newsfirstkannada.com

7 ಸಿಕ್ಸ್​, ಕೇವಲ 28 ಬಾಲ್​ನಲ್ಲಿ 61 ರನ್​ ಚಚ್ಚಿದ ಶರ್ಮಾ; ಮುಂಬೈ ವಿರುದ್ಧ ಪಂಜಾಬ್​ಗೆ ಸೋಲು

Share :

Published April 18, 2024 at 11:39pm

Update April 19, 2024 at 7:05am

    ಇಂದು ಪಂಜಾಬ್​ ಕಿಂಗ್ಸ್​​, ಮುಂಬೈ ಇಂಡಿಯನ್ಸ್​​ ಮಧ್ಯೆ ರೋಚಕ ಪಂದ್ಯ

    ಕೇವಲ 28 ಬಾಲ್​ನಲ್ಲಿ ಬರೋಬ್ಬರಿ 61 ರನ್​ ಸಿಡಿಸಿದ ಆಶುತೋಷ್​ ಶರ್ಮಾ

    ರೋಚಕ ಪಂದ್ಯದಲ್ಲಿ ಪಂಜಾಬ್​​​ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್​​

ಇಂದು ಚಂಡೀಗಡ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ  ಪಂಜಾಬ್​​​ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್​​ ತಂಡ ಗೆದ್ದು ಬೀಗಿದೆ.

ಮುಂಬೈ ಇಂಡಿಯನ್ಸ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಪಂಜಾಬ್​ ಕಿಂಗ್ಸ್​ ಮೊದಲ 4 ಓವರ್​ಗಳಲ್ಲೇ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಕ್ರೀಸ್​ಗೆ ಬಂದ ಶಂಶಾಕ್​ ಸಿಂಗ್​​ ​​ಕೇವಲ 25 ಬಾಲ್​​ನಲ್ಲಿ 41 ರನ್​​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿದ ಆಶುತೋಷ್​​ ​ಶರ್ಮಾ ಕೇವಲ 28 ಬಾಲ್​ನಲ್ಲಿ 7 ಸಿಕ್ಸರ್​​, 2 ಫೋರ್​ ಸಮೇತ 61 ರನ್​ ಚಚ್ಚಿದ. ಹರ್​ಪ್ರೀತ್​ 17 ರನ್​ ಗಳಿಸಿದ್ರೂ 9 ರನ್​ನಿಂದ ಸೋತರು.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ್ದ ಮುಂಬೈ ಇಂಡಿಯನ್ಸ್​ ಪರ ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ 53 ಬಾಲ್​ನಲ್ಲಿ 3 ಸಿಕ್ಸರ್​​, 7 ಫೋರ್​ ಸಮೇತ 78 ರನ್​ ಚಚ್ಚಿದ್ರು. ಇವರಿಗೆ ಸಾಥ್​ ನೀಡಿದ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ 36, ತಿಲಕ್​ ವರ್ಮಾ 34, ಹಾರ್ದಿಕ್​ ಪಾಂಡ್ಯ 10, ಟೀಮ್​ ಡೇವಿಡ್​ 14 ರನ್​ ಗಳಿಸಿದ್ರು. ಇವರ ಸಹಾಯದಿಂದ ಮುಂಬೈ ಇಂಡಿಯನ್ಸ್​​ 192 ರನ್​​ ಗಳಿಸಿ ಬಿಗ್​ ಟಾರ್ಗೆಟ್​ ನೀಡಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಬೀಳೋದು ಯಾವಾಗ? ರಾಜ್ಯ ಹವಾಮಾನ ಇಲಾಖೆ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 ಸಿಕ್ಸ್​, ಕೇವಲ 28 ಬಾಲ್​ನಲ್ಲಿ 61 ರನ್​ ಚಚ್ಚಿದ ಶರ್ಮಾ; ಮುಂಬೈ ವಿರುದ್ಧ ಪಂಜಾಬ್​ಗೆ ಸೋಲು

https://newsfirstlive.com/wp-content/uploads/2024/04/Aushotosh-Sharma.jpg

Load More