Advertisment

ಮೈಸೂರು ಪಾಕ್​ ಗೊತ್ತಿದೆ .. ಮೋತಿ ಪಾಕ್​ ಗೊತ್ತಿದ್ಯಾ? ಮನೆಯಲ್ಲೇ ಮಾಡಬಹುದು ಕಣ್ರಿ

author-image
AS Harshith
Updated On
ಮೈಸೂರು ಪಾಕ್​ ಗೊತ್ತಿದೆ .. ಮೋತಿ ಪಾಕ್​ ಗೊತ್ತಿದ್ಯಾ? ಮನೆಯಲ್ಲೇ ಮಾಡಬಹುದು ಕಣ್ರಿ
Advertisment
  • ಮೈಸೂರು ಪಾಕ್​ನಂತೆ ಮೋತಿ ಪಾಕ್​​ ತಯಾರಿಸಿ
  • ಸುಲಭ ವಿಧಾನದ ಮೂಲಕ ಮನೆಯಲ್ಲೇ ಮೋತಿ ಪಾಕ್​ ಮಾಡಿ
  • ರುಚಿಯಾದ ಮೋತಿ ಪಾಕ್​ ಮಾಡಲು ಬೇಕಾದ ಸಾಮಾಗ್ರಿಗಳು

ಕನ್ನಡಿಗರಿಗೆ ಮೈಸೂರು ಪಾಕ್​ ಬಗ್ಗೆ ಗೊತ್ತಿದೆ. ಮೈಸೂರಿನಲ್ಲೇ ತಯಾರಾದ ಈ ಸ್ವೀಟ್​​ಗೆ ಜಾಗತಿಕ ಮನ್ನಣೆಯೂ ಸಿಕ್ಕಿದೆ. ಆದರೆ ಅದರಂತೆಯೇ ಇರುವ ಮೋತಿ ಪಾಕ್​ ಬಗ್ಗೆ ಗೊತ್ತಾ?. ಮನೆಯಲ್ಲಿಯೇ ಮೋತಿ ಪಾಕ್​ ತಯಾರಿಸಬಹುದು.

Advertisment

ಮೋತಿ ಪಾಕ್​ ಮಾಡುವ ಸುಲಭ ವಿದಾನದ ಬಗ್ಗೆ ಮಾಹಿತಿ ಇಲ್ಲಿದೆ. ಆರೋಗ್ಯ ಮತ್ತು ರುಚಿಕರವಾಗಿ ತಮಗೆ ಬೇಕಾದ ಎಣ್ಣೆಯಲ್ಲೇ ಮೋತಿ ಪಾಕ್​ ತಯಾರಿಸಬಹುದಾಗಿದೆ.

ಮೋತಿ ಪಾಕ್​ ಮಾಡಲು ಬೇಕಾಗುವ ಸಾಮಾಗ್ರಿಗಳು?

ಕಡಲೆ ಹಿಟ್ಟು- 2 ಕಪ್
ನೀರು - 1 ಕಪ್ ಅಥವಾ ಅಗತ್ಯಕ್ಕೆತಕ್ಕಂತೆ
ಸಕ್ಕರೆ- 2 ಕಪ್
ನೀರು - 1 ಕಪ್
ಖೋಯಾ- 1 ಕಪ್
ಏಲಕ್ಕಿ ಪುಡಿ - 1 ಚಮಚ
ಕೇಸರಿ- 1 ಪಿಂಚ್
ತುಪ್ಪ - 1/4 ಕಪ್
ಗೋಡಂಬಿ - 3 ಚಮಚ

ಮೊದಲಿಗೆ ಒಂದು ಬೌಲ್​ನಲ್ಲಿ 2 ಕಪ್​ ಕಡಲೆ ಹಿಟ್ಟು ಹಾಕಿ. ಬಳಿಕ ಅದಕ್ಕೆ ನೀರು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ನಂತರ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಸುರಿದು ಬೆಚ್ಚಗಾಗಲು ಬಿಡಿ. ಬಳಿಕ ಬೂಂದಿ ತಯಾರಿಸಿದಂತೆ ಖಾದ ಎಣ್ಣೆಯಲ್ಲಿ ಕಡಲೆ ಹಿಟ್ಟುನ್ನು ಬಿಡಿ. 30 /40 ಸೆಕೆಂಡುಗಳ ಬಳಿಕ ಅದನ್ನು ಎಣ್ಣೆಯಿಂದ ಮೇಲೆತ್ತಿ ಪಾತ್ರೆಯೊಂದಕ್ಕೆ ಹಾಕಿಡಿ.

Advertisment

ಇದನ್ನೂ ಓದಿ: ತಿರುಪತಿ ಲಡ್ಡು ಅಶುದ್ಧಿ; ಇಂದಿನಿಂದ 3 ದಿನಗಳ ಕಾಲ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಾಶಾಂತಿ

ಮತ್ತೊಂದು ಬಾಣಲೆ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಕಿ. ಬಿಸಿಯಾಗುತ್ತಿದ್ದಂತೆ ಸಕ್ಕರೆ ಕರಗುತ್ತದೆ. ಅದಕ್ಕೆ ಕೊಂಚ ನೀರನ್ನು ಸೇರಿಸಿ. ಸಕ್ಕರೆ ಪಾಕವಾದಂತೆ ಅದಕ್ಕೆ ಖೋಯಾ (ಹಾಲಿನಿಂದ ತಯಾರಿಸಿದ ಘನ ವಸ್ತು) ಸೇರಿಸಿ.

ಮತ್ತೊಂದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿಟ್ಟ ಡ್ರೈಫ್ರುಟ್ಸ್ ಮತ್ತು ತುಪ್ಪ ಬೆರೆಸಿರಿ. ಬಳಿಕ ಅದನ್ನು ಸಕ್ಕರೆ ಮತ್ತು ಖೋಯಾ​ ಇರುವ ಪಾತ್ರಕ್ಕೆ ಹಾಕಿ. ಜೊತೆಗೆ ಕೇಸರಿ ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ.

Advertisment

ಇದನ್ನೂ ಓದಿ: ಬಾ ಗುರು ಕಾಫಿ ಕುಡಿ.. ಪ್ರತಿ ದಿನ 3 ಕಪ್ coffee ಕುಡಿದ್ರೆ ನಿಮಗೆ ಬರೋಬ್ಬರಿ 5 ಲಾಭ; ತಪ್ಪದೇ ಈ ಸ್ಟೋರಿ ಓದಿ!

ಇಷ್ಟಾದ ಬಳಿಕ ಅದಕ್ಕೆ ಪಾತ್ರಕ್ಕೆ ಬೂಂದಿಯನ್ನು ಸುರಿಯಿರಿ. ಚೆನ್ನಾಗಿ ಮಿಶ್ರಣ ಮಾಡಿರಿ. ಬೇಕಿದ್ದರೆ ತುಪ್ಪವನ್ನು ಹಾಕಿರಿ. ಬಳಿಕ ಪಾತ್ರವೊಂದಕ್ಕೆ ಹಾಕಿ ಬೇಕಾದ ಆಕಾರ ಮಾಡಿರಿ. ನಂತರ ಸವಿಯಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment