newsfirstkannada.com

ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್​ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?

Share :

Published April 11, 2024 at 8:34am

    ಪೊಲೀಸರು ಮಿಹಿರ್ ದಿವಾಕರ್​ನನ್ನು ಬಂಧಿಸಿದ್ದು ಯಾಕೆ?

    ಧೋನಿ ಮತ್ತು ದಿವಾಕರ್​ ನಡುವೆ ಇರುವ ವಿವಾದ ಏನು?

    ದಿವಾಕರ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​, ಐಪಿಎಲ್ ಫ್ರಾಂಚೈಸಿ ಸಿಎಸ್​​ಕೆ ತಂಡದ ಆಟಗಾರ ಎಂ.ಎಸ್​.ಧೋನಿ ಅವರ ಮಾಜಿ ಬ್ಯುಸಿನೆಸ್ ಪಾರ್ಟ್ನರ್​ ಮಿಹಿರ್ ದಿವಾಕರ್​​​ನನ್ನು (Mihir Diwakar) ಪೊಲೀಸರು ಬಂಧಿಸಿದ್ದಾರೆ.

ದಿವಾಕರ್ ವಿರುದ್ಧ ಧೋನಿ 15 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಮಿಹಿರ್ ದಿವಾಕರ್ ಕ್ರಿಕೆಟ್ ಅಕಾಡೆಮಿ (Aarka Sports Management Pvt Ltd) ಆರಂಭಿಸಿದ್ದು, ಅದಕ್ಕೆ ಧೋನಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ರೊಚ್ಚಿಗೆದ್ದ ಆಪ್ತ; ಸಚಿವ ಸ್ಥಾನಕ್ಕೆ, ಆಮ್​ ಆದ್ಮಿ ಪಕ್ಷಕ್ಕೆ ಗುಡ್​ಬೈ ಹೇಳಿದ ಮುತ್ಸದ್ಧಿ..!

ರಾಂಚಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಧೋನಿ ದೂರು ದಾಖಲಿಸಿದ್ದರು. ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಈ ಕಂಪನಿಯ ನಿರ್ದೇಶಕರಾಗಿದ್ದಾರೆ. ಜೈಪುರದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲು ಧೋನಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಜೈಪುರ ಪೊಲೀಸರು ದಿವಾಕರ್ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

ಅಂದ್ಹಾಗೆ ಧೋನಿ ಆಗಸ್ಟ್ 15, 2021 ರಂದು ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಹೀಗಿದ್ದೂ ದಿವಾಕರ್ ದೇಶ ಹಾಗೂ ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ನಡೆಸುವುದು ಮತ್ತು ಧೋನಿ ಹೆಸರನ್ನು ಬಳಸಿದ್ದಾರೆ ಎಂಬ ಆರೋಪ ಇದೆ. ಎಂಎಸ್ ಧೋನಿ ಹೆಸರಲ್ಲಿ ಒಟ್ಟು 15 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಧೋನಿ ಆರೋಪಿಸಿದ್ದರು. ಐಪಿಸಿ ಸೆಕ್ಷನ್ 406, 420, 467, 468, 471, ಮತ್ತು 120B ಅಡಿಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಆರ್​ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್​​ ಸವಾಲ್; ಪ್ಲೇಯಿಂಗ್​-11ರಲ್ಲಿ ಭಾರೀ ಬದಲಾವಣೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್​ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?

https://newsfirstlive.com/wp-content/uploads/2024/04/MS-DHONI-8.jpg

Load More