/newsfirstlive-kannada/media/post_attachments/wp-content/uploads/2024/06/ICE_CREAM.jpg)
ಮುಂಬೈ: ಮಹಿಳೆಯೊಬ್ಬರು ಆನ್ಲೈನ್ ಮೂಲಕ ಆರ್ಡರ್ ಮಾಡಿ ಐಸ್ಕ್ರೀಮ್ ತರಿಸಿಕೊಂಡು ತಿನ್ನುವಾಗ ಅದರಲ್ಲಿ ಮನುಷ್ಯನ ಬೆರಳು ಬಾಯಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಮಹಿಳೆ ಗಾಬರಿಗೊಂಡಿದ್ದ್ದಾರೆ ಎನ್ನಲಾಗಿದ್ದು ಮಹಾರಾಷ್ಟ್ರದ ಮುಂಬೈ ಸಿಟಿಯ ಮಲಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: IPLನಲ್ಲಿ ಆರ್ಭಟಿಸಿದ್ದ ವಿರಾಟ್ ವಿಶ್ವಕಪ್ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?
ಮಹಿಳೆ Yummo ಐಸ್ ಕ್ರೀಮ್ ಕಂಪನಿಯಿಂದ ಆನ್ಲೈನ್ ಮೂಲಕ ಐಸ್ಕ್ರೀಮ್ ಆರ್ಡರ್ ಮಾಡಿ ತರಿಸಿಕೊಂಡಿದ್ದರು. ಅದರಂತೆ ಐಸ್ಕ್ರೀಮ್ ಡೆಲಿವರಿ ಮಾಡಿದ ಬಳಿಕ ತಿನ್ನುವಾಗ ಅದರಲ್ಲಿ ಮನುಷ್ಯನ ಕೈ ಬೆರಳು ಬಾಯಿಗೆ ಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ಒಂದು ಕ್ಷಣ ಶಾಕ್ ಆಗಿದ್ದಾರೆ. ತಕ್ಷಣ ಮಲಾಡ್ ಪ್ರದೇಶದ ಪೊಲೀಸ್ ಠಾಣೆಗೆ ತೆರಳಿ Yummo ಐಸ್ ಕ್ರೀಮ್ ಕಂಪನಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್ ಕೊಟ್ಟ ಪತ್ನಿ ವಿಜಯಲಕ್ಷ್ಮಿ
Gross !! ?
A woman found a human finger inside her Icecream cone which she ordered from Yummo Ice Cream, Malad, Mumbai.
FIR Lodged and police took finger for forensic investigation.
Beware of outside food ?pic.twitter.com/nyJ1S9l7fv
— Sunanda Roy ? (@SaffronSunanda)
Gross !! 🤢
A woman found a human finger inside her Icecream cone which she ordered from Yummo Ice Cream, Malad, Mumbai.
FIR Lodged and police took finger for forensic investigation.
Beware of outside food 😢pic.twitter.com/nyJ1S9l7fv— Sunanda Roy 👑 (@SaffronSunanda) June 13, 2024
">June 13, 2024
ಇನ್ನು ಪರೀಕ್ಷೆ ವೇಳೆ ಐಸ್ಕ್ರೀಮ್ನಲ್ಲಿ ಸಿಕ್ಕಿರುವುದು ಕೈ ಬೆರಳ ಅಥವಾ ಮಾನವನ ದೇಹದ ಇನ್ಯಾವುದಾದರು ಬೇರೆ ಅಂಗನಾ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರಿಯಾಗಿ ಗೊತ್ತಾಗದ ಕಾರಣ ಸದ್ಯ ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಐಸ್ ಕ್ರೀಮ್ ಹಾಗೂ ಐಸ್ ಕ್ರೀಮ್ನಲ್ಲಿ ಪತ್ತೆಯಾದ ಮನುಷ್ಯನ ಬೆರಳ ಎನ್ನಲಾದ ಅಂಗವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ