newsfirstkannada.com

ಹೈದರಾಬಾದ್​ಗೆ ಭರ್ಜರಿ ಗೆಲುವು; ಮುಂಬೈ ಹೀನಾಯ ಸೋಲಿಗೆ ಹಾರ್ದಿಕ್​ ಪಾಂಡ್ಯ ನಾಯಕತ್ವ ಕಾರಣ!

Share :

Published March 27, 2024 at 11:22pm

Update March 27, 2024 at 11:24pm

    ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಪಂದ್ಯ

    ಮುಂಬೈ ಇಂಡಿಯನ್ಸ್​ಗೆ ಸನ್​​ರೈಸರ್ಸ್​ ಹೈದರಾಬಾದ್ 278 ರನ್​ ಬಿಗ್​ ಟಾರ್ಗೆಟ್​​

    ಚೇಸ್​ ಮಾಡಲಾಗದೆ ಹೈದರಾಬಾದ್​​ ವಿರುದ್ಧ ಮುಂಬೈ ಇಂಡಿಯನ್ಸ್​​​ಗೆ ಸೋಲು!

ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ಗೆದ್ದು ಬೀಗಿದೆ.

ಹೈದರಾಬಾದ್​ ನೀಡಿದ ಬೃಹತ್​ ರನ್​ಗಳ ಬೆನ್ನತ್ತಿದ ಮುಂಬೈ ಇಂಡಿಯನ್ಸ್​​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಕೇವಲ 246 ರನ್​ ಗಳಿಸಿದೆ. ಹೀಗಾಗಿ ಬರೋಬ್ಬರಿ 31 ರನ್​ಗಳಿಂದ ಹಾರ್ದಿಕ್​ ಪಡೆ ಸೋತಿದೆ.

ಮುಂಬೈ ಪರ ರೋಹಿತ್​ 26, ಇಶಾನ್​ ಕಿಶನ್​ 34, ನಮನ್​​ 30, ತಿಕಲ್​ ವರ್ಮಾ 64, ಹಾರ್ದಿಕ್​ 24, ಟೀಮ್​ ಡೇವಿಡ್​​ 42 ರನ್​ ಗಳಿಸಿದ್ರು. ಒಂದು ರೀತಿ ಮುಂಬೈ ಸೋಲಿಗೆ ಹಾರ್ದಿಕ್​ ಪಾಂಡ್ಯ ಅವರೇ ಕಾರಣ ಎನ್ನಬಹುದು.

ಟಾಸ್​ ಗೆದ್ದುಕೊಂಡ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು ಅಕ್ಷರಶಃ ತಲೆಕೆಳಗಾಯಿತು. ಸನ್​ರೈಸರ್ಸ್​ ಹೈದರಾಬಾದ್​​​ ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 278 ರನ್​ಗಳ ಬೃಹತ್​ ಟಾರ್ಗೆಟ್​ ಅನ್ನು ಮುಂಬೈಗೆ ನೀಡಿದೆ. ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ಹೈದರಾಬಾದ್ ತಂಡದ ಬ್ಯಾಟ್ಸ್​ಮನ್​ಗಳು ಬೆಂಕಿ ಬ್ಯಾಟಿಂಗ್ ಮಾಡಿದರು.

ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಟ್ರಾವೀಸ್​ ಹೆಡ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 24 ಬಾಲ್​ನಲ್ಲಿ 3 ಸಿಕ್ಸರ್​​, 9 ಫೋರ್​​ ಸಮೇತ 64 ರನ್​​ ಸಿಡಿಸಿ ದಾಖಲೆ ಬರೆದರು. ಓಪನರ್​​​ ಟ್ರಾವಿಸ್​ ಹೆಡ್​ಗೆ ಸಾಥ್​ ನೀಡಿದ ಅಭಿಶೇಕ್​ ಶರ್ಮಾ ಮೊದಲು ಕೇವಲ 16 ಬಾಲ್​ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್​ನಲ್ಲಿ 7 ಸಿಕ್ಸರ್​​, 3 ಫೋರ್​ ಸಮೇತ 63 ರನ್​ ಚಚ್ಚಿ ಕ್ಯಾಚ್​ ನೀಡಿದ್ರು. ಇನ್ನು, ಏಡನ್​ ಮರ್ಕ್ರಮ್​​ ಮತ್ತು ಹೆನ್ರಿಕ್​ ಕ್ಲಾಸೆನ್​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಹೆನ್ರಿಕ್​ ಕ್ಲಾಸೆನ್ ಅಂತೂ ರೌದ್ರವಾತಾರ ತಾಳಿದರು. ಕೇವಲ 34 ಎಸೆತ ಎದುರಿಸಿದ ಕ್ಲಾಸೆನ್ 4 ಫೋರ್, 7 ಅಮೋಘವಾದ ಸಿಕ್ಸರ್ ನೆರವಿನಿಂದ 80 ರನ್​ಗಳನ್ನ ಬಾರಿಸಿದರು. ಮಾರ್ಕರಮ್ ಕೂಡ 28 ಎಸೆತದಲ್ಲಿ 1 ಸಿಕ್ಸ್​, 2 ಫೋರ್​ನಿಂದ 42 ರನ್​ಗಳನ್ನು ಕೆಲಹಾಕಿದರು. ಇದರಿಂದ ಹೈದರಾಬಾದ್ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 278 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.

ಇದನ್ನೂ ಓದಿ: RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹೈದರಾಬಾದ್​ಗೆ ಭರ್ಜರಿ ಗೆಲುವು; ಮುಂಬೈ ಹೀನಾಯ ಸೋಲಿಗೆ ಹಾರ್ದಿಕ್​ ಪಾಂಡ್ಯ ನಾಯಕತ್ವ ಕಾರಣ!

https://newsfirstlive.com/wp-content/uploads/2024/03/Hardik-Pandya-loss.jpg

Load More