ಧೋನಿ ಸ್ಥಾನಕ್ಕೆ ಪರ್ಫೆಕ್ಟ್ ರಿಪ್ಲೇಸ್ಮೆಂಟ್ ಯಾರು ಆಗ್ತಾರೆ?
2025 IPL ರಿಟೈನ್- ರಿಲೀಸ್ ಲೆಕ್ಕಾಚಾರಗಳು ಜೋರಾಗಿದೆ
ಕಳೆದ ಸೀಸನ್ನಲ್ಲಿ ಕ್ಯಾಪ್ಟನ್ ಸ್ಥಾನ ಬಿಟ್ಟಿದ್ದೇಕೆ MS ಧೋನಿ?
ಐಪಿಎಲ್ ಹತ್ತಿರವಾದ್ರೆ ಸಾಕು.. ಇದೇನಾ ಧೋನಿ ಆಡೋ ಕೊನೆ ಸೀಸನ್ ಆ ಅನ್ನೋ ಪ್ರಶ್ನೆ ಸಖತ್ ಸೌಂಡ್ ಮಾಡುತ್ತೆ. ಆದ್ರೆ, ಈ ಬಾರಿಯ ಐಪಿಎಲ್ಗೂ ಮುನ್ನ ಧೋನಿಯ ರಿಟೈರ್ಮೆಂಟ್ ಸುದ್ದಿ ಸದ್ದು ಮಾಡ್ತಿದೆ. ಆ ಒಂದು ದಿನ ಹತ್ತಿರವಾಗ್ತಿರುವ ಹೊತ್ತಿನಲ್ಲಿ, ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಹಾಗಾದ್ರೆ, ಧೋನಿ ಐಪಿಎಲ್ಗೆ ಗುಡ್ ಹೇಳ್ತಾರಾ?.
ಇದನ್ನೂ ಓದಿ: ಸಿನಿಮಾ ಹೀರೋ, ಹೀರೋಯಿನ್ ಥರಾ ನೀವು ಕಾಣಬೇಕಾ? ಅದು IV ಬ್ಯೂಟಿ ಥೆರಪಿಯಿಂದ ಮಾತ್ರ ಸಾಧ್ಯ!
ಅಂದ್ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದೆ. ಸಿಎಸ್ಕೆ ಫ್ರಾಂಚೈಸಿ ಮಾಡಿರೋ ಈ ಪೋಸ್ಟ್ ಪರೋಕ್ಷವಾಗಿ ಧೋನಿಯ ನಿವೃತ್ತಿಯ ಸುಳಿವನ್ನ ನೀಡ್ತಿದೆ. ಇತ್ತಿಚಿನ ಬೆಳವಣಿಗೆಗಳು ಕೂಡ ಈ ಅನುಮಾನಕ್ಕೆ ಕಾರಣವಾಗಿವೆ. ಬ್ಯಾಕ್ಗ್ರೌಂಡ್ನಲ್ಲಿ ಮನಸ್ಸಿಗೆ ನಾಟುವ ಲಿರಿಕ್ಸ್.. ಈ ವಿಡಿಯೋ ನೋಡಿದ್ರೆ, ಎಂಥವರ ಮನಸ್ಸು ಕೂಡ ಭಾರವಾಗುತ್ತೆ.
ಇದನ್ನೂ ಓದಿ: ಗಂಭೀರ್ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?
ಕಳೆದ ಮೂರ್ನಾಲ್ಕು ದಿನದಿಂದ ಇಂಡಿಯನ್ ಕ್ರಿಕೆಟ್ನಲ್ಲಿ ಸೀಸನ್-18ರ ಐಪಿಎಲ್ ಟಾಕ್ ಆಫ್ ದಿ ಟೌನ್ ಆಗಿದೆ. ಯಾವ ಆಟಗಾರ, ಯಾವ ತಂಡಕ್ಕೆ ಹೋಗ್ತಾರೆ ಅನ್ನೋ ರೂಮರ್ಸ್ ಸಖತ್ ಸೌಂಡ್ ಮಾಡ್ತಿವೆ. ಆದ್ರೆ, ಈ ರೂಮರ್ಸ್ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹಂಚಿಕೊಂಡಿರುವ ಈ ವಿಡಿಯೋ ಅಭಿಮಾನಿಗಳಲ್ಲಿ ತಲೆಗೆ ಹುಳ ಬಿಟ್ಟಿದೆ.
2025ರ ಐಪಿಎಲ್ಗೂ ಮುನ್ನವೇ ಧೋನಿ ರಿಟೈರ್ಮೆಂಟ್..?
ಪ್ರತಿ ಸೀಸನ್ ಶುರುವಾದಾಗಲೂ ಧೋನಿ ನಿವೃತ್ತಿಯ ಸುದ್ದಿ ಸದ್ದು ಮಾಡುತ್ತೆ. ಆದ್ರೆ, ಈ ಸಲ ಐಪಿಎಲ್ ಅರಂಭಕ್ಕೂ ಮುನ್ನವೇ ಸದ್ದು ಮಾಡ್ತಿದೆ. ಇದಕ್ಕೆಲ್ಲ ಕಾರಣ ಮುಂಬರೋ ಮೆಗಾ ಆಕ್ಷನ್. ಮೆಗಾ ಆಕ್ಷನ್ಗೂ ಮುನ್ನ ರಿಟೈನ್ ರಿಲೀಸ್ ಪ್ರಕ್ರಿಯೆ ಫ್ರಾಂಚೈಸಿಗಳ ವಲಯದಲ್ಲಿ ಜೋರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರಲು ರಿಷಬ್ ಪಂತ್ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿಯೇ ಮಿಸ್ಟರ್ ಕೂಲ್ ಧೋನಿ, ಐಪಿಎಲ್ಗೆ ಗುಡ್ ಬೈ ಹೇಳ್ತಾರಾ ಎಂಬ ಪ್ರಶ್ನೆ ಹುಟ್ಟಿಸಿದೆ.
ಟೀಮ್ ಇಂಡಿಯಾಗೆ ಧೋನಿ ಉತ್ತರಾಧಿಕಾರಿಯಾಗಿ ಎಂಟ್ರಿ ನೀಡಿದ್ದ ಪಂತ್, ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಎಂಟ್ರಿ ನೀಡುವ ಸಾಧ್ಯತೆ ಇದೆ. ಡೆಲ್ಲಿ ಡ್ಯಾಶರ್ ಪಂತ್ ಐಪಿಎಲ್ ಕಂಡ ಸಕ್ಸಸ್ಫುಲ್ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಕೆಟ್ ಹಿಂದೆ ಗೇಮ್ ರೀಡ್ ಮಾಡೋ ಕಲೆ ಹೊಂದಿರೋ ಪಂತ್, ಅದ್ಭುತ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಧೋನಿಗೆ ಪರ್ಫೆಕ್ಟ್ ರಿಪ್ಲೇಸ್ಮೆಂಟ್ ಎನ್ನಲಾಗ್ತಿದೆ.
ಧೋನಿ ಸ್ಥಾನಕ್ಕೆ ಪರ್ಫೆಕ್ಟ್ ರಿಪ್ಲೇಸ್ಮೆಂಟ್ ರಿಷಬ್ ಪಂತ್..!
ಜೊತೆಗೆ ಪಂತ್ ಧೋನಿಯ ಪಕ್ಕಾ ಶಿಷ್ಯ. ಪಂತ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗ ತಿದ್ದಿ ತೀಡಿ ಬೆಳೆಸಿದ ಗುರು. ಆನ್ಫೀಲ್ಡ್ ಹಾಗೂ ಆಫ್ ದ ಫೀಲ್ಡ್ನಲ್ಲಿ ಧೋನಿಯ ಜೊತೆ ಪಂತ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಿಎಸ್ಕೆ ಫ್ರಾಂಚೈಸಿಯಲ್ಲೂ ಹಲವರು ಪಂತ್ ಆಪ್ತರಿದ್ದಾರೆ. ಸಿಎಸ್ಕೆ ತಂಡಕ್ಕೂ ಪಂತ್ರಂತ ಡೈನಾಮಿಕ್ ಆಟಗಾರ ಬೇಕಿದೆ. ಹೀಗಾಗಿ ಪಂತ್ ಸಿಎಸ್ಕೆ ಸೇರೋ ಸುದ್ದಿ ನಿಜವಾಗೋ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಲಾರಿ.. ಡ್ರೈವರ್ ಸೇಫ್ ಆದ್ರಾ?
ಈಗಾಗಲೇ ಧೋನಿಯ ಕ್ರಿಕೆಟ್ ಕರಿಯರ್ ಯುಗಾಂತ್ಯಕ್ಕೆ ತಲುಪಿದೆ. ಕಳೆದ 2 ಸೀನಸ್ಗಳಿಂದ ಇಂಜುರಿ ನೋವಿನಲ್ಲೇ ವಿಕೆಟ್ ಕೀಪಿಂಗ್ ಆ್ಯಂಡ್ ಬ್ಯಾಟಿಂಗ್ ಮಾಡ್ತಿದ್ದಾರೆ. ಮುಂದಿನ ಸೀಸನ್ಗೂ ಮುನ್ನ ಧೋನಿಯ ವಯಸ್ಸು 44ರ ಗಡಿ ದಾಟಲಿದೆ. ಹೀಗಾಗಿ ಕಳೆದ ಸೀಸನ್ನಲ್ಲಿ ನಾಯಕತ್ವ ತ್ಯಜಿಸಿದ ಧೋನಿ, ಮುಂಬರೋ ಸೀಸನ್ಗೂ ಮುನ್ನ ಆಟಕ್ಕೆ ವಿದಾಯ ಹೇಳೋ ಸಾಧ್ಯತೆಯಿದೆ. ಡಿಸೆಂಬರ್ನಲ್ಲಿ ಮೆಗಾ ಆಕ್ಷನ್ ನಡೆಯಲಿದ್ದು, ಅದಕ್ಕೂ ಮುನ್ನವೇ ಧೋನಿ ರಿಟೈರ್ಮೆಂಟ್ ಹೇಳೋ ಸಾಧ್ಯತೆಯಿದೆ.
ಇದನ್ನೂ ಓದಿ: ಮಫ್ಲರ್ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?
ಧೋನಿ ಫ್ಯಾನ್ಸ್ಗೆ ಆತಂಕ ಮೂಡಿಸಿದ ಆ ದಿನಾಂಕ..!
ಒಂದ್ಕಡೆ ಧೋನಿಯ ಸೀಸನ್-18ರ ಐಪಿಎಲ್ ಆಡೋದು ಡೌಟ್ ಅನ್ನೋ ಸುದ್ದಿ ಹಬ್ಬಿದೆ. ಈ ಹೊತ್ತಿನಲ್ಲೇ ಆ ದಿನಾಂಕವೊಂದು ಹತ್ತಿರ ಬರ್ತಾ ಇದೆ. ಇದು ಫ್ಯಾನ್ಸ್ ಮನದಲ್ಲಿ ಆತಂಕ ಮೂಡಿಸಿದೆ. ಅಂದ್ಹಾಗೆ ಆ ದಿನಾಂಕ ಆಗಸ್ಟ್ 15.
ಇದನ್ನೂ ಓದಿ: ಅಮೆರಿಕದ ಅಧ್ಯಕ್ಷರಾಗ್ತಾರಾ ಭಾರತ ಮೂಲದ ಕಮಲಾ ಹ್ಯಾರಿಸ್.. ಜೋ ಬೈಡನ್ ಹೇಳಿದ್ದೇನು?
2020 ಆಗಸ್ಟ್ 15 ನಿಮಗೆ ನೆನಪಿರಬಹುದು. ಆ ದಿನ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ಗುಡ್ ಬೈ ಹೇಳಿದ್ರು. 2019ರ ಸೆಮಿಫೈನಲ್ ಸೋಲಿನ ಬಳಿಕ ಟೀಮ್ ಇಂಡಿಯಾದಿಂದ ದೂರ ಸರಿದಿದ್ದ ಮಾಹಿ, 13 ತಿಂಗಳ ನಂತರ ಸಡನ್ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದರು. ಇದೀಗ ಐಪಿಎಲ್ ರಿಟೈನ್- ರಿಲೀಸ್ ಲೆಕ್ಕಾಚಾರಗಳು ಜೋರಾಗಿದೆ. ಆ ದಿನಾಂಕವೂ ಹತ್ತಿರ ಬರ್ತಿದೆ. ಅದೇ ದಿನ ದೇಶಭಕ್ತ ಮಾಹಿ ಮತ್ತೊಮ್ಮೆ ಶಾಕ್ ನೀಡ್ತಾರಾ ಎಂಬ ಅನುಮಾನ ಕಾಡ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ