/newsfirstlive-kannada/media/post_attachments/wp-content/uploads/2024/04/DHONI-FAN-1.jpg)
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ ಜಗತ್ತಿನಲ್ಲಿ ಗ್ರೇಟ್ ಎನಿಸಿಕೊಂಡವರು. ಅವರು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅಭಿಮಾನಿಗಳ ಅಭಿಮಾನದಿಂದ ಮಾತ್ರವಲ್ಲ, ಲೆಜೆಂಡರಿ ಕ್ಯಾಪ್ಟನ್ಸಿ ಮತ್ತು ಅವರ ಕೆಲಸ ಕಾರ್ಯಗಳಿಂದಲೂ ಗ್ರೇಟ್​​ ಎಂದು ಹೆಸರಾದವರು.
ಇದನ್ನೂ ಓದಿ:ಬೇರೊಬ್ಬನ ಜೊತೆ ಮದುವೆ; ನೊಂದು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಜೀವಬಿಟ್ಟ ಪ್ರೇಮಿಗಳು
ಇದೀಗ ಧೋನಿ ಅವರ ಅಭಿಮಾನಿಯೊಬ್ಬ ಭಾರೀ ಸುದ್ದಿಯಲ್ಲಿದ್ದಾರೆ. ಏಪ್ರಿಲ್ 8 ರಂದು ಸಿಎಸ್​ಕೆ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಈ ವೇಳೆ ಧೋನಿ ಅವರ ಕ್ರೇಜಿ ಅಭಿಮಾನಿಯೊಬ್ಬ ತನ್ನ ಮೂವರು ಹೆಣ್ಮಕ್ಕಳೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದ. ಆದರೆ, ಅವರು ಟಿಕೆಟ್​ಗಾಗಿ ಬರೋಬ್ಬರಿ 64 ಸಾವಿರ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ.
ಇದನ್ನೂ ಓದಿ: RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!
ಅಭಿಮಾನಿ ಹೇಳುವ ಪ್ರಕಾರ, ನನಗೆ ಟಿಕೆಟ್ ಸಿಗಲಿಲ್ಲ. ಅದಕ್ಕಾಗಿ ನಾನು ಬ್ಲಾಕ್​​ನಲ್ಲಿ ಟಿಕೆಟ್ ಪಡೆದುಕೊಂಡಿದೆ. ಒಟ್ಟು 64 ಸಾವಿರ ರೂಪಾಯಿ ಆಯಿತು. ನಾನಿನ್ನೂ ಮಕ್ಕಳ ಸ್ಕೂಲ್ ಫೀಸ್​ ತುಂಬಿಲ್ಲ. ನಾವು ಒಮ್ಮೆ ಧೋನಿಯನ್ನು ನೋಡಬೇಕಿತ್ತು. ಮೂವರು ಮಕ್ಕಳು ಹಾಗೂ ನಾನು ಸಂತೋಷಗೊಂಡಿದ್ದೇನೆ ಎಂದಿದ್ದಾರೆ. ನನ್ನ ಅಪ್ಪ ಟಿಕೆಟ್ ಪಡೆಯಲು ತುಂಬಾ ಕಷ್ಟ ಪಟ್ಟರು. ಧೋನಿ ಆಡಲು ಬಂದಿರೋದನ್ನು ನೋಡಿ ತುಂಬಾ ಖುಷಿ ಪಟ್ಟಿದ್ದೇವೆ ಎಂದು ಅವರ ಮಗಳೊಬ್ಬಳು ಹೇಳಿದ್ದಾರೆ.
I don't have money to pay the School Fees of my children, but spent Rs 64,000 to get black tickets to watch Dhoni, says this father. I am at a loss for words to describe this stupidity. pic.twitter.com/korSgfxcUy
— Dr Jaison Philip. M.S., MCh (@Jasonphilip8) April 11, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್