Advertisment

ಉತ್ತರ ಕನ್ನಡ: ತಾಯಿ ನಾಲೆಗೆ ಎಸೆದ ಮಗುವಿನ ಮೃತದೇಹ ಪತ್ತೆ.. ಮೊಸಳೆ ಬಾಯಿಯಿಂದ ಹೊರತೆಗೆದ ಸಿಬ್ಬಂದಿ

author-image
AS Harshith
Updated On
ಉತ್ತರ ಕನ್ನಡ: ತಾಯಿ ನಾಲೆಗೆ ಎಸೆದ ಮಗುವಿನ ಮೃತದೇಹ ಪತ್ತೆ.. ಮೊಸಳೆ ಬಾಯಿಯಿಂದ ಹೊರತೆಗೆದ ಸಿಬ್ಬಂದಿ
Advertisment
  • ಮೊಸಳೆಯಿರುವ ನಾಲೆಗೆ ಹೆತ್ತ ಮಗುವನ್ನು ಬಿಸಾಕಿದ ತಾಯಿ
  • ಗಂಡನ ಜೊತೆಗಿನ ಜಗಳಕ್ಕೆ ಅನ್ಯಾಯವಾಗಿ ಬಲಿಯಾದ ಮಗು
  • ಮಗುವನ್ನು ಬಾಯಲ್ಲಿಟ್ಟುಕೊಂಡು ಕಾಣಿಸಿಕೊಂಡಿದ್ದ ಮೊಸಳೆ

ದಾಂಡೇಲಿ: ಗಂಡನ ಜೊತೆಗಿನ ಜಗಳದಿಂದ ಸಿಟ್ಟಿಗೆದ್ದ ಹೆಂಡತಿ ತಾನು ಹೆತ್ತ ಮಗುವನ್ನ ನಾಲೆಗೆ ಎಸೆದ ಘಟನೆ ಹಾಲಮಡ್ಡಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದ್ದು, ಮಗುವಿನ ಶೋಧ ಕಾರ್ಯ ರಾತ್ರಿಯಿಂದ ಮುಂದುವರೆದಿತ್ತು. ಅದರೆ ಎಲ್ಲೂ ಮಗು ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮಗುವಿನ ಮೃತದೇಹ ಸಿಕ್ಕಿದೆ. ಮೊಸಳೆಯ ಬಾಯಿಯಲ್ಲಿ ಕಾಣಿಸಿಕೊಂಡ ಮಗುವಿನ ಮೃತದೇಹವನ್ನು ಅಗ್ನಿಶಾಮಕ ದಳದವರು ಹೊರತೆಗೆದಿದ್ದಾರೆ.

Advertisment

ಏನಿದು ಘಟನೆ?

ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ಪರಸ್ಪರ ಜಗಳ‌ ಮಾಡಿಕೊಂಡಿದ್ದಾರೆ. ಜಗಳದಿಂದ ಮಾನಸಿಕವಾಗಿ‌ ನೊಂದ ಸಾವಿತ್ರಿ 6 ವರ್ಷದ ಮಾತು ಬಾರದ ಮಗು ವಿನೋದ್​​ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲೆಗೆ ಎಸೆದು ಬಂದಿದ್ದಾಳೆ.

ಕುಡುಕ ಗಂಡನ ಜೊತೆ ಜಗಳ

ಗಂಡ ರವಿಕುಮಾರ್ ದಿನನಿತ್ಯ ಕುಡಿಯುತ್ತಿದ್ದು ಹೆಂಡತಿ ಬಳಿ ಜಗಳ ಮಾಡುತ್ತಿದ್ದನು. ನಿನ್ನೆ ಕೂಡ ಸಾವಿತ್ರಿ ಬಳಿ ಜಗಳ ಮಾಡಿದ್ದಾನೆ. ಪ್ರತಿ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದನಂತೆ. ನಿನ್ನೆ ಜಗಳ ತಾರಕಕ್ಕೇರಿದ್ದು ಕೋಪದಲ್ಲಿ ಮಗುವನ್ನ ತಾಯಿ ನಾಲೆಗೆ ಎಸೆದು ಬಂದಿದ್ದಾಳೆ.

ಸ್ವಲ್ಪ ಹೊತ್ತಿನ‌ ಬಳಿಕ ಈ ಘಟನೆಯಿಂದ ಮಾನಸಿಕವಾಗಿ ಅಘಾತಗೊಂಡ ಸಾವಿತ್ರಿ ಮಗುವನ್ನು ಎಸೆದು ಬಂದಿರುವುದನ್ನು ಸ್ಥಳೀಯರಿಗೆ ತಿಳಿಸಿದ್ದಾಳೆ. ತಕ್ಷಣವೇ ಸ್ಥಳೀಯರು ನಾಲೆಯ ಹತ್ತಿರ ಬಂದು ಮಗುವಿನ ಹುಡುಕಾಟವನ್ನು ನಡೆಸಿದ್ದಾರೆ. ಕೂಡಲೇ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.

Advertisment

ಇದನ್ನೂ ಓದಿ: ಹುಡುಗರೊಂದಿಗೆ ಮೊಬೈಲ್​ನಲ್ಲಿ ಮಾತನಾಡಬೇಡ ಎಂದ ಅಣ್ಣ.. ಕೊಡಲಿಯಿಂದ ಕೊಚ್ಚಿ ಹತ್ಯೆಗೈದ 14 ವರ್ಷದ ತಂಗಿ

ದಾಂಡೇಲಿಯ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಶೋಧ ಕಾರ್ಯಾಚರಣೆ ನಿನ್ನೆಯಿಂದ ಪ್ರಾರಂಭವಾಗಿ ಇಂದಿನವರೆಗೆ ಮುಂದುವರೆಸಿದ್ದರು.

ಮೊಸಳೆ ಬಾಯಲ್ಲಿನ ಮಗುವಿನ ಮೃತದೇಹ

ನಾಲೆಗೆ ಎಸೆಯಲಾಗಿದ್ದ ಮಗುವನ್ನ ಮೊಸಳೆಯೊಂದು ಬಾಯಲ್ಲಿಟ್ಟುಕೊಂಡು ನದಿಯಲ್ಲಿ ತಿರುಗಾಡುತ್ತಿರುವ ದೃಶ್ಯ ಕಂಡಿದೆ. ಮೊಸಳೆಯಿಂದ ಮಗುವನ್ನು ಬಿಡಿಸಿಕೊಂಡು ಬರುವ ಪ್ರಯತ್ನ ನಡೆದಿದೆ. ಕೊನೆಗೂ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತಿಯಲ್ಲಿ ಮೃತದೇಹವನ್ನು ಹೊರತೆಗೆಯಲಾಗಿದೆ. ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

Advertisment

ಒಟ್ಟಿನಲ್ಲಿ ಗಂಡ ಹೆಂಡತಿಯ ಜಗಳದಲ್ಲಿ ಮುಂದೆ ಬಾಳಿ ಬದುಕಬೇಕಾಗಿದ್ದ ಮಗುವಿನ ಜೀವಕ್ಕೆ ಕಂಟಕ ತಂದಿರುವ ಅಮಾನವೀಯ ಮತ್ತು ಅಘಾತಕಾರಿ ಘಟನೆ‌ ನಡೆದಿರುವುದು ದುರ್ದೈವವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment