newsfirstkannada.com

ಮಂಡ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್​​ ಕೊಟ್ಟ ಸುಮಲತಾ ಅಂಬರೀಶ್; ಮತದಾನಕ್ಕೂ ಮುನ್ನ ಹೇಳಿದ್ದೇನು?

Share :

Published April 25, 2024 at 4:06pm

    ಬಿಜೆಪಿ ಪಕ್ಷ ಸೇರಿದ ಮೇಲೆ ಮಂಡ್ಯ ಚುನಾವಣೆಯ ಪ್ರಚಾರಕ್ಕೆ ಹೋಗಿಲ್ಲ

    ಸುಮಲತಾ ಅಂಬರೀಶ್‌ ಬೆಂಬಲ ಕುಮಾರಸ್ವಾಮಿಗೋ? ಸ್ಟಾರ್ ಚಂದ್ರುಗೋ?

    ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಕಣದಲ್ಲಿ!

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ 14 ಲೋಕಸಭಾ ಕ್ಷೇತ್ರದಲ್ಲಿ ಯಾರ್ ಗೆಲ್ತಾರೆ, ಯಾರ್ ಸೋಲ್ತಾರೆ ಅನ್ನೋ ಮತದಾರನ ಭವಿಷ್ಯ ನಿರ್ಧಾರವಾಗುತ್ತಿದೆ.
ನಾಳೆ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯ ಚುನಾವಣೆ ರೋಚಕವಾಗಿದೆ. ಕಾಂಗ್ರೆಸ್‌ನಿಂದ ಸ್ಟಾರ್‌ ಚಂದ್ರು ಕಣಕ್ಕಿಳಿದಿದ್ದರೆ, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೆ ಬಿಗ್​ ಟ್ವಿಸ್ಟ್​​; ಸುಮಲತಾ ಸಪೋರ್ಟ್​​ ಜೆಡಿಎಸ್​​​ಗಾ ಕಾಂಗ್ರೆಸ್ಸಿಗಾ..?

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷ ಸೇರಿದ್ದಾರೆ. ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷ ಸೇರಿದ ಮೇಲೆ ಮಂಡ್ಯ ಚುನಾವಣೆಯ ಪ್ರಚಾರಕ್ಕೆ ಹೋಗಿಲ್ಲ. ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರ ನಡೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ಮಂಡ್ಯದಲ್ಲಿ ನಡೆಯುತ್ತಿರುವ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಯ ಮಧ್ಯೆ ಟಫ್‌ ಫೈಟ್‌ ಇದೆ. ಕಳೆದ ಬಾರಿ ಸ್ವಾಭಿಮಾನಿ ಮತದಾರರಿಂದ ಗೆದ್ದು ಬೀಗಿದ ಸುಮಲತಾ ಅಂಬರೀಶ್ ಅವರು ಯಾರಿಗೆ ಸಹಾಯ ಮಾಡುತ್ತಾರೆ ಅನ್ನೋದು ರಣರೋಚಕವಾಗಿದೆ. 2019ರ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಹಾಯ ಮಾಡಿದ್ದರು. ಹೀಗಾಗಿ ಈ ಬಾರಿ ಬಿಜೆಪಿ ಪಕ್ಷ ಸೇರಿರುವ ಸುಮಲತಾ ಅಂಬರೀಶ್‌ ಅವರ ಬೆಂಬಲ ಯಾರಿಗೆ ಅನ್ನೋದು ಸಾಕಷ್ಟು ಚರ್ಚೆಯಾಗುತ್ತಿದೆ.

ಮಂಡ್ಯದಲ್ಲಿ ಸುಮಲತಾ ಬೆಂಬಲ ಕಾಂಗ್ರೆಸ್‌ಗೋ? ಜೆಡಿಎಸ್‌ಗೋ ಅನ್ನೋ ಚರ್ಚೆಯ ಮಧ್ಯೆ ಅಂಬರೀಶ್ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸೋಷಿಯಲ್ ಮೀಡಿಯಾ Xನಲ್ಲಿ ಟ್ವೀಟ್ ಮಾಡಿರುವ ಸುಮಲತಾ ಅಂಬರೀಶ್, ಏನು ಹೇಳಬೇಕೆನ್ನುವುದು ಜ್ಞಾನ. ಹೇಗೆ ಹೇಳಬೇಕೆನ್ನುವುದು ವ್ಯಕ್ತಿತ್ವ. ಎಷ್ಟು ಹೇಳಬೇಕೆನ್ನುವುದು ಕೌಶಲ್ಯ. ಹೇಳಬೇಕೋ ಬೇಡವೋ ಎನ್ನುವುದು ವಿವೇಕ ಎಂದು ವಿಶೇಷ ಅರ್ಥ ಕೊಡುವ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ನಿಮ್ಮ ಬೆಂಬಲ ಕುಮಾರಸ್ವಾಮಿಗೋ? ಸ್ಟಾರ್ ಚಂದ್ರುಗೋ ಎಂದು ಪ್ರಶ್ನಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್​​ ಕೊಟ್ಟ ಸುಮಲತಾ ಅಂಬರೀಶ್; ಮತದಾನಕ್ಕೂ ಮುನ್ನ ಹೇಳಿದ್ದೇನು?

https://newsfirstlive.com/wp-content/uploads/2024/03/Sumalatha-HDK.jpg

Load More