/newsfirstlive-kannada/media/post_attachments/wp-content/uploads/2024/08/HOKEY.jpg)
ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದ ಹರ್ಮನ್​ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಈ ಸಲದ ಒಲಿಂಪಿಕ್ಸ್​ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಸದ್ಯ ಇದರ ಬೆನ್ನಲ್ಲೇ ಹಾಕಿ ಪ್ಲೇಯರ್ಸ್​ಗೆ ಬಹುಮಾನಗಳು ಘೋಷಣೆ ಆಗುತ್ತಿದ್ದು ಓರ್ವ ಪ್ಲೇಯರ್​ಗೆ ಕೋಟಿ ರೂಪಾಯಿಗಳನ್ನ ಅನೌನ್ಸ್ ಮಾಡಲಾಗಿದೆ.
ಭಾರತದ ಹಾಕಿ ತಂಡದ ಪ್ಲೇಯರ್ ಆಗಿರುವ ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಹಾಕಿ ತಂಡದಲ್ಲಿ ತಮ್ಮ ರಾಜ್ಯದಿಂದ ಪ್ರತಿನಿಧಿಸಿರುವ 24 ವರ್ಷದ ಯುವ ಆಟಗಾರನಾದ ವಿವೇಕ್ ಸಾಗರ್ ಪ್ರಸಾದ್​ಗೆ ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಘೋಷಣೆ ಮಾಡಿದ್ದಾರೆ. ಸಿಎಂ ಮೋಹನ್ ಯಾದವ್ ಅವರು ಮೊಬೈಲ್​ ಮೂಲಕ ವಿಡಿಯೋ ಕರೆ ಮಾಡಿ ವಿವೇಕ್ ಸಾಗರ್ ಪ್ರಸಾದ್​ ಜೊತೆ ಮಾತನಾಡಿದ್ದಾರೆ. ಈ ನಿಮ್ಮ ಸಾಧನೆಗೆ ಸರ್ಕಾರ 1 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿನೇಶ್ ಫೋಗಾಟ್​ಗೆ ಸಿಲ್ವರ್ ಮೆಡಲ್ ಬರುತ್ತಾ..? ಭಾರತದ ಸ್ಪರ್ಧಿ ಪರ ಧ್ವನಿ ಎತ್ತಿದ 4 ರಾಷ್ಟ್ರಗಳು!
[caption id="attachment_79863" align="alignnone" width="800"] ಸಿಎಂ ಮೋಹನ್ ಯಾದವ್[/caption]
ಇನ್ನು ವಿವೇಕ್ ಸಾಗರ್ ಪ್ರಸಾದ್ ಅವರು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಇತಾರ್ಸ್​ ನಗರದವರು ಆಗಿದ್ದಾರೆ. ಇವರು ಹಾಕಿಯಲ್ಲಿ ಮಿಡ್​​ಫೀಲ್ಡರ್​ ಆಗಿ ಆಡುತ್ತಿದ್ದಾರೆ. ಟೋಕಿಟೋ​ ಹಾಗೂ ಸದ್ಯ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತ ತಂಡವನ್ನ ವಿವೇಕ್ ಸಾಗರ್ ಪ್ರತಿನಿಧಿಸಿದ್ದಾರೆ. ಈ ಎರಡರಲ್ಲೂ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. 2024ರ ಒಲಿಂಪಿಕ್ಸ್​​​ನಲ್ಲಿ ಸದ್ಯ 64ನೇ ಸ್ಥಾನದಲ್ಲಿರುವ ಭಾರತ 1 ಬೆಳ್ಳಿ, 4 ಕಂಚಿನ ಪದಕಗಳೊಂದಿಗೆ ಪಟ್ಟು 5 ಪದಕಗಳನ್ನು ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ