newsfirstkannada.com

ದುಲೀಪ್​ ಟ್ರೋಫಿಯಲ್ಲಿ ಮುಷೀರ್​​ ಶತಕ ವೈಭವ; ಪಡಿಕ್ಕಲ್ ಹಿಂಗೆ ಆಡಿದ್ರೆ RCB ಕ್ಯಾರೇ ಮಾಡಲ್ಲ..!

Share :

Published September 6, 2024 at 11:16am

Update September 6, 2024 at 2:25pm

    ಫ್ಲಾಪ್​​ ಶೋ ನೀಡಿದ ರಿಷಭ್​ ಪಂತ್​, ಸರ್ಫರಾಜ್​

    ಅನಂತಪುರಂನಲ್ಲಿ ಬೌಲರ್​​ಗಳ ಬೊಂಬಾಟ್​ ಆಟ

    ನಿರಾಸೆ ಮೂಡಿಸಿದ ಶ್ರೇಯಸ್​ ಅಯ್ಯರ್​, ಪಡಿಕ್ಕಲ್

ಬಹು ನಿರೀಕ್ಷಿತ ದುಲೀಪ್​ ಟ್ರೋಫಿ ಟೂರ್ನಿ ನಿನ್ನೆಯಿಂದ ಆರಂಭವಾಗಿದೆ. ಟೂರ್ನಿಯ ಆರಂಭಕ್ಕೂ ಮುನ್ನ ಸೆಂಟರ್​ ಆಫ್​ ಅಟ್ರಾಕ್ಷನ್​ ಅನಿಸಿಕೊಂಡಿದ್ದ ಸ್ಟಾರ್​​ಗಳೆಲ್ಲಾ ಮಕಾಡೆ ಮಲಗಿದ್ರೆ, ಯಂಗ್​​ಸ್ಟರ್​​ಗಳ ಆರ್ಭಟಿಸಿದ್ದಾರೆ.

ಆರಂಭದಲ್ಲಿ ‘ಎ’ ತಂಡದ ಬೌಲರ್​​ಗಳ ದರ್ಬಾರ್​.!
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಬಿ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ಇಂಡಿಯಾ ಎ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಬೌಲಿಂಗ್​ ಆಯ್ದು ಕೊಂಡ್ರು. ಮೊದಲು ಬ್ಯಾಟಿಂಗ್​ಗಿಳಿದ ಇಂಡಿಯಾ ಬಿ ತಂಡ ಬೌಲರ್​ಗಳ ದಾಳಿಗೆ ನಲುಗಿತು. ತಂಡದ ಸ್ಟಾರ್​ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್, ಸರ್ಫರಾಜ್​ ಖಾನ್​, ರಿಷಭ್​ ಪಂತ್​​​ ನಿರಾಸೆ ಮೂಡಿಸಿದ್ರು. 94 ರನ್​ಗಳಿಸುವಷ್ಟರಲ್ಲೇ ಬಿ ತಂಡದ 7 ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಸೇರಿದ್ರು.

ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್

ಮುಷೀರ್ ಖಾನ್​​ ಶತಕ ವೈಭವ
ತಂಡ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ಮುಷೀರ್​ ಖಾನ್​​ ಸಾಲಿಡ್​​ ಇನ್ನಿಂಗ್ಸ್​​ ಕಟ್ಟಿದ್ರು. 8ನೇ ವಿಕೆಟ್​ಗೆ ನವ್​​ದೀಪ್​ ಸೈನಿ ಜೊತೆಗೆ ಅಜೇಯ 108 ರನ್​ಗಳ ಜೊತೆಯಾಟವಾಡಿದ್ರು. ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ಟಿದ್ದ ಮುಷೀರ್​ ಖಾನ್​ ಮನಮೋಹಕ ಸೆಂಚುರಿ ಸಿಡಿಸಿದ್ರು. ಮುಷೀರ್​​ ಖಾನ್​ ಸೆಂಚುರಿ ನೆರವಿನೊಂದಿಗೆ ಇಂಡಿಯಾ ಬಿ ತಂಡ ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 202 ರನ್​ ಕಲೆ ಹಾಕಿದೆ. 105 ರನ್​ಗಳೊಂದಿಗೆ ಮುಷೀರ್​ ಖಾನ್​, 29 ರನ್​ಗಳೊಂದಿಗೆ ನವ್​ದೀಪ್​ ಸೈನಿ 2ನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಅನಂತಪುರಂನಲ್ಲಿ ಬೌಲರ್​​ಗಳ ಬೊಂಬಾಟ್​ ಆಟ
ಅನಂತಪುರಂನಲ್ಲಿ ನಡೆಯುತ್ತಿರೋ ಮತ್ತೊಂದು ಪಂದ್ಯದಲ್ಲಿ ಬೌಲರ್​​ಗಳು ದರ್ಬಾರ್​ ನಡೆಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಇಂಡಿಯಾ ಡಿ ತಂಡ, ಇಂಡಿಯಾ ಸಿ ಬೌಲರ್​​ಗಳ ಆರ್ಭಟದ ಎದುರು ನಲುಗಿತು. ಟಾಪ್​ ಆರ್ಡರ್​ ಬ್ಯಾಟರ್​​ಗಳೆಲ್ಲಾ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. 76 ರನ್​ಗಳಿಸುಷ್ಟರಲ್ಲೇ 8 ವಿಕೆಟ್​​ಗಳು ಉರುಳಿದ್ವು.

ನಿರಾಸೆ ಮೂಡಿಸಿದ ಶ್ರೇಯಸ್​ ಅಯ್ಯರ್​, ಪಡಿಕ್ಕಲ್​​
ಕುಸಿಯುತ್ತಿದ್ದ ತಂಡಕ್ಕೆ ಸ್ಟಾರ್​​ಗಳಾದ ಶ್ರೇಯಸ್​ ಅಯ್ಯರ್​, ದೇವದತ್ತ್​ ಪಡಿಕ್ಕಲ್​ ಕೂಡ ಆಸರೆಯಾಗಲಿಲ್ಲ. ಫ್ಲಾಪ್​ ಶೋ ನೀಡಿ ನಿರ್ಗಮಿಸಿದ್ರು. ಇಂಡಿಯಾ ಸಿ ಪರ ಆಡ್ತಿರೋ ಕನ್ನಡಿಗ ವೈಶಾಕ್​ ವಿಜಯ್​ ಕುಮಾರ್​ ಬೊಂಬಾಟ್​ ಪ್ರದರ್ಶನ ನೀಡಿದ್ರು. ಸಾಲಿಡ್​ ಸ್ಪೆಲ್​ ಹಾಕಿದ ವೈಶಾಕ್​, ಶ್ರೇಯಸ್​, ಪಡಿಕ್ಕಲ್​ಗೆ ಗೇಟ್​​ಪಾಸ್​​ ನೀಡಿದ್ರು. ಪಡಿಕಲ್ ಸೊನ್ನೆ ಸುತ್ತಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ. ಅದಕ್ಕೂ ಮೊದಲು ಮೆಗಾ ಆಕ್ಷನ್ ನಡೆಯಲಿದೆ. ಈ ವೇಳೆ ಪಡಿಕ್ಕಲ್ ಅವರನ್ನು ಆರ್​ಸಿಬಿ ಖರೀದಿ ಮಾಡಬೇಕು ಅನ್ನೋದು ಅಭಿಮಾನಿಗಳ ಒತ್ತಾಯ. ಆದರೆ ಪಡಿಕ್ಕಲ್ ಹೀಗೆ ಆಡಿದರೆ ಅವರನ್ನು ಆರ್​ಸಿಬಿ ಖರೀದಿಸಲು ಪ್ಲಾನ್ ಮಾಡಲ್ಲ ಅಂತಾ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಈ 5 ದಿಗ್ಗಜರಿಗೆ ಟೀಂ ಇಂಡಿಯಾದ ಡೋರ್ ಕ್ಲೋಸ್; ಕ್ರಿಕೆಟ್ ವೃತ್ತಿ ಬದುಕು ಬಹುತೇಕ ಅಂತ್ಯ

ಅಕ್ಷರ್​ ಪಟೇಲ್​ ದಿಟ್ಟ ಹೋರಾಟ ತಂಡಕ್ಕೆ ಚೇತರಿಕೆ.!
7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲ್​​ರೌಂಡರ್​ ಅಕ್ಷರ್​ ಪಟೇಲ್​ ದಿಟ್ಟ ಹೋರಾಟ ನಡೆಸಿದ್ರು. ಬೌಲರ್​ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿ 86 ರನ್​ಗಳ ಕಾಣಿಕೆ ನೀಡಿದ್ರು. ಅಕ್ಷರ್​ ಪಟೇಲ್​ ಹೋರಾಟದ ಇನ್ನಿಂಗ್ಸ್​ನ ನೆರವಿನಿಂದ ಇಂಡಿಯಾ ಡಿ ಅಂತಿಮವಾಗಿ 160 ರನ್​ಗಳಿಸಿತು. ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಇಂಡಿಯಾ ಸಿ ಕೂಡ ಆಘಾತ ಎದುರಿಸಿದೆ. ಇನ್ನಿಂಗ್ಸ್​ ಆರಂಭದಲ್ಲೇ ನಾಯಕ ಋತುರಾಜ್​ ಗಾಯಕ್ವಾಡ್​, ಸಾಯಿ ಸುದರ್ಶನ್​ಗೆ ಹರ್ಷಿತ್​ ರಾಣಾ ಪೆವಿಲಿಯನ್​ ದಾರಿ ತೋರಿಸಿದ್ರು. ಆರ್ಯನ್​ ಜುಯಾಲ್​, ರಜತ್​ ಪಟಿದಾರ್​ ಅಕ್ಷರ್​ ಪಟೇಲ್​​ಗೆ ಬಲಿಯಾದ್ರು. ಅಂತಿಮವಾಗಿ ಮೊದಲ ದಿನ ಅಂತ್ಯಕ್ಕೆ ಇಂಡಿಯಾ ಸಿ 2 ವಿಕೆಟ್​ ನಷ್ಟಕ್ಕೆ 14 ರನ್​ಗಳಿಸಿದ್ದು, 150 ರನ್​ಗಳಿಂದ ಹಿನ್ನಡೆಯಲ್ಲಿದೆ.

ಇದನ್ನೂ ಓದಿ:ಅರಮನೆಯ ಗೋಡೆಯೂ ಚಿನ್ನ, ವಿಮಾನವೂ ಚಿನ್ನ.. ಮೋದಿ ಭೇಟಿಯಾಗ್ತಿರುವ ಸುಲ್ತಾನನ ಜೀವನ ಅಬ್ಬಬ್ಬಾ! Photos

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದುಲೀಪ್​ ಟ್ರೋಫಿಯಲ್ಲಿ ಮುಷೀರ್​​ ಶತಕ ವೈಭವ; ಪಡಿಕ್ಕಲ್ ಹಿಂಗೆ ಆಡಿದ್ರೆ RCB ಕ್ಯಾರೇ ಮಾಡಲ್ಲ..!

https://newsfirstlive.com/wp-content/uploads/2024/09/DEVADTTA-PADIKKAL.jpg

Load More