newsfirstkannada.com

ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?

Share :

Published September 30, 2024 at 9:25am

Update September 30, 2024 at 9:26am

    IPL ಟೀಮ್​ನಲ್ಲಿ ಈ ಸಲ 6 ಪ್ಲೇಯರ್ಸ್ ರಿಟೈನ್​ಗೆ ಚಾನ್ಸ್

    ಚೆನ್ನೈ ಸೂಪರ್ ಕಿಂಗ್ಸ್​​ನಲ್ಲಿ ಮತ್ತೆ ಎಂ.ಎಸ್ ಧೋನಿ ಹವಾ

    ಐಪಿಎಲ್​ನಲ್ಲಿ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ?

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ನ ಮೆಗಾ ಹರಾಜು ಈ ವರ್ಷದ ಕೊನೆಗೆ ನಡೆಯಲಿದ್ದು ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಐಪಿಎಲ್ ಪ್ರಕ್ರಿಯೆಗೆ ಸಿದ್ಧತೆ ಭರದಿಂದ ನಡೆಯುತ್ತಿವೆ. ಆಟಗಾರರನ್ನ ರಿಟೈನ್ ಮಾಡಿಕೊಳ್ಳುವ ಕುರಿತು ಬಿಸಿಸಿಐ ನಿರ್ಧಾರ ಪ್ರಕಟ ಮಾಡಿದೆ. ಇದರ ಜೊತೆಗೆ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿರುವ ಎಂ.ಎಸ್​ ಧೋನಿ ಕೋಟಿ ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

ಐಪಿಎಲ್ 2008ರ ನಿಯಮದ ಪ್ರಕಾರ ಯಾವುದೇ ಪ್ಲೇಯರ್ ಇಂಟರ್​​ನ್ಯಾಷನಲ್ ಕ್ರಿಕೆಟ್​ನಿಂದ ನಿವೃತ್ತಿಯಾದ್ರೆ ಅಥವಾ ಬಿಸಿಸಿಐ ಒಪ್ಪಂದದಿಂದ 5 ವರ್ಷ ದೂರವಿದ್ದರೇ ಆ ಆಟಗಾರನನ್ನ ಅನ್​ಕ್ಯಾಪ್ಡ್ ಪ್ಲೇಯರ್ ಪಟ್ಟಿಗೆ ಸೇರಿಸಲಾಗುತ್ತದೆ. 2021ರ ವರೆಗೆ ಈ ರೂಲ್ಸ್​ ಬಳಕೆಗೆ ಬಾರದ ಕಾರಣ ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಎಂಎಸ್​ ಧೋನಿಗಾಗಿ ಇದನ್ನು ಮತ್ತೆ ಆರಂಭಿಸಲಾಗಿದೆ.​ ಧೋನಿ ಈ ಸಲ ಅನ್​​ಕ್ಯಾಪ್ಡ್​​ ಪ್ಲೇಯರ್ ಆಗಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸಂಭಾವನೆಯಲ್ಲಿ ಭಾರೀ ಕಡಿತವಾಗಿದೆ.

ಇದನ್ನೂ ಓದಿ: 6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

2022ರ ಆವೃತ್ತಿಯಲ್ಲಿ ಮಾಜಿ ಕೂಲ್ ಕ್ಯಾಪ್ಟನ್​ ಧೋನಿ ರಿಟೈನ್​ ಆಟಗಾರನಾಗಿ ಸಿಎಸ್​ಕೆಯಿಂದ 12 ಕೋಟಿ ಪಡೆಯುತ್ತಿದ್ದರು. ಕಳೆದ ಸೀಸನ್​​ನಲ್ಲೂ ಸಿಎಸ್​ಕೆ ಫ್ರಾಂಚೈಸಿ 12 ಕೋಟಿ ರೂ.ಗಳನ್ನ ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಈಗ ಧೋನಿ ಅನ್​​ಕ್ಯಾಪ್ಡ್​ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದು 8 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲ್ಲಿದ್ದಾರೆ. ಹೀಗಾಗಿ ಕೇವಲ 4 ಕೋಟಿ ರೂಪಾಯಿ ಮಾತ್ರ ಈ ಬಾರಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?

https://newsfirstlive.com/wp-content/uploads/2024/09/MS_DHONI_LOSS.jpg

Load More