ಇಂದು ಮುಂಬೈ, ರಾಜಸ್ತಾನ್ ರಾಯಲ್ಸ್ ಮಧ್ಯೆ ಹೈವೋಲ್ಟೇಜ್ ಪಂದ್ಯ
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಸಂಪೂರ್ಣ ವೈಫಲ್ಯ!
ರಾಜಸ್ತಾನ್ ರಾಯಲ್ಗೆ ಮುಂಬೈ ಇಂಡಿಯನ್ಸ್ ಸಾಧಾರಣ ಟಾರ್ಗೆಟ್
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಗಳಿಸಿದೆ.
ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿತ್ತು. ಹೀಗಾಗಿ ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಬಿಗ್ ಸ್ಕೋರ್ ಕಲೆ ಹಾಕುವ ಭರದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮುಂಬೈ ಇಂಡಿಯನ್ಸ್ ಪರ ಓಪನರ್ ಆಗಿ ಬಂದ ರೋಹಿತ್ ಶರ್ಮಾ ಟ್ರೆಂಟ್ ಬೌಲ್ಟ್ ಮೊದಲನೇ ಓವರ್ನಲ್ಲೇ ಫಸ್ಟ್ ಬಾಲ್ಗೆ ಕ್ಯಾಚ್ ನೀಡಿ ಡಕೌಟ್ ಆದರು. ನಮನ್, ಬ್ರೆವೀಸ್ ಕೂಡ ಡಕೌಟ್ ಆದ್ರು. ಇಶಾನ್ ಕಿಶನ್ 1 ಸಿಕ್ಸರ್, 2 ಫೋರ್ ಸಮೇತ 16 ರನ್ ಸಿಡಿಸಿ ಕ್ಯಾಚ್ ಕೊಟ್ಟರು.
ಒಂದಷ್ಟು ಓವರ್ಗಳು ಕ್ರೀಸ್ನಲ್ಲಿ ನಿಂತು ಆಡಿದ ತಿಲಕ್ ವರ್ಮಾ 2 ಫೋರ್ ಸಮೇತ 32 ರನ್ ಗಳಿಸಿದ್ರು. ಹಾರ್ದಿಕ್ ಪಾಂಡ್ಯ 6 ಫೋರ್ ಸಮೇತ 34 ರನ್ ಬಾರಿಸಿದ್ರು. ಟೀಮ್ ಡೇವಿಡ್ 17, ಪಿಯೂಷ್ ಚಾವ್ಲಾ 3, ಗೆರಾಲ್ಡ್ 4, ಬೂಮ್ರಾ 8, ಆಕಾಶ್ 4 ರನ್ ಕಲೆ ಹಾಕಿದ್ರು.
ಇದನ್ನೂ ಓದಿ: ಮೊದಲ ಬಾಲ್ಗೆ ಡಕೌಟ್.. ರೋಹಿತ್ ಶರ್ಮಾ ವಿರುದ್ಧ ಭಾರೀ ಆಕ್ರೋಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ