newsfirstkannada.com

ಮುಂಬೈ ಹೋರ್ಡಿಂಗ್​ ಬಿದ್ದ ಕೇಸ್​ಗೆ ಹೊಸ ಟ್ವಿಸ್ಟ್​.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್​ ಶೋ

Share :

Published May 15, 2024 at 3:57pm

Update May 15, 2024 at 4:00pm

    ಭೀಕರ ಬೀರುಗಾಳಿಗೆ ಪೆಟ್ರೋಲ್ ಬಂಕ್ ಮೇಲೆ ಬಿದ್ದಿದ್ದ ಹೋರ್ಡಿಂಗ್

    ಹೋರ್ಡಿಂಗ್ ಬಿದ್ದ ರಭಸಕ್ಕೆ ಸಂಪೂರ್ಣ ನೆಲಕಚ್ಚಿದ್ದ ಪೆಟ್ರೋಲ್ ಬಂಕ್

    ಘಟನೆ ನಡೆದು 2 ದಿನಗಳು ಕಳೆದರು ರಕ್ಷಣಾ ಕಾರ್ಯಾಚರಣೆ ನಡೆದಿದೆ

ಮುಂಬೈ: ನಗರದ ಪೆಟ್ರೋಲ್ ಬಂಕ್ ಮೇಲೆ ಹೋರ್ಡಿಂಗ್ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದಲ್ಲಿ ಮತ್ತೆರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರಿಂದ ಸಾವಿನ ಸಂಖ್ಯೆ 16ಕ್ಕೆ ಏರಿಕೆ ಆದಂತೆ ಅಗಿದೆ.

ಭೀಕರ ಬಿರುಗಾಳಿಗೆ ಮುಂಬೈ ನಗರದ ಘಟಕೋಪುರದಲ್ಲಿ ಪೆಟ್ರೋಲ್​ ಬಂಕ್​ ಮೇಲೆ ಬೃಹತ್ ಗಾತ್ರದ ಹೋರ್ಡಿಂಗ್‌ ಬಿದ್ದು 14 ಮಂದಿ ಸಾವನ್ನಪ್ಪಿ, 75 ಮಂದಿ ಗಾಯಗೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಇನ್ನೂ ಜೆಸಿಬಿ, ಕ್ರೇನ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಎರಡು ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ 16ಕ್ಕೆ ಏರಿಕೆ ಆದಂತೆ ಆಗಿದೆ. ಘಟನೆ ನಡೆದು 2 ದಿನಗಳು ಕಳೆದರು ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದೆ. ಇಲ್ಲಿವರೆಗೆ ಸಿಲುಕಿದ್ದ 84 ಜನರನ್ನು ರಕ್ಷಣೆ ಮಾಡಿದೆ ಎಂದು ಎನ್​ಡಿಆರ್​ಎಫ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

40*40 ಅಡಿಗೆ ಅನುಮತಿ ಕೊಟ್ಟಿದ್ದ ಪಾಲಿಕೆ

ಹೋರ್ಡಿಂಗ್‌ ಅಳವಡಿಸಿದ್ದ ಮಾಲೀಕ ಭವೇಶ್‌ ಪ್ರಭುದಾಸ್‌ ಭಿಂದೆ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಘಟಕೋಪುರದಲ್ಲಿ ಪತನಗೊಂಡ ಹೋರ್ಡಿಂಗ್‌ ಸಹ ಅಕ್ರಮ ಎಂದು ಗೊತ್ತಾಗಿದ್ದು 40*40 ಅಡಿ ಹೋರ್ಡಿಂಗ್‌ ಅಳವಡಿಸಲು ಪಾಲಿಕೆ ಅನುಮತಿ ನೀಡಿತ್ತು. ಆದರೆ, ಭವೇಶ್‌ ಒಡೆತನದ ಈಗೊ ಮೀಡಿಯಾ ಸಂಸ್ಥೆ 120*120 ಅಡಿ ಅಳತೆಯ ಬೃಹತ್‌ ಹೋರ್ಡಿಂಗ್‌ ಅನ್ನು ಅಳವಡಿಸಿತ್ತು. ಇದೇ ದುರಂತಕ್ಕೆ ಕಾರಣವಾಗಿದೆ.

ಇಂದು ಘಾಟ್‌ಕೋಪರ್‌ನ ಘಟನಾ ಸ್ಥಳದಲ್ಲಿ ಬೆಳಗ್ಗೆ ರಕ್ಷಣಾ ಕಾರ್ಯಾ ನಡೆಸುತ್ತಿರುವಾಗ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ತಕ್ಷಣವೇ ಜಾಗೃತರಾದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಂದು ಸಂಜೆ ಅಥವಾ ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯವರು ಹೇಳಿದ್ದಾರೆ. ಹೀಗಾಗಿ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಜಿಲ್ಲೆಯಲ್ಲಿ ಭೀಕರ ಬರ, ಕುಡಿಯುವ ನೀರಿಗೂ ಹಾಹಾಕಾರ.. ಮಳೆಗಾಗಿ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು

ಘಟನೆ ನಡೆದ ಏರಿಯಾದಲ್ಲೇ ಮೋದಿ ರೋಡ್ ಶೋ

ಮೇ 20 ರಂದು 5ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಇಂದು ಪ್ರಧಾನಿ ಮೋದಿಯವರು ದುರಂತ ನಡೆದ ಘಟಕೋಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸುಮಾರು 2.5 ಕಿಮೀ ರೋಡ್ ಶೋವನ್ನು ಪ್ರಧಾನಿ ನಡೆಸಲಿದ್ದು ಬಳಿಕ ಮಹಾರಾಷ್ಟ್ರದ ಕಲ್ಯಾಣ್​ನಲ್ಲಿ ಱಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರೋಡ್ ಶೋ ಹಿನ್ನೆಲೆಯಲ್ಲಿ ಪೊಲೀಸರಿಂದ ಟ್ರಾಫಿಕ್ ಮಾರ್ಗಗಳನ್ನ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಹೋರ್ಡಿಂಗ್​ ಬಿದ್ದ ಕೇಸ್​ಗೆ ಹೊಸ ಟ್ವಿಸ್ಟ್​.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್​ ಶೋ

https://newsfirstlive.com/wp-content/uploads/2024/05/MUMBAI_16_DIED.jpg

Load More