newsfirstkannada.com

ನನ್ನ ಅಪ್ಪನಿಗೆ ವಿಷ ಹಾಕಿ ಸಾಯಿಸಿದ್ದಾರೆ -ಮುಖ್ತಾರ್ ಅನ್ಸಾರಿ ಪುತ್ರ ಗಂಭೀರ ಆರೋಪ

Share :

Published March 29, 2024 at 8:41am

Update March 29, 2024 at 8:43am

  ಗ್ಯಾಂಗ್​ಸ್ಟರ್ ಮುಖ್ತಾರ್ ಅನ್ಸಾರಿ ಸಾವಿನ ಬಗ್ಗೆ ಹಲವು ಅನುಮಾನ

  ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದಿರುವ ಅಧಿಕಾರಿಗಳು

  ಉತ್ತರ ಪ್ರದೇಶದ ಬಾಂಡಾ ಜಿಲ್ಲಾ ಜೈಲಿನಲ್ಲಿದ್ದ ಮುಖ್ತರ್ ಅನ್ಸಾರಿ

ಜೈಲು ಪಾಲಾಗಿದ್ದ ಗ್ಯಾಂಗ್​ಸ್ಟರ್​-ರಾಜಕಾರಣಿ ಮುಖ್ತಾರ್​ ಅನ್ಸಾರಿ ಸಾವು ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಅನ್ಸಾರಿ ಸಾವಿನ ಮೇಲೆ ಅನುಮಾನಗಳು ಶುರುವಾಗಿದ್ದು, ಸೂಕ್ತ ತನಿಖೆ ಆಗಬೇಕು ಎಂಬ ಕೂಗುಗಳು ಕೇಳಿಬಂದಿವೆ.

ಅವರ ಪುತ್ರ ಉಮರ್ ಅನ್ಸಾರಿ, ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅಪ್ಪನ ಸಾವಿನ ಬಗ್ಗೆ ನನಗೆ ಅಧಿಕಾರಿಗಳ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಾಧ್ಯಮಗಳ ಮೂಲಕ ಸಾವಿನ ಬಗ್ಗೆ ನನಗೆ ತಿಳಿದಿದೆ. ಸದ್ಯ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ಎರಡು ದಿನಗಳ ಹಿಂದೆ ನನ್ನ ತಂದೆಯನ್ನ ಭೇಟಿಯಾಗಲು ಬಂದಿದ್ದೆ, ಆದರೆ ಅವಕಾಶ ನೀಡಲಿಲ್ಲ. ನಮ್ಮ ತಂದೆಗೆ ವಿಷ ಹಾಕಿ ಸಾಯಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಿದ್ದೆ. ಇವತ್ತು ಅದನ್ನೇ ಹೇಳುತ್ತೇನೆ, ಸ್ವೋ ಪಾಯ್ಸನ್ ಹಾಕಿ ಸಾಯಿಸಿದ್ದಾರೆ. ಮಾರ್ಚ್ 19ರಂದು ಔತಣಕೂಟದಲ್ಲಿ ವಿಷ ಸೇವಿಸಿದ್ದಾರೆ. ನಾವು ನ್ಯಾಯಾಂಗದ ಮೊರೆ ಹೋಗುತ್ತೇವೆ. ನಮಗೆ ಅದರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಹೃದಯಾಘಾತ.. ಗ್ಯಾಂಗ್ ಸ್ಟಾರ್ & ರಾಜಕಾರಣಿ ಡಾನ್ ಮುಕ್ತಾರ್ ಅನ್ಸಾರಿ ಸಾವು

ಉತ್ತರ ಪ್ರದೇಶ ಬಾಂಡಾ ಜೈಲಿನಲ್ಲಿದ್ದ ಅನ್ಸಾರಿ ಶೌಚಾಲಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರಂತೆ. ಕೂಡಲೇ ಅವರನ್ನು ಬಾಂಡಾದ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮುಕ್ತಾರ್ ಅನ್ಸಾರಿ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​ಗಳು ದಾಖಲಾಗಿದ್ದವು. ಈ ಹಿಂದೆ ವಾರಾಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ ಮಾಡಿದ್ದ ಮುಕ್ತಾರ್ ಅನ್ಸಾರಿ ಶಾಸಕರ ಹತ್ಯೆ, ಕಿಡ್ನ್ಯಾಪ್ ಸೇರಿದಂತೆ 60ಕ್ಕೂ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪ ಇತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಅಪ್ಪನಿಗೆ ವಿಷ ಹಾಕಿ ಸಾಯಿಸಿದ್ದಾರೆ -ಮುಖ್ತಾರ್ ಅನ್ಸಾರಿ ಪುತ್ರ ಗಂಭೀರ ಆರೋಪ

https://newsfirstlive.com/wp-content/uploads/2024/03/MUKHTARI-ANSRI.jpg

Load More