newsfirstkannada.com

Watch: ಧೋನಿ ಎಂಟ್ರಿಗಿಂತ RCB ಫೀಲ್ಡಿಂಗ್​​ಗೇ ಹೆಚ್ಚು ‘ಸೌಂಡ್’ ಮಾಡ್ತಿದೆ.. ಏನದು..?

Share :

Published May 15, 2024 at 2:47pm

    ರೋಚಕ ಘಟ್ಟ ತಲುಪುತ್ತಿದೆ ಐಪಿಎಲ್-2024

    DC vs RCB ಪಂದ್ಯದ ವೇಳೆ ರೆಕಾರ್ಡ್​ ಬ್ರೇಕ್

    ಅಭಿಮಾನಿಗಳ ಹರ್ಷೋದ್ಘಾರ ಕಂಡು ಸಿಧು ಶಾಕ್

ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದಾರೆ. ಅವರು ಬ್ಯಾಟಿಂಗ್‌ಗೆ ಬಂದಾಗಲೆಲ್ಲಾ ಮೈದಾನದಲ್ಲಿ ಭಾರೀ ಸದ್ದು ಕೇಳಿ ಬರುತ್ತದೆ. ಅಭಿಮಾನಿಗಳ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿರುತ್ತದೆ. ಕ್ರಿಕೆಟ್ ಅಭಿಮಾನಿಗಳು ಹೆಚ್ಚೆದ್ದು ಕುಣಿಯುತ್ತಾರೆ.

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಪಾಯಿಂಟ್ಸ್​ ಟೇಬಲ್​ನಲ್ಲಿ ಭಾರೀ ಬದಲಾವಣೆ..!

ಧೋನಿ ಬ್ಯಾಟಿಂಗ್​ಗೆ ಬಂದಾಗ ಮಾತ್ರ ಆಡಿಯನ್ಸ್ ಹೆಚ್ಚು ಸೌಂಡ್ ಮಾಡ್ತಾರೆ ಅಂತಾ ನೀವು ಅನ್ಕೊಂಡಿರಬಹುದು. ನೀವೇನಾದರೂ ಹಾಗೆ ಅಂದುಕೊಂಡರೆ ಅದು ತಪ್ಪು. ಧೋನಿ ಬ್ಯಾಟಿಂಗ್ ಎಂಟ್ರಿಗಿಂತ ಆರ್‌ಸಿಬಿ ಫೀಲ್ಡಿಂಗ್​​​​​​​​​​​ ವೇಳೆ ಹೆಚ್ಚು ಸೌಂಡ್ ಆಗ್ತಿದೆ. ಸ್ವತಃ ಡೆಸಿಬಲ್ ಮೀಟರ್ ಈ ಸತ್ಯವನ್ನು ಬಹಿರಂಗಪಡಿಸಿದೆ. ಧೋನಿ ಬ್ಯಾಟಿಂಗ್ ಪ್ರವೇಶಕ್ಕಿಂತ ಆರ್‌ಸಿಬಿಯ ಫೀಲ್ಡಿಂಗ್ ಹೆಚ್ಚು ಸದ್ದು ಮಾಡಿದೆ. ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಧೋನಿಯ ಎಂಟ್ರಿ ವೇಳೆ ಡೆಸಿಬಲ್ ಮೀಟರ್ ರೀಡಿಂಗ್ 123dB ಆಗಿತ್ತು. ಆದರೆ RCB ಫೀಲ್ಡಿಂಗ್‌ ವೇಳೆ ಈ ದಾಖಲೆ ಬ್ರೇಕ್ ಆಗಿದೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ಮೊನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತು. ಈ ವೇಳೆ ಡೆಸಿಬಲ್ ಮೀಟರ್ ಅಂಕಿ-ಅಂಶ 125ಕ್ಕೆ ತಲುಪಿದೆ. ಕ್ಯಾಮರೂನ್ ಗ್ರೀನ್ ಅವರು ಡೆಲ್ಲಿಯ ಸ್ಟಬ್ಸ್​​ರನ್ನು ರನೌಟ್ ಮಾಡಿದರು. ರನೌಟ್ ಆಗ್ತಿದ್ದಂತೆಯೇ ಅಭಿಮಾನಿಗಳು ಜೋರಾಗಿ ಕೂಗಿದ್ದಾರೆ. ಅದರ ಡೆಸಿಬಲ್ ಮೀಟರ್‌ ಮೌಲ್ಯವು 125dB ತಲುಪಿದೆ. ಈ ಅಂಕಿ ಅಂಶವನ್ನು ನೋಡಿದ ನವಜೋತ್ ಸಿಂಗ್ ಸಿಧು.. ಧೋನಿ ಬಂದಾಗ ಸೌಂಡ್ 123ಡಿಬಿ ಇತ್ತು. ಆ ದಾಖಲೆ ಈಗ ಮುರಿದು ಬಿದ್ದಿದೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್​ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್​ಸಿಬಿಗೆ ವರದಾನ ಆಗುತ್ತಾ?

View this post on Instagram

A post shared by Raj Rubel (@rajrubel.0.2)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಧೋನಿ ಎಂಟ್ರಿಗಿಂತ RCB ಫೀಲ್ಡಿಂಗ್​​ಗೇ ಹೆಚ್ಚು ‘ಸೌಂಡ್’ ಮಾಡ್ತಿದೆ.. ಏನದು..?

https://newsfirstlive.com/wp-content/uploads/2024/05/DHONI-3-1.jpg

Load More