ನಿತ್ಯ ಮೂರು ಕಪ್ ಕಾಫಿ ಹೀರುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ?
ಕಾಫಿಯಲ್ಲಿದೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ
ಮನಸ್ಸು ಪ್ರಫುಲ್ಲವಾಗಿರಿಸಲು ಕೂಡ ನೀವು ನಿತ್ಯ ಕಾಫಿಯನ್ನು ಕುಡಿಯಬೇಕು
ದಿನಕ್ಕೇ ಮೂರೇ ಮೂರು ಕಪ್ ಕಾಫಿ ಸೇವಿಸುವುದರಿಂದ ಲಾಭಗಳು ಎಷ್ಟು ಇವೆ ಗೊತ್ತಾ? ನೀವು ಟೈಪ್ 2 ಡಯಾಬಿಟಿಸ್ ಕಾಯಿಲೆಯಿಂದ, ಪಾರ್ಶ್ವವಾಯು ಕಾಯಿಲೆಯಿಂದ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯಬಹುದು ಅಂತ ಒಂದು ಅಧ್ಯಯನ ಹೇಳುತ್ತಿದೆ.
ಇದನ್ನೂ ಓದಿ: ಮಧ್ಯಂತರ ಉಪವಾಸದಲ್ಲಿ ಈ ಪಾನೀಯಗಳನ್ನು ಸೇವಿಸಿ, ತೂಕ ಇಳಿಸಲು ಈ 8 ಡ್ರಿಂಕ್ ರಾಮಬಾಣ
ಜರ್ನಲ್ ಆಫ್ ಕ್ಲಿನಿಕಲ್ ಎಂಡೊಕ್ರಿನೊಲಾಜಿ ಅಂಡ್ ಮೆಟಾಬೊಲಿಸಂ ( Journal of Clinical Endocrinology & meabolism) ನಡೆಸಿರುವ ಅಧ್ಯಯನ ಪ್ರಕಾರ ನಿತ್ಯ ಮೂರು ಕಪ್ ಕಾಫಿ ಕುಡಿಯುವುದರಿಂದ ದೇಹದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧಮೇಹದಂತ ಕಾಯಿಲೆಗಳು ಉತ್ಪತ್ತಿಯಾಗುವ ಅಪಾಯದಿಂದ ಶೇಕಡಾ 50 ರಷ್ಟು ನಾವು ಪಾರಾಗಬಹುದು ಎಂದು ಹೇಳಲಾಗಿದೆ. ಚೀನಾದ ಸುಜ್ಹೋ ಮೆಡಿಕಲ್ ಕಾಲೇಜ್ನ ಅಧ್ಯಯನದ ಪ್ರಮುಖ ರಚನೆಕಾರ ಚಾಹ್ಫೂ ಕೆ ಹೇಳುವ ಪ್ರಕಾರ, ನಿತ್ಯ ಮೂರು ಕಪ್ ಕಾಫಿ ಅಥವಾ 200 ರಿಂದ 300 ಎಂಜಿ ಕಾಫಿನ್ನನ್ನು ಸೇವಿಸುವುದರಿಂದ ದೇಹದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಅಭಿವೃದ್ಧಿಯಾಗುವುದನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಇದು ಮಾತ್ರವಲ್ಲ ಕಾಫಿ ಕುಡಿಯುವುದರಿಂದ ಅನೇಕ ಆರೋಗ್ಯಕರ ಅನುಕೂಲಗಳು ಇವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜೇನುಹುಳದ ವಿಷ ಕ್ಯಾನ್ಸರ್ ಕೊಲ್ಲುತ್ತಾ? ಏನಿದು ಹೊಸ ಆವಿಷ್ಕಾರ? ನೀವು ಓದಲೇಬೇಕು!
1 ಮಿತವಾದ ಕಾಫಿ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಹಾಗೂ ಮಧುಮೇಹದಂತ ಕಾಯಿಲೆಗಳಿಂದ ದೂರ ಇರಬಹುದು
2 ಕಾಫಿ ಕುಡಿಯುವ ಅಭ್ಯಾಸದಿಂದಾಗಿ ಮೆದುಳಿನ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ.
3 ಅಧ್ಯಯನಗಳು ಹೇಳವು ಪ್ರಕಾರ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಲ್ಲಿಯೂ ಸಹ ಸಹಾಯಕವಾಗುತ್ತದೆಯಂತೆ
ಇದನ್ನೂ ಓದಿ: ನಿತ್ಯ 2 ನಿಮಿಷ ಧ್ಯಾನದಲ್ಲಿ ಹೇಗೆ ಕಳೆದುಹೋಗಬಹುದು ಗೊತ್ತಾ? ಈ ಒಂದು ರೂಢಿ ಬದುಕಲ್ಲಿ ಪವಾಡವನ್ನೇ ಸೃಷ್ಟಿಸಬಲ್ಲದು
4 ಕಾಫಿಯಲ್ಲಿರುವ ಕಾಫಿನ್ ಅಂಶವು ಮೆದುಳಿನ ನರಮಂಡಲದ ಕೇಂದ್ರವನ್ನು ಉತ್ತೇಜನಗೊಳಿಸುವುದರಿಂದ ಉತ್ತಮ ಮನಸ್ಥಿತಿ (Good mood) ನಮ್ಮದಾಗುವುದರ ಜೊತೆಗೆ ಡಿಪ್ರೆಷನ್ (Depression)ನಂತಹ ಮಾನಸಿಕ ಕಾಯಿಲೆಗಳಿಂದ ದೂರ ಉಳಿಯಬಹುದು.
5 ಅದರ ಜೊತೆಗೆ ಅಲ್ಜಮೈರ್ನಂತ ಸಮಸ್ಯೆಗಳು ಕೂಡ ಬಾಧಿಸುವುದಿಲ್ಲ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.
ಹೀಗಾಗಿ ನಿತ್ಯ ಕಾಫಿ ಕುಡಿಯುವುದರಿಂದ ಆರೋಗ್ಯದ ಲಾಭಗಳು ಸಾಕಷ್ಟಿವೆ. ನಿತ್ಯ ಮೂರು ಕಪ್ ಕಾಫಿ ಕುಡಿದು ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ