/newsfirstlive-kannada/media/post_attachments/wp-content/uploads/2024/10/Dhoni-1.jpg)
ಎಷ್ಟೇ ಸೂಪರ್ ಸ್ಟಾರ್ ಕ್ರಿಕೆಟರ್​ ಆದರೂ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​​​​ಬೈ ಹೇಳಿದ್ಮೇಲೆ ಜನಪ್ರೀಯತೆ ಕಮ್ಮಿ ಆಗುತ್ತೆ. ಆದ್ರೆ ಮಾಸ್ಟರ್​ಮೈಂಡ್ ಮಾಹಿ ವಿಚಾರದಲ್ಲಿ ಅದು ಉಲ್ಟಾ ಆಗ್ತಿದೆ. ಟೀಮ್ ಇಂಡಿಯಾದಿಂದ ದೂರವಾಗಿ ಅನೇಕ ವರ್ಷಗಳಾಗಿದೆ. ಮಿಸ್ಟರ್​ ಕೂಲ್ ಕ್ರೇಜ್​ ಮಾತ್ರ ಕಮ್ಮಿ ಆಗ್ತಿಲ್ಲ. ಅದ್ಯಾವ ಮಟ್ಟಿಗೆ ಧೋನಿ, ಅಭಿಮಾನಿಗಳನ್ನ ಆವರಿಸಿಕೊಂಡಿದ್ದಾರೆ ಅನ್ನೋದಕ್ಕೆ ಈ ಸ್ಟೋರಿಯೇ ನಿದರ್ಶನ.
ಮಹೇಂದ್ರ ಸಿಂಗ್ ಧೋನಿ. ಮೋಸ್ಟ್​ ಪಾಪ್ಯುಲರ್​​ ಕ್ರಿಕೆಟರ್​. ಈ ಜಗದ್ವಿಖ್ಯಾತ ಕ್ರಿಕೆಟರ್​ಗೆ ಅಸಂಖ್ಯಾತ ಅಭಿಮಾನಿಗಳ ಬಳಗ ಇದೆ. ಮಾಹಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಘೋಷಿಸಿ ಐದು ವರ್ಷ ಕಳೆದ್ರೂ ಅಭಿಮಾನಿಗಳ ವರ್ಗಕ್ಕೆ ತಮ್ಮ ನೆಚ್ಚಿನ ದೇವರ ಮೇಲಿನ ಅಭಿಮಾನಿ, ಪ್ರೀತಿ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಮಿಸ್ಟರ್​​​ ಕೂಲ್​ಗೆ ವಯಸ್ಸು ಹೆಚ್ಚಿದಂತೆ ಕ್ರೇಜಿ ಫ್ಯಾನ್ಸ್ ಹುಟ್ಟಿಕೊಳ್ತಿದ್ದಾರೆ.
ಇದನ್ನೂ ಓದಿ:CSKಯಲ್ಲಿ ದಿನಕ್ಕೊಂದು ಬೆಳವಣಿಗೆ.. ಧೋನಿ ಬಗ್ಗೆ CEO ಶಾಕಿಂಗ್ ಹೇಳಿಕೆ
/newsfirstlive-kannada/media/post_attachments/wp-content/uploads/2024/07/MS-DHONI.jpg)
ಕ್ರೇಜಿ ಫ್ಯಾನ್
ಅಭಿಮಾನ ಅಂದ್ರೇನೆ ಹಾಗೇ. ಅದು ಎಲ್ಲ ಗಡಿಯನ್ನೂ ಮೀರಿದ್ದು. ನೆಚ್ಚಿನ ಕ್ರಿಕೆಟರ್​​ನನ್ನ ಕಣ್ತುಂಬಿಕೊಳ್ಳಲು ಏನ್ ಬೇಕಾದ್ರೂ ಮಾಡೋಕೆ ತಯಾರಿರ್ತಾರೆ. ಅದನ್ನೆ ಗೌರವ್ ಕುಮಾರ್​ ಎಂಬಾತ ಮಾಡಿದ್ದಾನೆ. ಈತನ ತಲಾ ಧೋನಿಯ ಬಿಗ್​ ಫ್ಯಾನ್​​​. ಅದ್ಯಾವ ಮಟ್ಟಿಗೆ ಅಂದ್ರೆ ಮಾಹಿಯನ್ನ ನೋಡಲು ಡೆಲ್ಲಿಯಿಂದ ರಾಂಚಿಗೆ ಸೈಕಲ್​​​ನಲ್ಲಿ ಬರೋಬ್ಬರಿ 1,200 ಟ್ರಾವೆಲ್​ ಮಾಡಿ ನೆಚ್ಚಿನ ಆರಾಧಕನನ್ನ ಭೇಟಿಯಾಗಿದ್ದಾರೆ.
1200 ಕಿಲೋ ಮೀಟರ್​ ಅಂದ್ರೆ ಸುಲಭದ ಟ್ರಾವೆಲ್ ಅಲ್ಲ. ಅದು ಸೈಕಲ್​​​ ಏರಿ ಸಾವಿರಾರು ಮೈಲಿ ಪ್ರಯಾಣಿಸೋದಂದ್ರೆ ನಿಜಕ್ಕೂ ಕಷ್ಟವೇ. ಹತ್ತಾರು ಅಡೆತಡೆಗಳು. ಗಾಳಿ, ಮಳೆ, ರಾತ್ರಿ ಎನ್ನದೇ ಸೈಕಲ್​​ ನಲ್ಲಿ ಪ್ರಯಾಣಿಸಬೇಕು. ಆ ಕಠಿಣ ಟ್ರಾವೆಲ್​ನಲ್ಲಿ ಮಾಜಿ ಕ್ರೇಜಿ ಫ್ಯಾನ್​​ ಗೌರವ್ ಕುಮಾರ್​ ಗೆದ್ದಿದ್ದಾನೆ. ತನ್ನ ಹೃದಯ ಸಾಮ್ರಾಟನ ನೋಡಿದ ಆತನ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಕೊನೆಗೂ ಧೋನಿ ಸರ್ನಾ ಭೇಟಿಯಾದೆ. ಬಹಳ ಖುಷಿ ಆಯ್ತು. ಅವರ ಹಿರಿಯ ಸಹೋದರ ಕೂಡ ಭೇಟಿಯಾದ್ರು. ಅವರ ಜೊತೆ ಫಾರ್ಮ್ಹೌಸ್ ಸುತ್ತಾಡಿದೆ. ಸೆಕ್ಯೂರಿಟಿ ಕಾರಣದಿಂದ ಧೋನಿ ಸರ್ ಫೋಟೋ ಹಾಗೂ ವಿಡಿಯೋ ಸಿಗಲಿಲ್ಲ. ಆದರೆ ಅವರು ತಮ್ಮ ಹಸ್ತಾಕ್ಷರವುಳ್ಳ, ಚೆನ್ನೈ ಸೂಪರ್ ಕಿಂಗ್ಸ್ ಜರ್ಸಿ ಕೊಟ್ಟರು. ನಿಜಕ್ಕೂ ನಾನು ತುಂಬಾ ಖುಷಿಗೊಂಡಿದ್ದೇನೆ-ಗೌರವ್ ಕುಮಾರ್, ಧೋನಿ ಫ್ಯಾನ್
ಇದನ್ನೂ ಓದಿ:RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ
/newsfirstlive-kannada/media/post_attachments/wp-content/uploads/2024/07/MS_DHONI_NEW_.jpg)
ಫಾರ್ಮ್​ಹೌಸ್​ ಮುಂದೆ ಟೆಂಟ್​​​​ನಲ್ಲಿ ಒಂದು ವಾರಗಳ ವಾಸ
ಅಭಿಮಾನಿ 1200 ಕಿ.ಮೀ ಸೈಕಲ್​ನಲ್ಲಿ ಪ್ರಯಾಣಿಸಿ ಡೆಲ್ಲಿಯಿಂದ ರಾಂಚಿಗೆ ತೆರಳಿದ್ರು ನಿಜ. ಆದರೆ ಮಾಹಿ ದರ್ಶನ ಮಾತ್ರ ಬೇಗ ಆಗ್ಲಿಲ್ಲ. ಹಾಗಂತ ಗೌರವ್ ಕುಮಾರ್ ನಿರಾಸೆಗೊಳ್ಳಲಿಲ್ಲ. ಧೋನಿಯನ್ನ ಭೇಟಿ ಆಗಲೇಕೆಂದು ಅವರ ಫಾರ್ಮ್​ಹೌಸ್ ಮುಂದೇನೆ ಟೆಂಟ್​ ಹಾಕಿ 6 ರಾತ್ರಿಗಳನ್ನ ಕಳೆದ್ರು. ಫೈನಲಿ ಫಾರ್ಮ್​ಹೌಸ್​​ನಿಂದ ಕಾರನ್ನ ಚಲಾಯಿಸಿಕೊಂಡು ಹೊರ ಬರೋವಾಗ ಧೋನಿಯನ್ನೆ ನೋಡಿಯೇ ಬಿಟ್ರು. ಮಾಹಿ ಕೂಡ ಅಭಿಮಾನಿಯತ್ತ ಕೈ ಬೀಸಿದ್ರು. ಆಗ ಅವರ ಮೊಗದಲ್ಲಿದ್ದ ಸಂಭ್ರಮ ಹೇಳತೀರದು.
ಕ್ರೇಜಿ ಫ್ಯಾನ್​ಗೆ ಸಿಎಸ್​ಕೆ ಜರ್ಸಿ ಗಿಫ್ಟ್​​​​ ಕೊಟ್ಟ ಧೋನಿ
ಧೋನಿ ಗುಣವೇ ಅಂತಹದ್ದು. ತಮ್ಮನ್ನ ಹೊತ್ತು ಮೆರೆಸಿದ ಅಭಿಮಾನಿಗಳನ್ನ ಕಂಡ್ರೆ ಮಾಹಿಗೆ ಎಲ್ಲಿಲ್ಲದ ಪ್ರೀತಿ. ತಮ್ಮನ್ನ ನೋಡಲು ಅಭಿಮಾನಿಯೊಬ್ಬ ಡೆಲ್ಲಿಯಿಂದ ರಾಂಚಿಗೆ ಬಂದು, ಮನೆ ಮುಂದೆ ಟೆಂಟ್​​​​ಹೌಸ್​ನಲ್ಲಿ ವಾಸವಿರೋ ಸುದ್ದಿ ತಿಳಿಯಿತು. ನೇರವಾಗಿ ಭೇಟಿ ಆಗದಿದ್ರೂ ಅಭಿಮಾನಿಗೆ ತಮ್ಮ ಅಟೋಗ್ರಾಫ್​​​ವುಳ್ಳ ಸಿಎಸ್​ಕೆ ಜರ್ಸಿ ನೀಡಿ ಖುಷಿಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/03/MS-DHONI-2.jpg)
ಹಿಂದೊಮ್ಮೆ ಡೆಲ್ಲಿ TOಚೆನ್ನೈ..
ಅಂದಹಾಗೇ ಈ ಕ್ರೇಜಿ ಫ್ಯಾನ್​ ಮ್ಯಾರಥಾನ್ ಸೈಕಲ್​​ ಟ್ರಾವೆಲ್ ಮಾಡಿ ಧೋನಿಯನ್ನ ಭೇಟಿ ಆಗ್ತಿರೋದು ಇದೇ ಮೊದಲೇನಲ್ಲ. ಹಿಂದೊಮ್ಮೆ ಡೆಲ್ಲಿಯಿಂದ ಚೆನ್ನೈಗೆ ಸೈಕಲ್​​ನಲ್ಲೆ 2100 ಕಿಲೋ ಮೀಟರ್​ ಕ್ರಮಿಸಿ, ಐಪಿಎಲ್​ ಪಂದ್ಯವನ್ನ ವೀಕ್ಷಿಸಿದ್ರು. ಮಾಹಿ ಆಟವನ್ನ ಕಣ್ತುಂಬಿಕೊಂಡು ಫುಲ್ ಖುಷ್​ ಆಗಿದ್ರು. ಇಂತಹ ಕ್ರೇಜಿ ಫ್ಯಾನ್ ಪಡೆದ ಧೋನಿ ನಿಜಕ್ಕೂ ಅಭಿಮಾನಿಗಳ ಪಾಲಿನ ಆರಾಧ್ಯದೈವವೇ ಬಿಡಿ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟಿ20 ಸರಣಿ; ಟೀಮ್​ ಇಂಡಿಯಾದಿಂದ ಧೋನಿ ಶಿಷ್ಯನಿಗೆ ಕೊಕ್​!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us