/newsfirstlive-kannada/media/post_attachments/wp-content/uploads/2024/08/MS_DHONI-3.jpg)
ಐಪಿಎಲ್ 2025 ಯಾವಾಗ ಸಮೀಪಿಸುತ್ತೋ ಎಂದು ಕ್ರಿಕೆಟ್ ಅಭಿಮಾನಿಗಳು ತವಕದಲ್ಲಿದ್ದರೆ. ಇತ್ತ ಸಿಎಸ್ಕೆ ಅಭಿಮಾನಿಗಳು ಧೋನಿ ಈ ಬಾರಿ ತಂಡದಲ್ಲಿದ್ದಾರಾ? ಎಂಬ ಕುತೂಹಲದಲ್ಲಿದ್ದಾರೆ. ಆದರೆ ಇಂತಹ ಸಮಯದಲ್ಲಿ ಮಾಹಿ ಅಭಿಮಾನಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.
ಐಪಿಎಲ್ 2025ಕ್ಕೆ ಮುಂಚಿತವಾಗಿ ಸಿಎಸ್ಕೆ ತಂಡದಲ್ಲಿ ಮಾಜಿ ನಾಯಕನ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಹೊಸ ನಿಯಮಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿಯನ್ನು 4 ಕೋಟಿ ರೂಪಾಯಿಗೆ ತಂಡ ಉಳಿಸಿಕೊಳ್ಳಲು ಮುಂದಾಗಿದೆ. ಅನ್ಕ್ಯಾಪ್ಡ್ ಆಟಗಾರನಾಗಿ ಮಾಹಿಯನ್ನು ತಂಡದಲ್ಲಿ ಇರಿಸಿಕೊಳ್ಳಲು ಸಜ್ಜಾಗಿದೆ. ಆದರೆ ಮಾಹಿ ಮಾತ್ರ ಇಲ್ಲಿಯವರೆಗೆ ತನ್ನ ಲಭ್ಯತೆ ಬಗ್ಗೆ ಖಚಿತಪಡಿಸಿಕೊಂಡಿಲ್ಲವಂತೆ.
ಮಹೇಂದ್ರ ಸಿಂಗ್ ಧೋನಿ ಅಕ್ಟೋಬರ್ 29 ಅಥವಾ 30ರಂದು ಸಿಎಸ್ಕೆ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅಕ್ಟೋಬರ್ 28ರವರೆಗೆ ನಾನು ಯಾವ ಸಭೆಗಳಿಗೂ ಲಭ್ಯವಿರುವುದಿಲ್ಲ ಎಂದು ಮ್ಯಾನೇಜ್ಮೆಂಟ್ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: IND vs NZ; ಯುವ ಬ್ಯಾಟರ್ ಸರ್ಫರಾಜ್ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?
ಚೆನ್ನೈ ಸೂಪರ್ ಕಿಂಗ್ಸ್ ಸಿಇಓ ವಿಶ್ವನಾಥನ್ ಅವರು ಈ ಕುರಿತಾಗಿ, ಬಹುಬೇಡಿಕೆಯ ಆಟಗಾರರೊಬ್ಬರು ಅಕ್ಟೋಬರ್ 31ರ ಮೊದಲು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತಾರೆ. ಬಳಿಕ ಅಭ್ಯಾಸಕ್ಕೆ ಮರಳಲಿದ್ದಾರೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ
‘ನಾನು ಅವರಿಂದ ಯಾವುದೇ ಧೃಡೀಕರಣ ತೆಗೆದುಕೊಂಡಿಲ್ಲ. ಅವರು ನಮಗಾಗಿ ಆಡಲು ಬಯಸುತ್ತೇನೆ. ಅಕ್ಟೋಬರ್ 31ರ ಮೊದಲು ಖಚಿತಪಡಿಸಲಿದ್ದಾರೆ ಎಂಬ ಭಾವಿಸುತ್ತೇನೆ’ ಎಂದು ವಿಶ್ವನಾಥನ್ ತಿಳಿಸಿದ್ದಾರೆ.
ಸಿಎಸ್ಕೆ ತಂಡ ಅನ್ಕ್ಯಾಪ್ಡ್ ಆಟಗಾರನಾಗಿ ಧೋನಿಯನ್ನು ಉಳಿಸಿಕೊಳ್ಳಲು ಮುಂದಾಗಿದೆ. 120 ಕೋಟಿಗಳ ಬಜೆಟ್ನಿಂದ 4 ಕೋಟಿಯನ್ನು ಧೋನಿಗಾಗಿ ನೀಡಲಿದೆ. ಮಾಹಿ ಲಭ್ಯತೆ ಬಗ್ಗೆ ತಿಳಿಸಿದರೆ ಅನ್ಕ್ಯಾಪ್ಡ್ ಆಟಗಾರನಾಗಿ 43 ವರ್ಷದ ಧೋನಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ