newsfirstkannada.com

ಮತ್ತೆ ಕ್ಯಾಪ್ಟನ್ ಆಗುವಂತೆ ರೋಹಿತ್ ಕಾಲು ಹಿಡಿಯಿತಾ ಮುಂಬೈ​ ಫ್ರಾಂಚೈಸಿ.. ಇದಕ್ಕೆ ಹಿಟ್​ಮ್ಯಾನ್ ಏನಂದ್ರು?

Share :

Published April 4, 2024 at 3:01pm

    ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್​ ಆದ ಮೇಲೆ ಎಲ್ಲಾ ಚೆನ್ನಾಗಿಲ್ವಾ..?

    ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​ ತಂಡ

    ಮುಂಬೈ ಫ್ರಾಂಚೈಸಿ ಕೇಳಿದ್ದಕ್ಕೆ ರೋಹಿತ್ ಶರ್ಮಾ ಒಪ್ಪಿಕೊಂಡ್ರಾ?

ಮುಂಬೈ ಇಂಡಿಯನ್ಸ್​ ತಂಡಕ್ಕೆ ಆದ್ಯಾವ ದೆಸೆಯೋ ಏನೋ ಆಡಿರುವ 3 ಪಂದ್ಯಗಳಲ್ಲೂ ಸೋತು ಹೋಗಿದೆ. ಮುಂಬೈಯ ಕ್ಯಾಪ್ಟನ್​ ಬದಲಾವಣೆಯಿಂದ ಹಾಗೂ ಈ ಹ್ಯಾಟ್ರಿಕ್​ ಸೋಲಿನಿಂದ ಫ್ರಾಂಚೈಸಿಗೆ ಭಾರೀ ಅವಮಾನವಾಗಿದೆ. ಆದರೆ ಈ ಸೋಲನ್ನು ಮಾತ್ರ ರೋಹಿತ್ ಫ್ಯಾನ್ಸ್​ ಅಕ್ಷರಶಃ ಹಾರ್ದಿಕ್​ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್​ ಪ್ರಾಂಚೈಸಿ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದ್ದು ಮತ್ತೆ ಕ್ಯಾಪ್ಟನ್ ಆಗುವಂತೆ ಹಿಟ್​ ಮ್ಯಾನ್​ ರೋಹಿತ್ ಶರ್ಮಾರನ್ನ ಕೇಳಿಕೊಂಡಿದೆ ಎನ್ನಲಾಗಿದೆ.

ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯು, ಹಿಟ್​ಮ್ಯಾನ್​ ರೋಹಿತ್ ಶರ್ಮಾರನ್ನ ಟೀಮ್​ಗೆ ಮತ್ತೆ ನಾಯಕನಾಗುಂತೆ ನಿನ್ನೆ ಬೇಡಿಕೊಂಡಿದೆ. ಆದರೆ ಇದನ್ನು ರೋಹಿತ್ ಶರ್ಮಾ ನಿರ್ಗಳವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಹಿಟ್​ಮ್ಯಾನ್​ ಮುಂದಿನ ಸೀಸನ್​ನಲ್ಲಿ ಮುಂಬೈ ಪರ ಆಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದರೆ ಮುಂಬೈಗೆ ಹಾರ್ದಿಕ್ ಬಿಟ್ಟು ಮತ್ತೆ ಯಾರನ್ನು ನಾಯಕನಾಗಿ ಮಾಡಬೇಕು ಎನ್ನುವುದು ಫ್ರಾಂಚೈಸಿಗೆ ಗೊತ್ತಾಗುತ್ತಿಲ್ಲ. ರೋಹಿತ್ ಒಬ್ಬರೇ ಸದ್ಯಕ್ಕೆ ಆ ಸ್ಥಾನಕ್ಕೆ ಸಮರ್ಪಕ ವ್ಯಕ್ತಿ. ಆದ್ರೆ ರೋಹಿತ್ ಮತ್ತೆ ನಾಯಕನಾಗಲು ಒಪ್ಪಿತ್ತಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಂಪ್ಯೂಟರ್​, ಮೊಬೈಲ್​ ನೋಡುವವರೇ ಎಚ್ಚರ.. ಕಣ್ಣುಗಳ ರಕ್ಷಣೆ ಹೇಗೆ ಮಾಡಬೇಕು; ಇಲ್ಲಿವೆ ಟಿಪ್ಸ್​

ರೋಹಿತ್ ಶರ್ಮಾ​ರನ್ನ ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದೆ, ಇಳಿಸಿದ್ದು ವಕ್ರದಸೆ ಫ್ರಾಂಚೈಸಿಗೆ ಸುತ್ತಿಕೊಂಡಿದೆ. ಯಾವ ಮೈದಾನಕ್ಕೂ ಹೋದರೂ ಎದುರಾಳಿ ತಂಡದ ಆಟಗಾರರು ಮುಂಬೈ ವಿರುದ್ಧ ಸಿಕ್ಕಾಪಟ್ಟೆ ರನ್​ಗಳನ್ನ ಹೊಡೆದು ಗೆದ್ದು ಬೀಗುತ್ತಿದ್ದಾರೆ. ಇಡೀ ಐಪಿಎಲ್ ಇತಿಹಾಸದಲ್ಲೇ ಹೈದ್ರಾಬಾದ್​ ವಿರುದ್ಧ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಅತ್ಯಧಿಕ 277 ರನ್​ಗಳನ್ನ ಬಾರಿಸಿಕೊಂಡಿದೆ. ಇದೊಂದು ಫ್ರಾಂಚೈಸಿಗೆ ನುಂಗಲಾರದ ತುತ್ತಾಗಿದೆ. ಇದು ಅಲ್ಲದೇ ಮುಂಬೈ ಹ್ಯಾಟ್ರಿಕ್ ಸೋಲಿನಲ್ಲಿದೆ. ಮುಂದಿನ ಪಂದ್ಯವನ್ನು ಮುಂಬೈ ತಂಡ, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಭಾನುವಾರ ಮಧ್ಯಾಹ್ನ ಆಡಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮತ್ತೆ ಕ್ಯಾಪ್ಟನ್ ಆಗುವಂತೆ ರೋಹಿತ್ ಕಾಲು ಹಿಡಿಯಿತಾ ಮುಂಬೈ​ ಫ್ರಾಂಚೈಸಿ.. ಇದಕ್ಕೆ ಹಿಟ್​ಮ್ಯಾನ್ ಏನಂದ್ರು?

https://newsfirstlive.com/wp-content/uploads/2024/04/ROHIT_SHARMA-4.jpg

Load More