newsfirstkannada.com

ಐಸ್​ಕ್ರೀಮ್​​ ತಿನ್ನುವಾಗ ಬಾಯಿಗೆ ಬಂದ ಮನುಷ್ಯನ ಕೈಬೆರಳು.. ಫುಲ್ ಶಾಕ್ ಆದ ಮಹಿಳೆ

Share :

Published June 13, 2024 at 2:46pm

Update June 16, 2024 at 3:27pm

    ಯಾವ ಕಂಪನಿಯಿಂದ ಐಸ್​ಕ್ರೀಮ್ ತರಿಸಿಕೊಂಡಿದ್ದರು?

    ಐಸ್​ ತಿನ್ನುವಾಗ ಬಾಯಿಗೆ ಬಂತು ಮನುಷ್ಯನ ಕೈ ಬೆರಳು

    ಒಂದು ಕ್ಷಣ ಫುಲ್ ಶಾಕ್ ಆಗಿ ಗಾಬರಿಗೊಂಡ ಮಹಿಳೆ

ಮುಂಬೈ: ಮಹಿಳೆಯೊಬ್ಬರು ಆನ್​​ಲೈನ್​ ಮೂಲಕ ಆರ್ಡರ್ ಮಾಡಿ ಐಸ್​ಕ್ರೀಮ್​ ತರಿಸಿಕೊಂಡು ತಿನ್ನುವಾಗ ಅದರಲ್ಲಿ ಮನುಷ್ಯನ ಬೆರಳು ಬಾಯಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಮಹಿಳೆ ಗಾಬರಿಗೊಂಡಿದ್ದ್ದಾರೆ ಎನ್ನಲಾಗಿದ್ದು ಮಹಾರಾಷ್ಟ್ರದ ಮುಂಬೈ ಸಿಟಿಯ ಮಲಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ಮಹಿಳೆ Yummo ಐಸ್ ಕ್ರೀಮ್ ಕಂಪನಿಯಿಂದ ಆನ್​ಲೈನ್​ ಮೂಲಕ ಐಸ್​ಕ್ರೀಮ್ ಆರ್ಡರ್ ಮಾಡಿ ತರಿಸಿಕೊಂಡಿದ್ದರು. ಅದರಂತೆ ಐಸ್​ಕ್ರೀಮ್ ಡೆಲಿವರಿ ಮಾಡಿದ ಬಳಿಕ ತಿನ್ನುವಾಗ ಅದರಲ್ಲಿ ಮನುಷ್ಯನ ಕೈ ಬೆರಳು ಬಾಯಿಗೆ ಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ಒಂದು ಕ್ಷಣ ಶಾಕ್ ಆಗಿದ್ದಾರೆ. ತಕ್ಷಣ ಮಲಾಡ್ ಪ್ರದೇಶದ ಪೊಲೀಸ್​ ಠಾಣೆಗೆ ತೆರಳಿ Yummo ಐಸ್ ಕ್ರೀಮ್ ಕಂಪನಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ಇನ್ನು ಪರೀಕ್ಷೆ ವೇಳೆ ಐಸ್​​ಕ್ರೀಮ್​ನಲ್ಲಿ ಸಿಕ್ಕಿರುವುದು ಕೈ ಬೆರಳ ಅಥವಾ ಮಾನವನ ದೇಹದ ಇನ್ಯಾವುದಾದರು ಬೇರೆ ಅಂಗನಾ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರಿಯಾಗಿ ಗೊತ್ತಾಗದ ಕಾರಣ ಸದ್ಯ ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಐಸ್ ಕ್ರೀಮ್ ಹಾಗೂ ಐಸ್ ಕ್ರೀಮ್​ನಲ್ಲಿ ಪತ್ತೆಯಾದ ಮನುಷ್ಯನ ಬೆರಳ ಎನ್ನಲಾದ ಅಂಗವನ್ನು ಎಫ್​​ಎಸ್​ಎಲ್​ ವರದಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಸ್​ಕ್ರೀಮ್​​ ತಿನ್ನುವಾಗ ಬಾಯಿಗೆ ಬಂದ ಮನುಷ್ಯನ ಕೈಬೆರಳು.. ಫುಲ್ ಶಾಕ್ ಆದ ಮಹಿಳೆ

https://newsfirstlive.com/wp-content/uploads/2024/06/ICE_CREAM.jpg

Load More