Advertisment

ಯುವ ಬ್ಯಾಟರ್​​ಗೆ ರಸ್ತೆ ಅಪಘಾತ; ಟೀಮ್​ ಇಂಡಿಯಾಗೆ ಬಿಗ್​ ಶಾಕ್​​

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್; R ಅಶ್ವಿನ್​ ಬೆನ್ನಲ್ಲೇ ದಿಢೀರ್​​ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್
Advertisment
  • ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ ಸರ್ಫರಾಜ್ ಖಾನ್..!
  • ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್​ಗೆ ಅಪಘಾತ
  • ಭಾರತ ಕ್ರಿಕೆಟ್​ ತಂಡಕ್ಕೆ ಬಿಗ್​ ಶಾಕ್​ ಕೊಟ್ಟ ಯುವ ಬ್ಯಾಟರ್​​​

ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಭೀಕರ ರಸ್ತೆ ಅಪಘಾತಕ್ಕೆ ಈಡಾಗಿದ್ದಾರೆ. ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡ ಇವರು ಇರಾನಿ ಕಪ್‌ನಿಂದ ದೂರ ಸರೆದಿದ್ದಾರೆ.

Advertisment

ಮುಶೀರ್ ತನ್ನ ತಂದೆ ನೌಶಾದ್ ಖಾನ್‌ ಅವರೊಂದಿಗೆ ಇರಾನಿ ಕಪ್ ಕ್ರಿಕೆಟ್ ಟೂರ್ನಿಗಾಗಿ ಲಕ್ನೋಗೆ ಪ್ರಯಾಣ ಬೆಳೆಸಿದ್ದರು. ಲಕ್ನೋಗೆ ಹೋಗುವ ಮಾರ್ಗ ಮಧ್ಯೆ ಹೈವೇನಲ್ಲಿ ಅಪಘಾತ ಸಂಭವಿಸಿದೆ. ಆ್ಯಕ್ಸಿಡೆಂಟ್​ನಿಂದ ಮುಶೀರ್​​​ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ತಂದೆಗೆ ಸಣ್ಣ ಪುಟ್ಟ ಗಾಯಗಳು ಆಗಿವೆ.

publive-image

ಮುಶೀರ್‌ಗೆ 4 ತಿಂಗಳು ರೆಸ್ಟ್​​

ಇನ್ನು, ಅಪಘಾತದ ಬೆನ್ನಲ್ಲೇ ಮುಶೀನ್​ ಖಾನ್​ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಶೀರ್​ ಖಾನ್​​ ಗುಣಮುಖರಾಗಲು ಕನಿಷ್ಠ 4 ತಿಂಗಳು ವಿಶ್ರಾಂತಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಕುತ್ತಿಗೆ ಭಾಗದಲ್ಲಿ ಮುಶೀರ್‌ಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆದುಕೊಂಡು ಹೋಗಲಿದ್ದಾರೆ.

ಮುಶೀರ್​ ಗಾಯ ಟೀಮ್​ ಇಂಡಿಯಾಗೆ ದೊಡ್ಡ ಆಘಾತ ನೀಡಿದೆ. ದುಲೀಪ್‌ ಟ್ರೋಫಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮುಶೀರ್‌ ಮೊದಲ ಪಂದ್ಯದಲ್ಲೇ 181 ರನ್‌ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಭರ್ಜರಿ ಫಾರ್ಮ್‌ನಲ್ಲಿದ್ದರು. ಇವರ ಭರ್ಜರಿ ಆಟದ ನೆರವಿನಿಂದ ಭಾರತ ಬಿ ತಂಡ 76 ರನ್‌ಗಳಿಂದ ಭಾರತ ಎ ತಂಡವನ್ನು ಮಣಿಸಿತ್ತು. ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾಗೆ ಮುಶೀರ್​​ ಖಾನ್​ ಅವರನ್ನು ಆಯ್ಕೆ ಮಾಡಬೇಕಿತ್ತು. ಈ ಹೊತ್ತಲ್ಲೇ ಟೀಮ್​ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ.

Advertisment

ಇದನ್ನೂ ಓದಿ:ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment