/newsfirstlive-kannada/media/post_attachments/wp-content/uploads/2024/07/Bhagyamma.jpg)
ಮೈಸೂರು: ಪುತ್ರನ ಅಗಲಿಕೆಯ ನೋವು ತಾಳಲಾರದೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಕೂರ್ಗಳ್ಳಿಯಲ್ಲಿ ನಡೆದಿದೆ. ಭಾಗ್ಯಮ್ಮ (46) ಆತ್ಮಹತ್ಯೆ ಮಾಡಿಕೊಂಡ ತಾಯಿ.
ಭಾಗ್ಯಮ್ಮ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡ ದುಃಖದಲ್ಲಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಅಳಿಯನಿಂದಲೇ ಕೊಲೆ
ಭಾಗ್ಯಮ್ಮ ಪುತ್ರ ಅಭಿಷೇಕ್​ ಅಳಿಯನಿಂದಲೇ ಕೊಲೆಯಾಗಿದ್ದನು. ಅಳಿಯ ರವಿಚಂದ್ರನ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದನು. ತಂಗಿಗೆ ಹಲ್ಲೆ ಹಿನ್ನಲೆ ಜಗಳ ಬಿಡಿಸಲು ಅಭಿಷೇಕ್ ಹೋಗಿದ್ದನು. ಈ ವೇಳೆ ಬಾವ ರವಿಚಂದ್ರನ್ ಅಳಿಯನಿಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ.
ಜೂನ್ 9 ರಂದು ನಡೆದಿದ್ದ ಅಭಿಷೇಕ್ ಕೊಲೆ ನಡೆದಿದೆ. ಕುವೆಂಪುನಗರದಲ್ಲಿ ಅಭಿಷೇಕ್​ ಹತ್ಯೆ ನಡೆದಿತ್ತು. ಅಂದಿನಿಂದ ಮಗನ ನೆನಪಲ್ಲಿಯೇ ತಾಯಿ ಭಾಗ್ಯಮ್ಮ ಖಿನ್ನತೆಗೆ ಜಾರಿದ್ದರು.
ಇದನ್ನೂ ಓದಿ: ಬೊಲೆರೊ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ.. ಇಬ್ಬರು ಮಕ್ಕಳು ಸೇರಿ 9 ಜನರು ಸಾವು
ಆದರೀಗ ಮಗನ ಅಗಲಿಕೆ ನೋವು ತಾಳಲಾರದೆ ನಿನ್ನೆ ಮನೆಯಲ್ಲಿಯೇ ಅಭಿಷೇಕ್ ನೇಣಿಗೆ ಶರನಾಗಿದ್ದಾನೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ