ಕೇರಳದಲ್ಲಿ MPOX ಕನ್ಫರ್ಮ್.. ಕರ್ನಾಟಕಕ್ಕೂ ಶುರುವಾಯ್ತು ಡೇಂಜರ್​​ ಮಹಾಮಾರಿ ಆತಂಕ..!

author-image
Veena Gangani
Updated On
300ರ ಗಡಿಯತ್ತ ಕೊರೊನಾ ಕೇಸ್.. ರಾಜ್ಯದಲ್ಲಿ ಮತ್ತೆ ಆತಂಕ ಹೆಚ್ಚಿಸಿದ ವೈರಸ್ ಅಟ್ಟಹಾಸ
Advertisment
  • ಭಾರತದಲ್ಲಿ ಎಂಪಾಕ್ಸ್‌ ಸೋಂಕಿನ 2ನೇ ಕೇಸ್ ಪತ್ತೆ
  • ಸಿಡುಬು ರೋಗಕ್ಕೆ ಸಂಬಂಧಿಸಿದ ವೈರಲ್ ಕಾಯಿಲೆ
  • ಚರ್ಮ ಸಂಪರ್ಕದ ಮೂಲಕ ಎಂಪಾಕ್ಸ್‌ ಹರಡುತ್ತಾ?

ಕೇರಳ ಅಂದ್ರೆ ದೇವರಸ್ವಂತ ನಾಡು. ಪ್ರಕೃತಿಯ ಬೀಡು. ಆದ್ರೆ, ಆಗಾಗ ರೋಗಗಳು ಗೂಡಾಗೋದು ಸಾಮಾನ್ಯವಾಗಿದೆ. ಝೀಕಾ ವೈರಸ್, ನಿಫಾ ವೈರಸ್ ಬಳಿಕ ಕೇರಳದಲ್ಲಿ ಎಂಪಾಕ್ಸ್ ವೈರಸ್ ಪತ್ತೆಯಾಗಿದೆ. ಕೊರೊನಾದಂತೆ ಸೋಂಕನ್ನ ಹಬ್ಬಿಸಬಲ್ಲ ಡೇಂಜರ್ ವೈರಸ್ ದೇಶದಲ್ಲಿ ದಾಂಗುಡಿ ಇಟ್ಟಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಎಂಪಾಕ್ಸ್ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಝೀಕಾ ವೈರಸ್​ಗೆ ಮೊದಲ ಬಲಿ: ಹೈ ಅಲರ್ಟ್ ಘೋಷಣೆ; ಏನೆಲ್ಲಾ ಎಚ್ಚರಿಕೆ ವಹಿಸಬೇಕು?

ಕೊರೊನಾ ಎಂಬ ಮಹಾಮಾರಿ ಬಂದು ಇಡೀ ವಿಶ್ವಕ್ಕೆ ಕಂಟಕವಾಗಿ ಕಾಡಿತ್ತು. ಜನರ ದೇಹವನ್ನ ಹೊಕ್ಕು ಸರ್ವನಾಶ ಮಾಡಿತ್ತು. ಇದೀಗ ಕೊರೊನಾ ಮಾರಿಯಂತಹ ಮತ್ತೊಂದು ವೈರಸ್ ದೇಶಕ್ಕೆ ಎಂಟ್ರಿ ಕೊಟ್ಟಿದೆ. ವಿದೇಶದಿಂದ ದೇಶಕ್ಕೆ ಬಂದಿರೋ ಮಾರಕ ವೈರಸ್ ದೇಶದ ಇಬ್ಬರು ವ್ಯಕ್ತಿಗಳ ದೇಹವನ್ನ ಹೊಕ್ಕಿದೆ. ಈಗಾಗಲೇ ಕೊರೊನಾದಿಂದ ಕಂಗಾಲಾಗಿರೋ ಜನರಿಗೆ ಮತ್ತಷ್ಟು ಭಯವನ್ನ ಹುಟ್ಟಿಸಿದೆ.

publive-image

ಕೊರೊನಾ ಎಂಬ ಕ್ರಿಮಿಯಿಂದ ದೇಶ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಇದೇ ಹೊತ್ತಲ್ಲಿ ಎಂಪಾಕ್ಸ್ ಎಂಬ ಮಾರಿ ದೇಶದಲ್ಲಿ ಪತ್ತೆಯಾಗಿದೆ. ಮೊನ್ನೆಯಷ್ಟೇ ಹರ್ಯಾಣದ ಹಿಸಾರ್‌ನ 26 ವರ್ಷದ ನಿವಾಸಿಯೊಬ್ಬನಿಗೆ ಎಂಪಾಕ್ಸ್ ಸೋಂಕು ದೃಢಪಟ್ಟಿತ್ತು. ವಿದೇಶದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯಲ್ಲಿ ಹೊಸ ವೈರಸ್ ದೃಢಪಟ್ಟಿತ್ತು. ಇದೀಗ ರೋಗಗಳ ಗೂಡಾಗಿರೋ ಕೇರಳದಲ್ಲೂ ಎಂಪಾಕ್ಸ್ ಎಂಬ ಡೆಡ್ಲಿವೈರಸ್ ಪತ್ತೆಯಾಗಿದೆ.

ಕೇರಳದ 34 ವರ್ಷದ ವ್ಯಕ್ತಿಯಲ್ಲಿ ಎಂಪಾಕ್ಸ್ ಸೋಂಕು ಪತ್ತೆಯಾಗಿದೆ. ಯುಎಇಯಿಂದ ಕೇರಳಕ್ಕೆ ಬಂದಿದ್ದ ಯುವಕನಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಯುವಕ ಮಲಪ್ಪುರಂ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಎಂಪಾಕ್ಸ್ ಸೋಂಕಿತ ವ್ಯಕ್ತಿಯನ್ನ ಕೇರಳ ಆರೋಗ್ಯ ಇಲಾಖೆ ಐಸೋಲೇಟ್‌ ಮಾಡಿ ಚಿಕಿತ್ಸೆ ನೀಡುತ್ತಿದೆ. ಈ ಮೂಲಕ ಭಾರತದಲ್ಲಿ ಎರಡನೇ ಎಂಪಾಕ್ಸ್‌ ಪ್ರಕರಣ ಪತ್ತೆಯಾಗಿದೆ.

publive-image

ಏನಿದು ಎಂಪಾಕ್ಸ್‌?

ಆಫ್ರಿಕಾದ 12 ದೇಶಗಳಲ್ಲಿ ಎಂಪಾಕ್ಸ್ ವೈರಸ್ ಹರಡುತ್ತಿದೆ. ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಈ ರೋಗ ಹರಡುತ್ತಿದೆ ಅಂತ ತಿಳಿದು ಬಂದಿದೆ. ಎಂಪಾಕ್ಸ್‌ ವೈರಸ್ ಆರ್ಥೋಪಾಕ್ಸ್ ವೈರಸ್ ಜಾತಿಗೆ ಸೇರಿದ್ದಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡಬಲ್ಲದು ಎಂಬ ಮಾಹಿತಿ ಇದೆ. ಸಿಡುಬು ರೋಗಕ್ಕೆ ಸಂಬಂಧಿಸಿದ ವೈರಲ್ ಕಾಯಿಲೆ ಇದಾಗಿದ್ದು, ಈ ಸೋಂಕಿರುವ ವ್ಯಕ್ತಿಗೆ ಚರ್ಮದ ದದ್ದು, ಜ್ವರದಂತ ರೋಗಲಕ್ಷಣ ಕಂಡುಬರುತ್ತವೆ. ಚರ್ಮದ ಸಂಪರ್ಕದ ಮೂಲಕ ಎಂಪಾಕ್ಸ್‌ ಹರಡುತ್ತದೆ. ಕೆಲವು ಸಂದರ್ಭಗಳಲ್ಲಿ ಎಂಪಾಕ್ಸ್‌ ವ್ಯಕ್ತಿಯ ಜೀವಕ್ಕೆ ಮಾರಕವಾಗಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್​ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!

ಎಂಪಾಕ್ಸ್ ಭೀತಿಯ ಬೆನ್ನಲ್ಲೇ ದೇಶದ ಎಲ್ಲಾ ಏರ್‌ಪೋರ್ಟ್‌ಗಳಲ್ಲೂ ಆರೋಗ್ಯ ತಪಾಸಣೆ ನಡೀತಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರ ಆರೋಗ್ಯ ಚೆಕಪ್ ನಡೀತಿದೆ. ಒಟ್ಟಾರೆ, ಎಂಪಾಕ್ಸ್ ಹರಡದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿ ಕ್ರಮಕೈಗೊಳ್ಳಬೇಕಿದೆ. ದೇಶದಲ್ಲಿ ಹರಡದಂತೆ ಕಟ್ಟೆಚ್ಚರ ವಹಿಸಬೇಕಿದೆ.

Advertisment