newsfirstkannada.com

ತಾಯಿ, ಮಗನ ಮೂಟೆ ಕಟ್ಟಿ ಬಾವಿಗೆ ಬಿಸಾಕಿದ್ದ ಕೇಸ್‌; ಪೊಲೀಸ್‌ ಬಲೆಗೆ ಬಿದ್ದ ಕೊಲೆಗಾರ ಹೇಳಿದ್ದೇನು?

Share :

Published March 24, 2024 at 4:15pm

Update March 24, 2024 at 4:18pm

    ಒಂದು ವರ್ಷದ ಹಿಂದಿನ ಮರ್ಡರ್ ಕೇಸ್ ಭೇದಿಸಿದ ವಿಜಯಪುರ ಪೊಲೀಸ್‌

    ಆರೋಪಿ ಸಾಗರ್​ಗೆ ಫೇಸ್​ಬುಕ್​​ನಿಂದ ಮೈಸೂರಿನ ಶೃತಿ ಪರಿಚಯ ಆಗಿತ್ತು

    ತಿಕೋಟಾ ಪೊಲೀಸರಿಂದ ಪರಿಶೀಲನೆ ವೇಳೆ ತಾಯಿ, ಮಗನ ಶವ ಪತ್ತೆ!

ವಿಜಯಪುರ: ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ ಮಗನ ಡಬಲ್ ಮರ್ಡರ್ ಕೇಸ್​ಗೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶೃತಿ ಹಾಗೂ ರೋಹನ್ (13) ಹತ್ಯೆಯಾದ ದುರ್ದೈವಿಗಳು. ಮೃತ ತಾಯಿ ಮಗ ಇಬ್ಬರು ಮೈಸೂರು ಮೂಲದವರು. ಈ ಕೊಲೆ ಕೇಸ್​ ಸಂಬಂಧ ವಿಜಯಪುರದ ಸಾಗರ್ ನಾಯಕ್ ಎಂಬಾತನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಆರೋಪಿ ಸಾಗರ್​ ಅತಿ ಕ್ರೂರವಾಗಿ ಕೊಲೆ ಮಾಡಿ ತಾಯಿ ಹಾಗೂ ಮಗನ ಮೃತದೇಹವನ್ನು ಬ್ಯಾಗ್‌ವೊಂದರಲ್ಲಿ ತುಂಬಿ ಬಾವಿಗೆ ಬಿಸಾಕಿ ಅಲ್ಲಿಂದ ಎಸ್ಕೇಪ್​ ಆಗಿದ್ದ. ಕಳೆದ 2023ರ ಮಾರ್ಚ್ 13ರಂದು ತಾಯಿ ಹಾಗೂ ಮಗನ ಬರ್ಬರ ಕೊಲೆ ನಡೆದಿತ್ತು.

ಅಸಲಿಗೆ ಈ ಕೊಲೆ ನಡೆದಿದ್ದೇಕೆ?

ಸಾಗರ್ ಮೈಸೂರಿನಲ್ಲಿದ್ದಾಗ ಫೇಸ್​ಬುಕ್​ ಮೂಲಕ ಶೃತಿ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಮೃತ ಶೃತಿಗೆ 13 ವರ್ಷದ ಮಗ ಕೂಡ ಇದ್ದ. ಆದರೆ ದಿನ ಕಳೆದಂತೆ ಸಾಗರ್​ಗೆ ಶೃತಿಯ ನಡತೆ ಮೇಲೆ ಸಂಶಯ ಹುಟ್ಟಿ ಕೊಂಡಿತ್ತಂತೆ. ಹೀಗಾಗಿ ಆರೋಪಿ ಆಕೆಯನ್ನು ಬಿಟ್ಟು ವಿಜಯಪುರಕ್ಕೆ ಬಂದಿದ್ದ. ಆದ್ರೆ ಮಾರ್ಚ್ 13 2023ರಂದು ಲಗೇಜ್ ಸಮೇತ ಮಗನ ಜೊತೆ ಶೃತಿ ಸಾಗರ್​ನನ್ನೇ ಹುಡುಕಿಕೊಂಡು ವಿಜಯಪುರಕ್ಕೆ ಬಂದಿದ್ದಳು. ಈ ವಿಚಾರ ಸಾಗರ್​ಗೆ ಗೊತ್ತಾಗುತ್ತಿದ್ದಂತೆ ಸಿಂದಗಿ ರಸ್ತೆಯ ಪೋರ್ ವೇ ಲಾಡ್ಜ್‌ವೊಂದರಲ್ಲಿ ಶೃತಿ ಹಾಗೂ ಆಕೆಯ ಮಗನನ್ನು ಅಲ್ಲೇ ಉಳಿದುಕೊಳ್ಳಲು ಹೇಳಿದ್ದ.‌ ಇದೇ ವೇಳೆ ಲಾಡ್ಜ್​​ನಲ್ಲಿ ಶೃತಿ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ಬಳಿಕ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಆಗ ಈ ಕೊಲೆಗೆ ಮಗ ಸಾಕ್ಷಿಯಾಗ್ತಾನೆ ಅಂತಾ ರೋಹಿತ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಎರಡು ಡೆಡ್ ಬಾಡಿಗಳನ್ನ ಆಕೆ ಮೈಸೂರಿನಿಂದ ತಂದಿದ್ದ ಬ್ಯಾಗ್‌ನಲ್ಲಿ ತುಂಬಿಕೊಂಡು ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದ ಬಾವಿಗೆ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಇದನ್ನು ಓದಿ: ಇಡಿ ವಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್; ಮಾರ್ಚ್​ 31ಕ್ಕೆ ಮಹಾ ಱಲಿ ಘೋಷಿಸಿದ AAP, ಕಾಂಗ್ರೆಸ್

ಇದಾದ ಒಂದು ವಾರದ ಬಳಿಕ ಬಾವಿಯಲ್ಲಿ ತೇಲಿ ಬಂದ ಬ್ಯಾಗ್‌ಗಳು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ತಾಯಿ ಮಗನ ಶವ ಪತ್ತೆಯಾಗಿವೆ. ಆದ್ರೆ ಕೊಳೆತ ಶವಗಳ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಕ್ಲೂ ಇಲ್ಲದ ಪ್ರಕರಣ ಹಾಗೇ ಉಳಿದಿತ್ತು‌. ಕಳೆದ ಫೆಬ್ರವರಿಯಲ್ಲಿ ಶೃತಿ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು. ಮೈಸೂರು ಮಿಸ್ಸಿಂಗ್ ಕೇಸ್ ಹಾಗೂ ವಿಜಯಪುರದಲ್ಲಿ ನಡೆದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಸಾಮ್ಯತೆಯ ಬಳಿಕ ಈ ಕೇಸ್​ ಕೈಗೆತ್ತಿಕೊಂಡ ಪೊಲೀಸರು ಪತ್ತೆ ಹಚ್ಚಿ ಆಕೆಯ ಪ್ರಿಯಕರ ಸಾಗರ್​ಅ‌ನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ, ಮಗನ ಮೂಟೆ ಕಟ್ಟಿ ಬಾವಿಗೆ ಬಿಸಾಕಿದ್ದ ಕೇಸ್‌; ಪೊಲೀಸ್‌ ಬಲೆಗೆ ಬಿದ್ದ ಕೊಲೆಗಾರ ಹೇಳಿದ್ದೇನು?

https://newsfirstlive.com/wp-content/uploads/2024/03/death-case-1.jpg

Load More