Advertisment

ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ದಾರುಣ ಸಾವು

author-image
Ganesh
Updated On
ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ದಾರುಣ ಸಾವು
Advertisment
  • ಅಮ್ಮನ ರಕ್ಷಣೆಗೆ ಹೋದ ಮಗಳಿಗೂ ವಿದ್ಯುತ್ ಶಾಕ್
  • ತಂಗಿಯ ಮದುವೆಗೆ ಬಂದಿದ್ದ ಮಗಳು ಪ್ರಾಣಬಿಟ್ಟಳು
  • ವಿಷಯ ತಿಳಿದು ಆಘಾತಕ್ಕೆ ಒಳಗಾದ ಕುಟುಂಬಸ್ಥರು

ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಶಿಸಿ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisment

ಆಗಿದ್ದೇನು..?
55 ವರ್ಷದ ಶೈದಾ ಅವರು ಫ್ರಿಡ್ಜ್​​​ನಲ್ಲಿಟ್ಟಿದ್ದ ಮಾವಿನ ಹಣ್ಣು ಹೊರತೆಗೆಯಲು ಹೋಗಿದ್ದರು. ಆಗ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಗಮನಿಸಿದ ಮಗಳು ಅಮ್ಮನ ರಕ್ಷಣೆಗೆ ಓಡಿ ಬಂದಿದ್ದಾಳೆ. ಈ ವೇಳೆ ಆಕೆಯೂ ವಿದ್ಯುತ್ ಶಾಕ್ ಹೊಡೆದಿದ್ದು, ಮಗಳು ಅಫ್ಸನಾ ಕಾತೂನ್ ಕೂಡ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಇದನ್ನೂ ಓದಿ:ವಿಶ್ವಕಪ್ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಜೋಡೆತ್ತುಗಳ ಬಾಂಡಿಂಗ್.. ಹೃದಯ ಗೆದ್ದ ಸ್ನೇಹಿತರು ಇವರು..!

publive-image

ಮಾಹಿತಿಗಳ ಪ್ರಕಾರ, ಮೃತ ವ್ಯಕ್ತಿಯ ಮನೆಯಲ್ಲಿ ಮದುವೆ ಸಮಾರಂಭ ಇತ್ತು. ತಂಗಿಯ ಮದುವೆಯಲ್ಲಿ ಭಾಗಿಯಾಗಲು ತಾಯಿ ಮನೆಗೆ ಅಫ್ಸನಾ ಬಂದಿದ್ದಳು. ಬುಧವಾರ ನಡೆದ ಘಟನೆಯಲ್ಲಿ ತಾಯಿ ಮಗಳು ಸಾವನ್ನಪ್ಪಿದ್ದಾರೆ.

Advertisment

ವಿಷಯ ತಿಳಿದು ಪೊಲೀಸರು ಮನೆಗೆ ಭೇಟಿ ನೀಡಿದ್ದರು. ಆದರೆ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರು ಪಂಚನಾಮೆ ನಡೆಸಿ ತಾಯಿ ಹಾಗೂ ಮಗಳ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ರುದ್ರಾಪುರ ಪಂಚಾಯತ್ ವ್ಯಾಪ್ತಿಯ ಆಜಾದ್ ನಗರ ವಾರ್ಡ್​ನ ನಿವಾಸಿ ಇಸ್ತಾಕರ್​ ಅನ್ಸಾರಿ ಪಾನ್ ಮಸಾಲ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಅವರಿಗೆ ಮೂವರು ಹೆಣ್ಮಕ್ಕಳು. ರುಕ್ಸನಾ ಖಾತೂನ್, ಅಫ್ಸಾನಾ ಖಾತೂನ್, ಶಕೀನಾ ಖಾತೂನ್ ಮತ್ತು ಮಗ ಸಲೀಂ ಎಂಬ ಮಕ್ಕಳಿದ್ದಾರೆ. ಮೇ ತಿಂಗಳಲ್ಲಿ ಕಿರಿಯ ಮಗಳು ಶಕೀನಾ ಮದುವೆ ಇತ್ತು. ಈ ಮದುವೆಗೆ ಬಂದಿದ್ದ ಅಫ್ಸನಾ ಖಾನ್ ತವರು ಮನೆಯಲ್ಲೇ ಇದ್ದಳು ಎನ್ನಲಾಗಿದೆ.

ಇದನ್ನೂ ಓದಿ:ಪ್ರಿಯತಮೆ ಮೇಲೆ ಗುಂಡಿನ ಸುರಿಮಳೆಗೈದ ಪ್ರಿಯಕರ.. ಬಳಿಕ ತಾನೂ ಸಾವನ್ನಪ್ಪಿದ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment