ಇರಾನಿ ಟ್ರೋಫಿ ಮಿಸ್ ಮಾಡಿಕೊಂಡ ಯಂಗ್ ಕ್ರಿಕೆಟರ್
ತಂದೆ ಜೊತೆ ಹೋಗುವಾಗ ಮುಶೀರ್ ಖಾನ್ಗೆ ಅಪಘಾತ
ಮುಶೀರ್ ಹೋಗುತ್ತಿದ್ದ ಕಾರು 3-4 ಬಾರಿ ಪಲ್ಟಿ ಆಯಿತಾ?
ಯುವ ಆಟಗಾರ ಸರ್ಫರಾಜ್ ಖಾನ್ ಅವರ ಸಹೋದರ ಯಂಗ್ ಕ್ರಿಕಟರ್ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್ ರಿಟೈನ್.. ಫ್ರಾಂಚೈಸಿಯಿಂದ ಕ್ಯಾಪ್ಟನ್ಗೆ ಬಿಗ್ ಶಾಕ್?
ಮುಶೀರ್ ಖಾನ್ ಹಾಗೂ ಅವರ ತಂದೆ ಉತ್ತರ ಪ್ರದೇಶದಲ್ಲಿನ ಕಾನ್ಪುರದಿಂದ ಲಕ್ನೋಗೆ ಕಾರಿನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮುಶೀರ್ ಖಾನ್, ತಂದೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು 3-4 ಬಾರಿ ಪಲ್ಟಿ ಆಗಿದ್ದರಿಂದ ಮುಶೀರ್ ಖಾನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿ ಹೇಳುತ್ತದೆ. ಆದರೆ ನಿಖರ ಮಾಹಿತಿ ಇಲ್ಲ. ಸದ್ಯ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ಅಕ್ಟೋಬರ್ 1 ರಿಂದ ನಡೆಯುವ ಇರಾನಿ ಟ್ರೋಫಿಗೆ ಆಯ್ಕೆ ಆಗಿದ್ದ ಮುಶೀರ್ ಖಾನ್, ಇನ್ನೇನು ಅಭ್ಯಾಸಕ್ಕೆ ಮರಳಬೇಕಿತ್ತು. ಅಲ್ಲದೇ ಮುಂಬರುವ 2024-25ರ ರಣಜಿ ಟ್ರೋಫಿಗೂ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗಷ್ಟೇ ನಡೆದಿದ್ದ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬಿ ತಂಡದಲ್ಲಿ 181 ರನ್ಗಳನ್ನು ಸಿಡಿಸಿ ತಂಡದ ಗೆಲುವಿಗೆ ಮುಶೀರ್ ಖಾನ್ ಕಾರಣನಾಗಿದ್ದನು. ಇನ್ನು ಮುಶೀರ್ ಖಾನ್ ಅಪಘಾತದ ಕುರಿತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ