newsfirstkannada.com

ಪ್ರೀತ್ಸೆ ಅಂತ ಮಗಳ ಹಿಂದೆ ಬಿದ್ದಿದ್ದವನ ಕೊಲೆ ಮಾಡಿದ ಅಪ್ಪ; ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸಿದ ಮರ್ಡರ್‌

Share :

Published May 8, 2024 at 5:13pm

Update May 8, 2024 at 5:20pm

  ಮಗಳ ತಂಟೆಗೆ ಬರಬೇಡ ಎಂದು ಯುವಕನಿಗೆ ವಾರ್ನ್ ಮಾಡಿದ್ದ ತಂದೆ

  ಪ್ರೀತಿಸುವಂತೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನ ಕೊಲೆ

  ಕೊಲೆ ಮಾಡಿ ಎಸ್ಕೇಪ್ ಆದ​ ಫಕೀರಪ್ಪ ಭಾಂವಿಹಾಳ ಬಂಧನಕ್ಕೆ ಹುಡುಕಾಟ

ಬೆಳಗಾವಿ: ಪ್ರೀತಿಸುವಂತೆ ಬೆನ್ನು ಬಿದ್ದ ಯುವಕ ಹಾಗೂ ಆತನ ಸಹೋದರನನ್ನು ಬರ್ಬರ ಹತ್ಯೆ ಮಾಡಿರೋ ಘಟನೆ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ. ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಹಾಗೂ ಮಾಯಪ್ಪ ಹಳೇಗೋಡಿ (22) ಕೊಲೆಯಾದ ಯುವಕರು.

ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಎಂಬಾತ ಈ ಇಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ಯಲ್ಲಪ್ಪ ಹಳೇಗೋಡಿ ಆರೋಪಿ ಫಕೀರಪ್ಪನ‌ ಪುತ್ರಿಯನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದನಂತೆ. ಹೀಗಾಗಿ ನನ್ನ ಪುತ್ರಿಯ ತಂಟೆಗೆ ಬರಬೇಡ ಎಂದು ಯುವಕನಿಗೆ ವಾರ್ನ್ ಮಾಡಲು ತಂದೆ ಫಕೀರಪ್ಪ ಹೋಗಿದ್ದ. ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ಹಳೇಗೋಡಿ ಮಧ್ಯೆ ವಾಗ್ವಾದ ನಡೆದಿದೆ. ಇದೇ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ‘ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ 3-4 ಆತ್ಮಹತ್ಯೆ’- ಸ್ಫೋಟಕ ಮಾಹಿತಿ ಬಿಚ್ಚಿಟ್ಟ JDS ನಾಯಕ

ಇದೇ ಗಲಾಟೆಯಲ್ಲಿ ಯುವತಿ ತಂದೆ ಫಕೀರಪ್ಪ ಯಲ್ಲಪ್ಪ ಹಳೇಗೋಡಿಗೆ ಚಾಕುವಿನಿಂದ ಇರಿದಿದ್ದಾನೆ. ಯಲ್ಲಪ್ಪನನ್ನು‌ ಬಿಡಿಸಿಕೊಳ್ಳಲು ಬಂದ ಸಹೋದರ ಮಾಯಪ್ಪನಿಗೂ ಫಕೀರಪ್ಪ ಚಾಕುವಿನಿಂದ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ಯಲ್ಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಿಕಿತ್ಸೆ ‌ಫಲಿಸದೇ ಆಸ್ಪತ್ರೆಯಲ್ಲಿ ‌ಮಾಯಪ್ಪ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ‌ರಾಮದುರ್ಗ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬಳಿಕ ಆರೋಪಿ ಫಕೀರಪ್ಪ ಭಾಂವಿಹಾಳ ಪರಾರಿಯಾಗಿದ್ದಾನೆ. ಎಸ್ಕೇಪ್​ ಆಗಿರೋ ಫಕೀರಪ್ಪ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತ್ಸೆ ಅಂತ ಮಗಳ ಹಿಂದೆ ಬಿದ್ದಿದ್ದವನ ಕೊಲೆ ಮಾಡಿದ ಅಪ್ಪ; ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸಿದ ಮರ್ಡರ್‌

https://newsfirstlive.com/wp-content/uploads/2024/04/LOVE.jpg

Load More