾಹಿತಿ ಕಲೆ ಹಾಕಿದ್ದಾರಂತೆ. ದುರಂತ ಏನಪ್ಪಾ ಅಂದ್ರೆ, ಇವ್ನು ಎಷ್ಟೇ ಯಾಮಾರಿಸಿದ್ರು, ಎಷ್ಟೇ ಮೋಸ ಮಾಡಿದ್ರು ಇವನಿಂದ ಮೋಸ ಹೋದ ಕೆಲವು ಯುವತಿಯರು ನಮಗೆ ಇವ್ನೇ ಬೇಕು ಅಂತಿದ್ದಾರಂತೆ. ಇವನ ಮೇಲೆ ಕೇಸ್​ ಹಾಕಬೇಡಿ, ನಮ್ಮ ಜೊತೆ ಕಳುಹಿಸಿಕೊಡಿ ಅಂತ ರಿಕ್ವಸ್ಟ್​ ಮಾಡ್ಕೋಂಡಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಣ್ಣುಮಕ್ಕಳೇ ಈತನ ಟಾರ್ಗೆಟ್​​.. ಅಬ್ಬಬ್ಬಾ! ಇವನಿಂದ ಮೋಸ ಹೋದವರು ಎಷ್ಟು ಗೊತ್ತಾ?

https://newsfirstlive.com/wp-content/uploads/2024/04/fake-id.jpg

Load More