Advertisment

ಸಿಎಂ ಸೈಟ್​​ ವಾಪಸ್​ ಕೊಟ್ಟಿದ್ದಾರೆ ಅಂದ್ರೆ ತಪ್ಪಾಗಿದೆ ಅಂತಾನೆ ಅರ್ಥ; ಯದುವೀರ್ ಒಡೆಯರ್

author-image
AS Harshith
Updated On
ಸಿಎಂ ಸೈಟ್​​ ವಾಪಸ್​ ಕೊಟ್ಟಿದ್ದಾರೆ ಅಂದ್ರೆ ತಪ್ಪಾಗಿದೆ ಅಂತಾನೆ ಅರ್ಥ; ಯದುವೀರ್ ಒಡೆಯರ್
Advertisment
  • ಸಿಎಂ ಕೂಡಲೇ ರಾಜೀನಾಮೆ ನೀಡಲೇಬೇಕು
  • ವಾಲ್ಮೀಕಿ ಹಗರಣದಲ್ಲೂ ಕೂಡ ತಪ್ಪಾಗಿದೆ
  • ಇದೊಂದು ಸಿಎಂಗೆ ಕಪ್ಪುಚುಕ್ಕೆ ತರುವ ವಿಚಾರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ‌ ಪ್ರಕರಣ ಸಂಬಂಧಿಸಿದಂತೆ ನ್ಯೂಸ್ ಫಸ್ಟ್ ಜೊತೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದ್ದಾರೆ. ಸಿಎಂ ಸೈಟ್ ವಾಪಸ್ ಕೊಡ್ತೀನಿ ಅಂತ ಕೊಡುತ್ತಿರುವುದು ತಪ್ಪಾಗಿದೆ ಅಂತಾನೆ ಅರ್ಥ ಎಂದು ಹೇಳಿದ್ದಾರೆ.

Advertisment

ಬಳಿಕ ಮಾತು ಮುಂದುವರೆಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸೈಟ್ ಗೆ ಇರುವ ವ್ಯಾಲ್ಯುಗಿಂತ ಐದಾರು ಪಟ್ಟು ಹಣ ಕೇಳಿದರು. ಸಿಎಂ ಅವರ ಹೆಸರೇ ಖುದ್ದು‌ ಪ್ರಕರಣದಲ್ಲಿ ಕೇಳಿ ಬಂದಿದೆ. ಆ ಕಾರಣಕ್ಕೆ ಸೂಕ್ತ ತನಿಖೆ ಆಗಲೇಬೇಕು. ಸಿಎಂ ಕೂಡಲೇ ರಾಜೀನಾಮೆ ನೀಡಲೇಬೇಕು. ಇದೊಂದು ಸಿಎಂಗೆ ಕಪ್ಪುಚುಕ್ಕೆ ತರುವ ವಿಚಾರ. ಅವರು ಆಡಳಿತ ದುರಾಡಳಿತ ಮಾಡಿದ್ದಾರೆ. ನೇರವಾಗಿ ತಪ್ಪು ಮಾಡಿರುವ ಕಾರಣ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Breaking: ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ.. ಮೂರು ಸಾವು, ಭಾರೀ ಅನಾಹುತ

publive-image

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದರ ಜೊತೆಗೆ ವಾಲ್ಮೀಕಿ ಹಗರಣದಲ್ಲೂ ಕೂಡ ತಪ್ಪಾಗಿದೆ. ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ರಾಜೀನಾಮೆ ಕೊಡಲೇಬೇಕು
ಸಿಎಂ ಪತ್ನಿಯನ್ನ ರಾಜಕೀಯಕ್ಕೆ ತಂದಿಲ್ಲ. ಮುಖ್ಯಮಂತ್ರಿಯಾಗಲಿ, ಮಹಿಳೆಯಗಾಗಲಿ, ಗಂಡಸಾಗಲಿ ಯಾರೇ ಆಗಲಿ ಆರೋಪ ಬಂದಾಗ ಎದುರಿಸಬೇಕು. ಅವರ ಮೇಲೆ ಆರೋಪ ಬಂದಿದೆ ಹಾಗಾಗಿ ಅವರ ಪತ್ನಿ ತನಿಖೆಯಲ್ಲಿ ಭಾಗಿಯಾಗಲೇಬೇಕು. ಮುಡಾದ‌ ಮೂಲ ಉದ್ದೇಶ ಬಡವರಿಗೆ ಸೈಟ್ ಸಿಗಬೇಕು ಎಂಬುದು ಆದರೆ ಅದು ಒಂದು ವರ್ಗಕ್ಕೆ ಲಾಭ ಆಗ್ತಿದೆ.
ಹಾಗಾಗಿ ಸಮಗ್ರ ತನಿಖೆ ಆಗಬೇಕು ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ

ಬಳಿಕ ಸಿಎಂ ಮೊದಲೇ ಸೈಟ್ ಕೊಟ್ಟಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂಬ ವಿಚಾರ ಬಗ್ಗೆ ಮಾತನಾಡಿದ ಯದುವೀರ್​, ಈಗ ಏನಾಗಿದೆ? ಏನಾಗಿಲ್ಲ? ಅಂತ ಪರಾಮರ್ಶೆ ಮಾಡುವ ಸಂದರ್ಭವಲ್ಲ.ತಪ್ಪಂತೂ ಆಗಿದೆ, ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಅವರೇ ಕೈ ಹಾಕಿದ್ದಾರಾ ನೋಡಬೇಕಿದೆ. ಹೀಗಾಗಿ ತಕ್ಷಣ ರಾಜೀನಾಮೆ ನೀಡಲೇಬೇಕು ಎಂದು ಹೇಳಿದ್ದಾರೆ.

ದಸರಾದಲ್ಲಿ ಪಾಲ್ಗೊಳ್ಳುವ ವಿಚಾರ ಅವರ ತೀರ್ಮಾನ ಬಗ್ಗೆ ಮಾತನಾಡಿದ ಯದುವೀರ್, ಜವಾಬ್ದಾರಿ ಸ್ಥಾನದಲ್ಲಿರುವ ಕಾರಣ, ಹಗರಣದಲ್ಲಿ ಸಿಲುಕಿರುವ ಕಾರಣ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ. ಅದರ ಜೊತೆಗೆ ತಾಯಿ ಚಾಮುಂಡೇಶ್ವರಿ ಬೆಟ್ಟದ ಪ್ರಾಧಿಕಾರ ವಿಚಾರ ಬಗ್ಗೆಯೂ ಮಾತನಾಡಿದ್ದು, ಆ ವಿಚಾರ ತಾಯಿ ಚಾಮುಂಡಿಗೆ ಬಿಟ್ಟದ್ದು. ನಾವು ಕಾನೂನು, ಸಂವಿಧನಾತ್ಮಕವಾಗಿ ಮಾಡುತ್ತೇವೆ. ಅದು ತಾಯಿ ಚಾಮುಂಡಿ ತಾಯಿಯೇ ನಿರ್ಧಾರ ಮಾಡುತ್ತಾಳೆ ಎಂದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment