ತಿಂಗಳಿಗೆ ಕೇವಲ 800 ರೂಪಾಯಿಗೆ ಕೆಲಸ ಮಾಡುತ್ತಿದ್ದ ಮಹಿಳೆ
ಬರೋಬ್ಬರಿ 25 ಸಾವಿರ ಕೋಟಿ ಆಸ್ತಿಗೆ ಒಡತಿ ಆಗಿದ್ದು ಹೇಗೆ..?
ಕೋಟಿ ಕೋಟಿ ಸಂಪಾದನೆ ಮಾಡಿದ ಮಹಿಳೆ ಬಗ್ಗೆ ನಿಮಗೆ ಗೊತ್ತಾ?
ಇತ್ತೀಚೆಗಷ್ಟೇ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗನ 3 ದಿನದ ಮದುವೆ ಭಾರೀ ಸದ್ದು ಮಾಡಿತ್ತು. ಅದರಲ್ಲೂ ಈ ಮದುವೆ ಅತೀ ಹೆಚ್ಚು ಸದ್ದು ಮಾಡಿದ್ದು ಮಾತ್ರ 5 ಸಾವಿರ ಕೋಟಿ ಖರ್ಚು ಮಾಡಿದ ವಿಚಾರಕ್ಕೆ. ಈ ಮಧ್ಯೆ ಮತ್ತೊಂದು ವಿಷಯಕ್ಕೆ ಅಂಬಾನಿ ಫ್ಯಾಮಿಲಿ ಭಾರೀ ಸುದ್ದಿಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಒಳ್ಳೆ ಜೋಡಿ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಅಂಬಾನಿ ಕುಟುಂಬದ ಸೊಸೆಯಾದ ಮೇಲೂ ಕೇವಲ 800 ರೂ. ಸಂಬಳಕ್ಕೆ ಶಾಲಾ ಶಿಕ್ಷಕಿಯಾಗಿ ನೀತಾ ಅಂಬಾನಿ ಕೆಲಸ ಮಾಡಿದ್ದರು ಎನ್ನುವ ವಿಚಾರ ನೀವು ನಂಬಲೇಬೇಕು. ಈ ಬಗ್ಗೆ ನೀತಾ ಅಂಬಾನಿ ಅವರೇ ಮಾತಾಡಿದ್ದಾರೆ.
ಯಾರು ಈ ನೀತಾ ಅಂಬಾನಿ..?
ಮುಖೇಶ್ ಅಂಬಾನಿ ಹೆಂಡತಿ ನೀತಾ ಅವರು ಜನಿಸಿದ್ದು ಮಧ್ಯಮ ವರ್ಗದ ಗುಜರಾತಿ ಕುಟುಂಬದಲ್ಲಿ. ಇವರು ನಾರ್ಸಿ ಮೊಂಜಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ನಲ್ಲಿ ಪದವಿ ಪಡೆದಿದ್ರು. ಅಷ್ಟೇ ಅಲ್ಲದೇ ನೃತ್ಯಗಾರ್ತಿಯಾಗಿದ್ದ ನೀತಾ ಅವರು ಸನ್ಪ್ಲವರ್ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ತಿಂಗಳಿಗೆ 800 ರೂ. ಸಿಗುತ್ತಿತ್ತು ಎಂದು ತಿಳಿದು ಬಂದಿದೆ.
View this post on Instagram
ಮುಖೇಶ್ ಅಂಬಾನಿ ಜೊತೆಗೆ ನೀತಾ ಮದುವೆ..!
ಬಳಿಕ 1985 ರಲ್ಲಿ ಧೀರೂಭಾಯಿ ಅಂಬಾನಿ ಹಿರಿಯ ಮಗ ಮುಖೇಶ್ ಅಂಬಾನಿ ಅವರನ್ನು ನೀತಾ ಅವರು ಮದುವೆಯಾದ್ರು. ಕೋಟ್ಯಾಧೀಶ್ವರರ ಮನೆ ಸೊಸೆಯಾದ ಮೇಲೂ 1 ವರ್ಷಗಳ ಕಾಲ ನೀತಾ ಅವರು 800 ರೂ. ಸಂಬಳಕ್ಕೆ ಶಾಲಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರು ಎನ್ನಲಾಗಿದೆ. ಸದ್ಯ ಇವರ ಆಸ್ತಿ 24877 ಕೋಟಿ ರೂ. ಎಂದು ವರದಿಯಾಗಿದೆ.
ಇದನ್ನೂ ಓದಿ: ದರ್ಶನ್ಗೆ ಜೈಲೂಟ ಫಿಕ್ಸ್.. ಮನೆಯೂಟ ಕೇಳಿದ್ದಕ್ಕೆ ಕೋರ್ಟ್ ಬಿಗ್ ಶಾಕ್; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ