ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?

author-image
Bheemappa
Updated On
ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?
Advertisment
  • ನಕಲಿ ಖಾತೆಗೆ ಹಣ ಹಾಕಲು ನಿರಾಕರಿಸಿದ್ದ ಚಂದ್ರಶೇಖರ್
  • ಜಂಟಿ ನಿರ್ದೇಶಕರ ಕಚೇರಿಗೆ ಕಿಕ್ ಬ್ಯಾಕ್ ಹಣ ತಲುಪಿದೆ?
  • ಚಂದ್ರಶೇಖರ್ ಪವರ್ ಕಟ್ ಮಾಡಿದ್ದ ಎಂ.ಡಿ ಪದನ್ಮಾಭ್​

ವಾಲ್ಮೀಕಿ ನಿಗಮ ಹಗರಣದ ಅಸಲಿ ರಹಸ್ಯಗಳು ಬಗೆದಷ್ಟು ಬಯಲಾಗ್ತಿವೆ. ಮುಡಾ ಜೊತೆ ಸಿಎಂ ಸಿದ್ದರಾಮಯ್ಯಗೆ ವಾಲ್ಮೀಕಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹತ್ತಾರು ಕೋಟಿ ವರ್ಗಾವಣೆಯಲ್ಲಿ ನಿರ್ಲಕ್ಷ್ಯ ಮಾಡಿದ ಆರೋಪ ಕೇಳಿ ಬಂದಿದೆ.

ಹಗರಣದಲ್ಲಿ ಇ.ಡಿ ಆರ್ಥಿಕ ಇಲಾಖೆ ಕದತಟ್ಟುವ ಸಾಧ್ಯತೆ

2ನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಸಿದ್ದರಾಮಯ್ಯಗೆ ಒಂದಲ್ಲ ಒಂದು ಸಂಕಷ್ಟ ಕಾಡುತ್ತಲೇ ಇದೆ. ಮುಡಾ ಅಕ್ರಮದ ಜೊತೆಗೆ ವಾಲ್ಮೀಕಿ ನಿಗಮದ ಕೇಸ್​​ ಸಹ ಸಿದ್ದು ಸುತ್ತಿಕೊಳ್ಳುವ ಸಾಧ್ಯತೆ ಇದೆ.. 187 ಕೋಟಿಯಲ್ಲಿ ಅರ್ಧ ಹಣಕಾಸು ಇಲಾಖೆಯಿಂದ ಇನ್ನರ್ಧ ಟ್ರೇಜರಿ ಹುಜೂರ್ 2ರಿಂದ ಟ್ರಾನ್ಸಫರ್ ಮಾಡಿಲಾಗಿದೆ. ಅಂದ್ಹಾಗೆ ಇದು ಸಿದ್ದರಾಮಯ್ಯರ ಇಲಾಖೆಯ ಅಡಿಯಲ್ಲಿ ಬರುತ್ತೆ.

ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

publive-image

ಸಿಎಂಗೆ ಸಂಕಷ್ಟ!

  • ವಸಂತನಗರ ಬ್ಯಾಂಕ್ ಅಂಡ್ ಟ್ರೆಜರಿಯಿಂದ ಹಣ ಟ್ರಾನ್ಸಫರ್
  • ವಿತ್ತ ಇಲಾಖೆ ಬಿಲ್ ಪರಿಶೀಲಿಸದೇ ಪರ್ಮಿಷನ್ ನೀಡಿದ್ದೇಗೆ?
  • ಹತ್ತಾರು ಕೋಟಿ ವರ್ಗಾವಣೆಯಲ್ಲಿ ನಿರ್ಲಕ್ಷ್ಯದ ಆರೋಪ

ಈ ಕಾರಣಕ್ಕೆ ಸಿಎಂ ಮತ್ತು ಆರ್ಥಿಕ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ.. ಟ್ರೆಜರಿ ಅಧಿಕಾರಿಗಳಿಗೂ ನಡುಕ ಶುರುವಾಗಿದೆ.

ಟ್ರೆಜರಿ ಅಧಿಕಾರಿಗಳ ಕೈವಾಡ?

ಇ.ಡಿ ತನಿಖೆ ವೇಳೆ ಟ್ರೆಜರಿ ಅಧಿಕಾರಿಗಳ ಪಾತ್ರ ಪತ್ತೆ ಆಗಿದ್ದು, ಜಂಟಿ ನಿರ್ದೇಶಕರ ಕಚೇರಿಗೆ ಕಿಕ್ ಬ್ಯಾಕ್ ಹಣ ತಲುಪಿದ್ಯಂತೆ. ನಾಗೇಂದ್ರ ಗ್ಯಾಂಗ್ ಜೊತೆ ಅಧಿಕಾರಿಗಳ ಶಾಮೀಲಾಗಿದ್ದು, 48 ಲಕ್ಷ ಹಣ ಕಿಕ್​ಬ್ಯಾಕ್ ಆರೋಪ ಇದೆ.. ಹೀಗಾಗಿ ಟ್ರೆಜರಿ ಇಲಾಖೆಗೆ ತನಿಖೆ ಸುತ್ಕೊಳ್ಳಲಿದೆ ಎನ್ನಲಾಗುತ್ತಿದೆ. ಇನ್ನು ನಿಗಮದ ನಿರ್ದೇಶಕ ಪದ್ಮನಾಭ್​ ಆಡಿರುವ ಕಳ್ಳಾಟಗಳು ಒಂದೊಂದೇ ಬಯಲಾಗ್ತಿವೆ ಎಂಬ ಮಾಹಿತಿ ಇದೆ. ಶಿವಕುಮಾರ್ ಎಂಬ ವ್ಯಕ್ತಿಯ ಪಾತ್ರದ ಹಿಂದಿನ ಸೂತ್ರದಾರಿ ಅನ್ನೋದು ಬಹಿರಂಗವಾಗಿದೆ.

ಇದನ್ನೂ ಓದಿ:ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!

[caption id="attachment_74319" align="alignnone" width="800"]publive-image ಮೃತ ಎಸ್​ಪಿ ಚಂದ್ರಶೇಖರ್[/caption]

ಪದ್ಮನಾಭ ಕಳ್ಳಾಟ!

ನಕಲಿ ಖಾತೆಗೆ ಹಣ ಹಾಕಲು ಚಂದ್ರಶೇಖರ್ ನಿರಾಕರಿಸಿದ್ರು. ಇದರಿಂದ ಚಂದ್ರಶೇಖರ್​ ಅಧಿಕಾರವನ್ನು ಎಂಡಿ ಕಟ್​ ಮಾಡಿದ್ರು. ಚಂದ್ರಶೇಖರ್ ಬದಲು ಶಿವಕುಮಾರ್​ಗೆ ಹಣ ವರ್ಗಾವಣೆ ಹೊಣೆ ನೀಡಿದ್ದರು. ಚಂದ್ರಶೇಖರ್​ಗಿಂತ ಕಿರಿಯ ಹುದ್ದೆಯಲ್ಲಿ ಶಿವಕುಮಾರ್​ಗೆ ಬ್ಯಾಂಕ್ ವ್ಯವಹಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಹಗರಣದ ವಿಷ್ಯ ಗೊತ್ತಿದ್ರೂ ಶಿವಕುಮಾರ್​ ಸೈಲೆಂಟ್​​ ಆಗಿದ್ದ. ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಅಸಲಿ ರಹಸ್ಯಗಳು ಬಗೆದಷ್ಟು ಬಯಲಾಗ್ತಲೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment