ಧೋನಿಯವರ ಬೈಕ್ಗಳನ್ನ ನೋಡಿದರೆ ಶಾಕ್ ಆಗೋದು ಪಕ್ಕಾ
ಬೈಕ್ಗಳ ಶೋರೂಮ್ ರೀತಿಯಿದೆ ಧೋನಿಯ ಫಾರ್ಮ್ಹೌಸ್..!
ಒಂದಾ, ಎರಡಾ.. ಫಾರ್ಮ್ಹೌಸ್ನ ಫುಲ್ ಇವೆ ಬೈಕ್, ಕಾರುಗಳು
ಬೈಕ್, ಕಾರು ಎಂದರೆ ಸಿನಿಮಾ ಸ್ಟಾರ್ಗಳು, ಕ್ರಿಕೆಟರ್ಸ್ಗೆ ಸಖತ್ ಕ್ರೇಜ್ ಇರುತ್ತದೆ. ಅದು ಯಾವ ಮಟ್ಟಿಗೆ ಎಂದರೆ ಅವುಗಳಿಗಾಗಿ ಪ್ರತ್ಯೇಕ ಫಾರ್ಮ್ಹೌಸ್ ನಿರ್ಮಾಣ ಮಾಡಿರುತ್ತಾರೆ. ಅವುಗಳನ್ನು ತಮ್ಮ ಮನೆಯ ಸದಸ್ಯನಂತೆ ನೋಡಿಕೊಳ್ಳುವುದು ಇದೆ. ಅದರಲ್ಲಿ ಭಾರತ ತಂಡದ ಮಾಜಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಗೆ ಬೈಕ್ಗಳೆಂದರೆ ಸಖತ್ ಕ್ರೇಜ್. ಕಾಲೇಜು ದಿನಗಳಿಂದಲೂ ಬೈಕ್ ಮೇಲೆ ಪ್ರೀತಿ ಬೆಳೆಸಿಕೊಂಡ ಚೆನ್ನೈ ಕ್ಯಾಪ್ಟನ್ ಫಾರ್ಮ್ಹೌಸ್ ಫುಲ್ ಬೈಕ್ಗಳನ್ನೇ ಕಲೆಕ್ಟ್ ಮಾಡಿದ್ದಾರೆ.
ಜಾರ್ಖಂಡ್ನ ರಾಂಚಿಯಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಧೋನಿ ಅವರು ಸುಮಾರು 100ಕ್ಕೂ ಹೆಚ್ಚು ಬೈಕ್ಗಳನ್ನು ಪಾರ್ಕ್ ಮಾಡಿದ್ದಾರೆ. ಅಲ್ಲದೇ ಇವುಗಳ ಜೊತೆ ಐಷಾರಾಮಿ ಕಾರುಗಳು ಕೂಡ ಆ ಫಾರ್ಮ್ಹೌಸ್ನಲ್ಲಿವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿದರೆ ನೀವು ಶಾಕ್ ಆಗುವುದಂತೂ ಗ್ಯಾರಂಟಿ. ಏಕೆಂದರೆ ಧೋನಿಯವರ ಬೈಕ್ ಮೇಲಿನ ಪ್ರೀತಿ ಎಂದರೆ ಇದು ಒಂದು ರೀತಿ ಹುಚ್ಚುತನ ಎಂದು ಅನಿಸಬಹುದು. ಆ ರೀತಿಯಲ್ಲಿ ಕೂಲ್ ಕ್ಯಾಪ್ಟನ್ ಬೈಕ್ಗಳನ್ನು ಖರೀದಿ ಮಾಡಿದ್ದಾರೆ.
ಸದ್ಯ ಟ್ವಿಟರ್ನಲ್ಲಿ ವೈರಲ್ ಆಗಿರೋ ಬೈಕ್ಗಳ ವಿಡಿಯೋದಲ್ಲಿ ಧೋನಿಯವರ ಧರ್ಮಪತ್ನಿ ಸಾಕ್ಷಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಅವರು, ಸೂಪರ್ ಇದೊಂದು ಅಮೆಜಿಂಗ್ ಆಗಿದೆ. ಧೋನಿ ಫಾರ್ಮ್ಹೌಸ್ಗೆ ಬರುತ್ತಿರುವುದು ಇದು 4ನೇ ಬಾರಿ. ಈ ರೀತಿ ಬೈಕ್ಗಳನ್ನು ಕಲೆಕ್ಟ್ ಮಾಡುವುದು ಒಂದು ರೀತಿ ಮ್ಯಾಡ್ನೇಸ್ ಆಗಿದ್ದು ಇಂತವರು ಇರುತ್ತಾರಾ ಎನಿಸುತ್ತಿದೆ. ಇದೊಂದು ಸಾಧನೆ, ಇದನ್ನು ನಂಬಲು ಆಗುತ್ತಿಲ್ಲ. ನಾನು ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಇದು ಬೈಕ್ ಶೋರೂಮ್ ರೀತಿ ಕಾಣುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಬಳಿಕ ಸಾಕ್ಷಿ ಅವರು ಧೋನಿಯವರಿಗೆ ಯಾಕೆ ಮಾಹಿ ಈ ರೀತಿ ಕಲೆಕ್ಟ್ ಮಾಡಿದ್ದು ಇವುಗಳ ಅವಶ್ಯಕತೆ ಏನಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಧೋನಿ, ವೆಂಕಟೇಶ್ ಪ್ರಸಾದ್ ಮಾತನಾಡುವಾಗ ನಡುವೆ ಮಾತನಾಡಿ, ಇಲ್ಲಿಗೆ ನಾನು ಬರುತ್ತಿರುವುದು ಇದೇ ಮೊದಲು ಎಂದು ತಮಾಷೆ ಮಾಡಿದರು. ನನ್ನ ಮನೆಯಲ್ಲಿ ಏನಾದರೂ ಇರಬೇಕು ಎಂದು ಆಸೆ ಪಡುತ್ತಿದ್ದೆ. ನನ್ನದೇ ಆದ ಏನಾದರೂ ಒಂದು ಇರಬೇಕು ಎಂದುಕೊಂಡಿದ್ದೆ. ಹೀಗಾಗಿ ಬೈಕ್ಗಳನ್ನು ನಾನು ಆಯ್ಕೆ ಮಾಡಿಕೊಂಡೆ. ಈ ಫಾರ್ಮ್ಹೌಸ್ ಹಿಂದೆ ಬಾಡ್ಮಿಂಟನ್ ಕೋರ್ಟ್ ಇದೆ ಎಂದು ಧೋನಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕಾರು ಮತ್ತು ಬೈಕ್ ಕಲೆಕ್ಷನ್ ಕಂಡು ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಬೆರಗಾಗಿದ್ದಾರೆ. ರಾಂಚಿಯಲ್ಲಿರುವ ಮಾಹಿ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಧೋನಿ ಗ್ಯಾರೇಜ್ಗೆ ಭೇಟಿ ನೀಡಿದ್ದಾರೆ. ಅಲ್ಲಿನ ದೃಶ್ಯವನ್ನು ತಮ್ಮ ಟ್ವಿಟ್ಟರ್ನಲ್ಲೂ ಹಂಚಿಕೊಂಡಿದ್ದಾರೆ.… pic.twitter.com/KafbtYOAQu
— NewsFirst Kannada (@NewsFirstKan) July 18, 2023