newsfirstkannada.com

×

ಧೋನಿ ಸಿಕ್ಸ್ ಹೊಡೆಯಲಿ ಅಂತಾ ಕೆಟ್ಟ ಬೌಲಿಂಗ್ -ಹಾರ್ದಿಕ್ ಪಾಂಡ್ಯ ಸುತ್ತ ಮತ್ತೊಂದು ವಿವಾದ

Share :

Published April 15, 2024 at 7:17am

    ಪಾಂಡ್ಯ ಬೌಲಿಂಗ್​ ಮಾಡಿದ ರೀತಿಗೆ ಭಾರೀ ಖಂಡನೆ

    ದಂತಕತೆ ಸುನಿಲ್ ಗವಾಸ್ಕರ್​​ನಿಂದ ನೇರ ಆರೋಪ

    ಕೊನೆಗೆ 4 ಬಾಲ್​ನಲ್ಲಿ 20 ರನ್​ಗಳಿಸಿದ ಎಂ.ಎಸ್​.ಧೋನಿ

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಕೊನೆಯ ಓವರ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಮೂರು ಸಿಕ್ಸರ್​ಗಳನ್ನು ಬಾರಿಸಿದರು. ಹಾರ್ದಿಕ್ ಅವರ ಬಾಲ್​​ನಲ್ಲಿ ಮೂರು ಸಿಕ್ಸರ್​ ಹಾಗೂ ಕೊನೆಯ ಬಾಲ್​ನಲ್ಲಿ ಧೋನಿ ಎರಡು ರನ್​​ಗಳನ್ನು ತೆಗೆದುಕೊಂಡ ಪರಿಣಾಮ ಸಿಎಸ್​​ಕೆ ತಂಡ ಅತ್ಯುತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: 0, 9, 6, 7, 3 ! ನಂಬಿಕೆ ಉಳಿಸಿಕೊಳ್ಳದ ಕನ್ನಡಿಗ; ಚಿನ್ನದಂಥ ಅವಕಾಶ ಕೈಚೆಲ್ಲಿದ 7.75 ಕೋಟಿ ವೀರ..!

4 ಬಾಲ್​​ನಲ್ಲಿ 20 ರನ್​ ಬಾರಿಸಿದ ಧೋನಿ, ಸಿಎಸ್​ಕೆ ಸ್ಕೋರ್ 206 ಆಗುವಲ್ಲಿ ತುಂಬಾನೇ ಸಹಾಯ ಮಾಡಿದರು. ಕೊನೆಯ ಓವರ್​​ನಲ್ಲಿ ಭಾರೀ ರನ್​ ಬಿಟ್ಟುಕೊಟ್ಟ ಹಾರ್ದಿಕ್ ಪಾಂಡ್ಯ ಮೇಲೆ ದಂತಕತೆ ಹಾಗೂ ಕಮಂಟೇಟರ್​​ ಸುನಿಲ್ ಗವಾಸ್ಕರ್​ ಕಿಡಿಕಾರಿದ್ದಾರೆ. ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್​​, ಧೋನಿಗೆ ಪಾಂಡ್ಯ ರನ್ ಹೊಡೆಯಲು ಅನುಕೂಲ ಆಗುವ ರೀತಿಯಲ್ಲಿ ಬಾಲ್ ಮಾಡುತ್ತಿದ್ದಾರೆ. ಧೋನಿ ಬಾರಿಸುತ್ತಿರೋದನ್ನು ನೋಡಿದ್ರೆ, ಪಾಂಡ್ಯ ಉದ್ದೇಶಪೂರ್ವಕವಾಗಿಯೇ ಕೆಟ್ಟ ಬಾಲ್ ಮಾಡುತ್ತಿದ್ದಾರೆ. ಟೀಂ ಇಂಡಿಯಾದ ಹಿರಿಯ, ತನ್ನ ಪ್ರೀತಿಯ ಆಟಗಾರನಿಗೆ ಬಾಲಿಂಗ್ ಮಾಡಿದಂತೆ ತೋರುತ್ತಿದೆ ಎಂದು ಗವಾಸ್ಕರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುಂಬಾ, ತುಂಬಾ ಸಮಯಗಳ ನಂತರ ಇಂಥ ಕೆಟ್ಟ ಬೌಲಿಂಗ್​ ನೋಡ್ತಿದ್ದೇನೆ. ನಾನು ನನ್ನ ಹೀರೋನನ್ನು ಅಪ್ಪಿಕೊಂಡಂತೆ ಇತ್ತು. ಒಂದು ಸಿಕ್ಸ್ ಓಕೆ. ಎರಡನೇ ಬಾರಿ ಬೌಲಿಂಗ್ ಮಾಡುವಾಗಲೂ ಸಿಕ್ಸ್ ಹೊಡೆಯಲು ಅನುಕೂಲ ಆಗುವ ರೀತಿಯಲ್ಲಿ ಬಾಲ್ ಮಾಡಿದ್ದಾರೆ. ಮೂರನೇ ಬಾಲ್ ಕೂಡ ಫುಲ್ಟಾಸ್​ ಹಾಕಿಕೊಟ್ಟರು. ನನ್ನ ಪ್ರಕಾರ, ಇದೊಂದು ಆರ್ಡಿನರಿ ಬೌಲಿಂಗ್, ಆರ್ಡಿನರಿ ಕ್ಯಾಪ್ಟನ್ಸಿ ಅನ್ನೋ ಮೂಲಕ ಪಾಂಡ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್, 6 ವಿಕೆಟ್ ಕಳೆದುಕೊಂಡು 186 ರನ್​ಗಳಿಸಿ 20 ರನ್​ಗಳಿಂದ ಸೋಲನ್ನು ಕಂಡಿತು. ಈ ಮೂಲಕ ಮತ್ತೆ ಮುಂಬೈ ಇಂಡಿಯನ್ಸ್​ ಸೋಲಿನ ಅಭಿಯಾನವನ್ನು ಮುಂದುವರಿಸಿದೆ. 6 ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್​ ಕೇವಲ 2 ರಲ್ಲಿ ಮಾತ್ರ ಗೆದ್ದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ ಸಿಕ್ಸ್ ಹೊಡೆಯಲಿ ಅಂತಾ ಕೆಟ್ಟ ಬೌಲಿಂಗ್ -ಹಾರ್ದಿಕ್ ಪಾಂಡ್ಯ ಸುತ್ತ ಮತ್ತೊಂದು ವಿವಾದ

https://newsfirstlive.com/wp-content/uploads/2024/04/MS-DHONI-9.jpg

Load More