/newsfirstlive-kannada/media/post_attachments/wp-content/uploads/2024/04/DHONI-1.jpg)
ಎಂ.ಎಸ್​.ಧೋನಿ ಬಂದರು. ಭರ್ಜರಿ ಮೂರು ಸಿಕ್ಸರ್ ಬಾರಿಸಿದರು. ಅಭಿಮಾನಿಗಳಿಗೆ ರಸದೌತಣ ನೀಡಿ ಹೋದರು. ಮುಂಬೈ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನಿನ್ನೆಯ ಪಂದ್ಯವನ್ನು ಧೋನಿ ಅಭಿಮಾನಿಗಳು ಯಾವತ್ತೂ ಮರೆಯಲ್ಲ. ಅದಕ್ಕೆ ಕಾರಣ, ನಾಲ್ಕು ಬಾಲ್​ನಲ್ಲಿ 20 ರನ್​ ಬಾರಿಸಿದ ರೋಚಕ ಕ್ಷಣಗಳು!!
ಧೋನಿ ಬರ್ತಿದ್ದಂತೆಯೇ ಮೈದಾನದಲ್ಲಿ ಅಭಿಮಾನಿಗಳ ಕೇಕೆ, ಸಿಳ್ಳೆ, ಅಭಿಮಾನದ ಘೋಷಣೆಗಳು ಜೋರಾಗಿದ್ದವು. 20ನೇ ಓವರ್​ನ ಕೊನೆಯ ನಾಲ್ಕು ಬಾಲ್​ಗಳನ್ನು ಎದುರಿಸಿದ ಧೋನಿ ಮೂರು ಸಿಕ್ಸರ್​ ಹಾಗೂ ಎರಡು ರನ್​ಗಳನ್ನು ತೆಗೆದುಕೊಂಡರು. ಧೋನಿ ನೀಡಿದ 20 ರನ್​ಗಳ ಅಮೂಲ್ಯ ಕಾಣಿಕೆಯಿಂದ ಸಿಎಸ್​ಕೆ ತಂಡ 206 ರನ್​ಗಳನ್ನು ಪೇರಿಸುವಲ್ಲಿ ಯಶಸ್ವಿ ಆಯಿತು.
ಇದನ್ನೂ ಓದಿ:ಧೋನಿ ಸಿಕ್ಸ್ ಹೊಡೆಯಲಿ ಅಂತಾ ಕೆಟ್ಟ ಬೌಲಿಂಗ್ -ಹಾರ್ದಿಕ್ ಪಾಂಡ್ಯ ಸುತ್ತ ಮತ್ತೊಂದು ವಿವಾದ
ಇನ್ನು, ಧೋನಿ ಬ್ಯಾಟಿಂಗ್ ಮುಗಿಸಿ ಡ್ರೆಸಿಂಗ್​ ರೋಮ್​​ನತ್ತ ಹೊರಟಾಗ, ಅಭಿಮಾನಿಗಳಿಗೆ ಚಮಕ್ ನೀಡಿದರು. ಮೆಟ್ಟಿಲು ಹತ್ತುತ್ತಿದ್ದ ಅವರು, ಸಡನ್​​ ಆಗಿ ಅಭಿಮಾನಿಗಳ ತಿರುಗಿ, ಕೈಯಲ್ಲಿದ್ದ ಬಾಲ್ ನೀಡಿ ಹೋದರು. ಧೋನಿಯಿಂದ ಬಾಲ್ ಸ್ವೀಕರಿಸಿದ ಅಭಿಮಾನಿ ಫುಲ್ ಖುಷ್ ಆದರು. ಮುಂಬೈ ಇಂಡಿನ್ಸ್​ ತಂಡವು, ಸಿಎಸ್​ಕೆ ವಿರುದ್ಧ 20 ರನ್​ಗಳ ಸೋಲನ್ನು ಕಂಡಿತು.
MS Dhoni giving the ball to a young fan at Wankhede.
- Beautiful gesture by Dhoni, He's winning hearts of everyone...!!!! ❤️🐐 pic.twitter.com/kSIQMLOXOV— Tanuj (@ImTanujSingh) April 14, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us