newsfirstkannada.com

ಆಕರ್ಷಕ ಬೆಲೆ, ಮ್ಯಾಕ್ರೊ ವಿಷನ್​​, ಫ್ಯಾಮಿಲಿ ಸ್ಪೇಸ್ ವೈಶಿಷ್ಟ್ಯ.. ಇಂದು Moto G45 ಸ್ಮಾರ್ಟ್​ಫೋನ್ ರಿಲೀಸ್​​​  

Share :

Published August 21, 2024 at 7:11am

Update August 21, 2024 at 7:13am

    ಇಂದು ಮೊಟೊ ಜಿ45 ಸ್ಮಾರ್ಟ್​ಫೋನ್​​ ಬಿಡುಗಡೆ

    ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿದೆ G ಸರಣಿ

    ಅದ್ಭುತ ಕ್ಯಾಮೆರಾ, ಆಟೋ ನೈಟ್​​ ವಿಷನ್​.. ಸಖತ್​ ಆಗಿದೆ

ಮೊಟೊರೊಲಾ ಕಳೆದ ತಿಂಗಳು ಮೊಟೊ ಜಿ85 ಸ್ಮಾರ್ಟ್​ಫೋನನ್ನು ಪರಿಚಯಿಸಿತು. ಅದಕ್ಕೂ ಮೊದಲು ಏಪ್ರಿಲ್​ನಲ್ಲಿ ಮೊಟೊ ಜಿ64 ಸ್ಮಾರ್ಟ್​ಫೊನನ್ನು ಬಿಡುಗಡೆ ಮಾಡಿತ್ತು. ಇದೀಗ ಸ್ಮಾರ್ಟ್​ಫೊನ್​ ಪ್ರಿಯರಿಗಾಗಿ ಮತ್ತೊಂದು ಜಿ- ಸರಣಿ ಸ್ಮಾರ್ಟ್​ಫೋನನ್ನು ಒಂದು ಬಿಡುಗಡೆ ಮಾಡುತ್ತಿದೆ.

ಮೊಟೊರೊಲಾ ಇಂದು ಮೊಟೊ ಜಿ45 ಸ್ಮಾರ್ಟ್​ಫೋನನ್ನ ಬಿಡುಗಡೆ ಮಾಡುತ್ತಿದೆ. ಬಿಡುಗಡೆಗೂ ಮುನ್ನ ಈ ನೂತನ ಸ್ಮಾರ್ಟ್​ಫೋನ್​​ ಕುರಿತ ವಿವರ ಬಹಿರಂಗವಾಗಿದೆ. ಸ್ಮಾರ್ಟ್​ಫೋನ್​ ವಿನ್ಯಾಸ, ಡಿಸ್​ಪ್ಲೇ, ಕ್ಯಾಮೆರಾ, ಪ್ರೊಸೆಸರ್​ ಮಾಹಿತಿ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

ಕಳೆದ ವರ್ಷ ಮೊಟೊ ಜಿ44 ಸ್ಮಾರ್ಟ್​ಫೋನ್​ ಬಿಡುಗಡೆಗೊಂಡಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 5ಜಿ ನೆಟ್​​ವರ್ಕ್​ನಲ್ಲಿ ಕಾರ್ಯನಿರ್ವಹಿಸುವ ಮೊಟೊ ಜಿ45 ಸ್ಮಾರ್ಟ್​ಫೋನನ್ನು ಇಂದು ಪರಿಚಯಿಸುತ್ತಿದೆ. ನೂತನ ಫೋನಿನ ಬೆಲೆ 18,999 ರೂ ಎಂದು ಅಂದಾಜಿಸಲಾಗಿದೆ.

ಫ್ಯಾಮಿಲಿ ಸ್ಪೇಸ್​​ ವೈಶಿಷ್ಟ್ಯ

ಮೊಟೊ ಜಿ45 ಸ್ಮಾರ್ಟ್​ಫೋನ್​ ಆಕರ್ಷಕ ವಿನ್ಯಾಸದ ಜೊತೆಗೆ 6.5 ಇಂಚಿನ ಡಿಸ್​ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್​​ ರೇಟ್​, ಪಂಚ್​ ಹೋಲ್​​ ವಿನ್ಯಾಸ ಮತ್ತು ಗೋರಿಲ್ಲಾ ಗ್ಲಾಸ್​ 3ಯೊಂದಿಗೆ ಬರುತ್ತದೆ.

ಇದನ್ನೂ ಓದಿ: ಅಪರಿಚಿತ ನಂಬರ್​ನಿಂದ ಮೆಸೇಜ್​ ಬರುತ್ತಾ? ಸದ್ಯದಲ್ಲೇ ಅದಕ್ಕೆ ಮುಕ್ತಿ ನೀಡಲಿದೆ ವಾಟ್ಸ್​ಆ್ಯಪ್​

ನೂತನ ಸ್ಮಾರ್ಟ್​ಫೋನ್​​ನಲ್ಲಿ 8GB RAM ಜೊತೆಗೆ ಕ್ವಾಲ್​​ಕಾಮ್​​ ಸ್ನಾಪ್​​​ಡ್ರ್ಯಾಗನ್​​ 6s Gen3 ಚಿಪ್​​ಸೆಟ್​​ನೊಂದಿಗೆ ಬರುತ್ತಿದೆ. ಆ್ಯಂಡ್ರಾಯ್ಡ್​​ 14ನಲ್ಲಿ ರನ್​ ಆಗುತ್ತದೆ. ಅಚ್ಚರಿಯ ಸಂಗತಿ ಎಂದರೆ ಇದರಲ್ಲಿ ಸ್ಮಾರ್ಟ್​​ ಕನೆಕ್ಟ್​​, ಫ್ಯಾಮಿಲಿ ಸ್ಪೇಸ್​​ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಕ್ಯಾಮೆರಾ ಹೇಗಿದೆ?

ಫೋಟೋ ಕ್ಲಿಕ್ಕಿಸಲೆಂದು 50 ಮೆಗಾಫಿಕ್ಸೆಲ್​​​ ಕ್ವಾಡ್​​ ಪಿಕ್ಸೆಲ್​ ಪ್ರೈಮರಿ ಕ್ಯಾಮೆರಾ , ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಫಿಕ್ಸೆಲ್​​​ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲದೆ ಇಮೇಜ್​ ಸ್ವಯಂ ವರ್ಧನೆ, ಮ್ಯಾಕ್ರೋ ವಿಷನ್​, ಆಟೋ ನೈಟ್​​ ವಿಷನ್​ನಂತರ ವೈಶಿಷ್ಟ್ಯ ಇದರಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿದ ಐಷಾರಾಮಿ ಹಡಗು; ಬ್ರಿಟನ್ ಬಿಲ್​ಗೇಟ್ಸ್ ಮೈಕ್ ಲಿಂಚ್​​​ ನಾಪತ್ತೆ!

ಬ್ಯಾಟರಿ ಕ್ಷಮತೆ ಹೇಗಿದೆ?

ಮೊಟೊ ನೂತನ ಸ್ಮಾರ್ಟ್​ಫೊನ್​ನಲ್ಲಿ 5 ಸಾವಿರ mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಟರ್ಬೋಪವರ್​​ ವೇಗದ ಚಾರ್ಜಿಂಗ್​​​ ಇದರಲ್ಲಿದೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕರ್ಷಕ ಬೆಲೆ, ಮ್ಯಾಕ್ರೊ ವಿಷನ್​​, ಫ್ಯಾಮಿಲಿ ಸ್ಪೇಸ್ ವೈಶಿಷ್ಟ್ಯ.. ಇಂದು Moto G45 ಸ್ಮಾರ್ಟ್​ಫೋನ್ ರಿಲೀಸ್​​​  

https://newsfirstlive.com/wp-content/uploads/2024/08/MOTO-G45.jpg

Load More