newsfirstkannada.com

×

ಮಧ್ಯಂತರ ಉಪವಾಸದಲ್ಲಿ ಈ ಪಾನೀಯಗಳನ್ನು ಸೇವಿಸಿ, ತೂಕ ಇಳಿಸಲು ಈ 8 ಡ್ರಿಂಕ್​ ರಾಮಬಾಣ

Share :

Published September 21, 2024 at 6:00pm

Update September 21, 2024 at 6:03pm

    ಊಟದ ಮಧ್ಯಂತರ ಅವಧಿಯಲ್ಲಿ ಈ ಪಾನೀಯಗಳನ್ನು ಸೇವಿಸಿ, ತೂಕ ಇಳಿಸಿ

    ಎಂಟು ರೀತಿಯ ಪಾನೀಯಗಳು ನಿಮ್ಮ ದೇಹದ ತೂಕ ಇಳಿಸುವಲ್ಲಿ ಸಹಾಯಕ

    ಹಸಿವಿನ ಬಯಕೆಯನ್ನು ತಗ್ಗಿಸಿ, ದೇಹಕ್ಕೆ ಬೇಕಾದ ಪೋಷಕಾಂಶ ನಿಮಗೆ ಸಿಗುತ್ತೆ

ಮಧ್ಯಂತರ ಉಪವಾಸ ಅಂದ್ರೆ ಊಟವಾದ ಮೇಲೆ ಇರುವ ಉಪವಾಸ ಮತ್ತು ಮರಳಿ ಊಟ ಮಾಡುವ ಸಮಯದ ನಡುವಿನ ಒಂದ ಘಟ್ಟ. ಈ ವೇಳೆ ಹಲವು ರೀತಿಯ ಪಾನೀಯಗಳನ್ನು ಸೇವಿಸುವುದರಿಂದ ನೀವು ನಿಮ್ಮ ದೇಹದ ತೂಕವನ್ನು ಇಳಿಸಬಹುದು. ಪ್ರಮುಖವಾದ ಈ ಸಮಯದಲ್ಲಿ ಅನೇಕರಿಗೆ ಏನಾದರೂ ಮೆಲುಕು ಹಾಕಬೇಕು ಅನಿಸುತ್ತದೆ. ಚಾಟ್ಸ್ ತಿನ್ನುವ, ಇಲ್ಲವೇ ಏನಾದರೂ ಉಪಹಾರ ಸವಿಯುವ ಆಸೆಯಾಗುತ್ತದೆ. ಆದ್ರೆ ಇಂತಹದೇ ಖಾದ್ಯವನ್ನು ತಿನ್ನಬೇಕು ಅನ್ನುವುದಕ್ಕಿಂತ ಯಾವಾಗ ತಿನ್ನಬೇಕು ಅಂತ ಯೋಚನೆ ಮಾಡುವುದು ಉತ್ತಮ. ಆದ್ರೆ ಈ ಸಮಯದಲ್ಲಿ ಪ್ರಮುಖ 8 ರೀತಿಯ ಪಾನೀಯಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಇಳಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:ಜೇನುಹುಳದ ವಿಷ ಕ್ಯಾನ್ಸರ್​​ ಕೊಲ್ಲುತ್ತಾ? ಏನಿದು ಹೊಸ ಆವಿಷ್ಕಾರ? ನೀವು ಓದಲೇಬೇಕು!

ಈ ಎಂಟು ಬಗೆಯ ಡ್ರಿಂಕ್​​ಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ.ಫ್ಯಾಟ್ ಆಕ್ಸಿಡೇಷನ್​ನ್ನು ಹೆಚ್ಚು ಮಾಡಿ ಹಸಿವನ್ನು ಕಡಿಮೆಗೊಳಿಸುತ್ತವೆ. ಈ ಪಾನೀಯಗಳು ಕೇಫಿನ್ ರೀತಿಯ ಅಂಶಗಳನ್ನು ಹೊಂದಿದ್ದು ಇದು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅಂತಹ ಹಲವು ಡ್ರಿಂಕ್​ಗಳ ಬಗ್ಗೆ ಒಂದು ಮಾಹಿತಿ ಇಲ್ಲಿದೆ

ಸಾಕಷ್ಟು ನೀರು ಕುಡಿಯುವುದು: ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಸಾಕಷ್ಟು ನೀರು ಕುಡಿಯುವುದು ಬಹಳ ಒಳ್ಳೆಯ ಬೆಳವಣಿಗೆ. ನೀರನ್ನು ಹೆಚ್ಚು ಕುಡಿಯುವದರಿಂದ ಅದು ನಿಮ್ಮ ಹಸಿವನ್ನು ನಿಯಂತ್ರಿಸಿ, ಏನಾದರೂ ತಿನ್ನಬೇಕು ಅನಿಸುವ ಬಯಕೆಯನ್ನು ಕಡಿಮೆಗೊಳಿಸುತ್ತದೆ. ಸದಾ ಹೈಡ್ರೇಟ್ ಆಗಿರುವ ದೇಹದಲ್ಲಿ ಚಯಾಪಚಯ ಕ್ರಿಯೆಯು ಸರಿಯಾಗಿ ನಡೆದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಇದನ್ನೂ ಓದಿ: ನಿತ್ಯ 2 ನಿಮಿಷ ಧ್ಯಾನದಲ್ಲಿ ಹೇಗೆ ಕಳೆದುಹೋಗಬಹುದು ಗೊತ್ತಾ? ಈ ಒಂದು ರೂಢಿ ಬದುಕಲ್ಲಿ ಪವಾಡವನ್ನೇ ಸೃಷ್ಟಿಸಬಲ್ಲದು

ಗ್ರೀನ್ ಟೀ: ಗ್ರೀನ್​ ಟೀಯಲ್ಲಿ ಕ್ಯಾಟೆಚಿನ್ ಮತ್ತು ಕಾಫೀನ್ ಅಂಶಗಳು ಇರುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಿ ಫ್ಯಾಟ್ ಅಂಶವನ್ನು ಬರ್ನ್​ ಮಾಡುತ್ತದೆ. ಗ್ರೀನ್ ಟೀಯನ್ನು ಊಟ ಮಾಡುವ ಮಧ್ಯದ ಅವಧಿಯಲ್ಲಿ ಅಥವಾ ಊಟಕ್ಕಿಂತ ಮೊದಲು ಸೇವಿಸುವುದರಿಂದ ನಿಮ್ಮ ತೂಕದಲ್ಲಿ ನೀವು ಕೆಲವೇ ದಿನಗಳಲ್ಲಿ ಇಳಿಕೆ ಕಾಣಬಹುದು

ಬ್ಲಾಕ್ ಕಾಫಿ: ಕ್ರೀಮ್ ಹಾಗೂ ಸಕ್ಕರೆ ರಹಿತ ಬ್ಲಾಕ್ ಕಾಫಿಯನ್ನು ಮೇಲೆ ಹೇಳಿದ ಸಮಯದಲ್ಲಿ ಕುಡಿಯುವುದರಿಂದ ಇದು ರಕ್ತದಲ್ಲಿ ಇರುವ ಗ್ಲುಕೋಸ್ ಅಂಶವನ್ನು ಅಂದ್ರೆ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇನ್ಸೂಲಿನ್ ಸೆನ್ಸಿಟಿವಿಟಿಯನ್ನು ಕೂಡ ಕಡಿಮೆ ಮಾಡುತ್ತದೆ. ಇದು ಪರಿಣಾಮಕಾರಿಯಾದ ತೂಕದ ನಿರ್ವಹಣೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಪರೀತ ಹಸಿವನ್ನು ನಿಯಂತ್ರಣಕ್ಕೆ ತಂದು ಅತಿಯಾದ ಆಹಾರ ಸೇವನೆಯ ರೂಢಿಗೂ ಕೂಡ ಇದು ಬ್ರೇಕ್ ಹಾಕುತ್ತದೆ.

ಆ್ಯಪಲ್ ಸೈಡರ್ ವೆನೆಗಾರ್ ಮತ್ತು ನೀರು: ಆ್ಯಪಲ್ ಸೈಡರ್ ವೆನಾಗರ್​ನ್ನು ನೀರಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ, ತೂಕದ ನಿರ್ವಹಣೆಯಲ್ಲಿ ಅತ್ಯಂತ ಸಹಾಯಕಾರಿಯಾಗಿ ಇದು ಕಾರ್ಯನಿರ್ವಹಿಸಲಿದೆ. ಇದು ಕೂಡ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಇನ್ಸೂಲಿನ್ ಸೆನ್ಸಿಟಿವಿಟಿಯನ್ನು ನಿಯಂತ್ರಣಕ್ಕೆ ತಂದು ತೂಕದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಲಿಂಬು ಮತ್ತು ನೀರು: ಕಡಿಮೆ ಕ್ಯಾಲರೀಸ್ ಹೊಂದಿರುವ ಲಿಂಬು ಬೆರಸಿದ ನೀರು. ಇದು ದೇಹಕ್ಕೆ ವಿಟಮಿನ್ ಸಿ ಪೋಷಕಾಂಶವನ್ನು ನೀಡುತ್ತದೆ. ವಿಟಮಿನ್ ಸಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯಕವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಮುಂಜಾನೆ ವೇಳೆ ಈ ಲಿಂಬು ಮತ್ತು ನೀರನ್ನು ಕುಡಿಯುವುದು ಇನ್ನೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದರಿಂದಾಗಿ ಇಡೀ ದೇಹವನ್ನೇ ನಿರ್ವಿಷೀಕರಿಸುವುದಕ್ಕೆ (detoxify ) ಅದು ಸಹಾಯ ಮಾಡುತ್ತದೆ.

ಹರ್ಬಲ್ ಟೀ: ಪುರೀನಾ, ಶುಂಠಿ ಟೀ ತರದ ಹರ್ಬಲ್ ಟೀಗಳನ್ನು ಕುಡಿಯುವದಿಂದ ಪಚನ ಕ್ರಿಯೆಯು ಉತ್ತಮಗೊಳ್ಳುತ್ತದೆ. ಅದರ ಜೊತೆಗೆ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಈ ಹರ್ಬಲ್ ಟೀಗಳು ನಿವಾರಿಸುತ್ತವೆ. ಇಂತಹ ಉಪಯೋಗಗಳು ಇರುವುದರಿಂದ ಹರ್ಬಲ್ ಟೀಗಳು ತೂಕವನ್ನು ಇಳಿಸುವುದರಲ್ಲಿ ಅನೇಕ ರೀತಯ ಸಹಾಯಕಾರಿ ಅಂಶಗಳಾಗಿ ಪರಿಣಮಿಸುತ್ತವೆ

ಎಲೆಕ್ಟ್ರಾಲೈಟ್ ವಾಟರ್: ಓಆರ್​ಎಸ್​ ನಂತಹ ಎಲೆಕ್ಟ್ರಾಲೈಟ್ ನೀರನ್ನು ಸೇವಿಸುವುದರಿಂದಲೂ ಕೂಡ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಹೆಚ್ಚು ಸೋಡಿಯಂ ಪೋಟ್ಯಾಸಿಯಂ ಹಾಗೂ ಮ್ಯಾಗ್ನೇಷಿಯಂ ಇರುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ದೇಹದ ಎನರ್ಜಿ ಹೆಚ್ಚಿಸುವಲ್ಲಿ ಈ ಪಾನೀಯ ಉತ್ತಮ ಹೀಗೆ ಹಲವಾರು ಕಾರಣಗಳಿಂದಾಗಿ ಈ ಒಂದು ಡ್ರಿಂಕ್​ ನಿಮ್ಮ ತೂಕದ ಇಳಿಕೆಯಲ್ಲಿ ಸಹಾಯಕ

ಇದನ್ನೂ ಓದಿ: Good News: ಮಾರಣಾಂತಿಕ ಕ್ಯಾನ್ಸರ್​ಗೆ ಸಿಕ್ಕೇ ಬಿಡ್ತು ರಾಮಬಾಣ; ಈ ವ್ಯಾಕ್ಸಿನ್ ಪವರ್ ಎಂತಹದು..?

ಎಳನೀರು ಕುಡಿಯುವುದು: ಊಟದ ಮಧ್ಯಂತರ ಸಮಯದಲ್ಲಿ ಎಳನೀರು ಕುಡಿಯುವುದರಿಂದ ಅನೇಕ ಲಾಭಗಳು ಇವೆ. ಇದು ಕೂಡ ಎಲೆಕ್ಟ್ರಾಲೈಟ್​ ವಾಟರ್ ರೀತಿಯೇ ಕಾರ್ಯನಿರ್ವಹಿಸುತ್ತದೆ. ದೇಹವನ್ನು ಸದಾ ಹೈಡ್ರೇಡ್ ಆಗಿ ಇಡುವುದರಿಂದ ಉಪವಾಸ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಹೆಚ್ಚು ಶಕ್ತಿ ದೇಹಕ್ಕೆ ಒದಗುವುದರ ಜೊತೆಗೆ ಹಸಿವನ್ನು ಇಂಗಿಸುವ ಶಕ್ತಿಯನ್ನು ಎಳನೀರು ಹೊಂದಿದೆ. ಈ ಪ್ರಕಾರದ ಆರು ಪಾನೀಯಗಳನ್ನು ಸೇವಿಸುವುದರಿಂದ ಅದು ಊಟದ ಮಧ್ಯಂತರ ಅವಧಿಯಲ್ಲಿ ಸೇವಿಸುವುದರಿಂದ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯಂತರ ಉಪವಾಸದಲ್ಲಿ ಈ ಪಾನೀಯಗಳನ್ನು ಸೇವಿಸಿ, ತೂಕ ಇಳಿಸಲು ಈ 8 ಡ್ರಿಂಕ್​ ರಾಮಬಾಣ

https://newsfirstlive.com/wp-content/uploads/2024/09/8-DRINKS-FOR-WEIGHT-LOSS-7.jpg

Load More